Tag: ಅಂಕಿತ ಅಮರ್

  • ಸ್ಯಾಂಡಲ್‌ವುಡ್‌ಗೆ ದಕ್ಷಿಣದ ಹೆಸರಾಂತ ನಟ ಶ್ರೀಮನ್ ಎಂಟ್ರಿ

    ಸ್ಯಾಂಡಲ್‌ವುಡ್‌ಗೆ ದಕ್ಷಿಣದ ಹೆಸರಾಂತ ನಟ ಶ್ರೀಮನ್ ಎಂಟ್ರಿ

    ಭಾರತದ ಜನಪ್ರಿಯ ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್.ಬಾಬಿ ನಿರ್ಮಿಸಿರುವ, ಸಿ.ಆರ್.ಬಾಬಿ ಅವರೇ ಮೊದಲ ಬಾರಿಗೆ ನಿರ್ದೇಶಿಸಿರುವ ಹಾಗೂ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ (Shine Shetty) ಹಾಗೂ ಅಂಕಿತ ಅಮರ್ (Ankita Amar) ನಾಯಕ-ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ ಜಸ್ಟ್ ಮ್ಯಾರೀಡ್ (Just Married) ಚಿತ್ರದಲ್ಲಿ ಕನ್ನಡ ಹಾಗೂ ಭಾರತೀಯ ಚಿತ್ರರಂಗದ ಹೆಸರಾಂತ ಕಲಾವಿದರು ಅಭಿನಯಿಸಿದ್ದಾರೆ. ಇದನ್ನೂ ಓದಿ: ನನ್ನ ಹಂಸಲೇಖ ನಡುವೆ ಮನಸ್ತಾಪ ಯಾಕೆ ಗೊತ್ತಾ – ಕ್ರೇಜಿಸ್ಟಾರ್ ಮನದಾಳ

    ತೆಲುಗು, ತಮಿಳು ಭಾಷೆಗಳ ಅನೇಕ ಜನಪ್ರಿಯ ಚಿತ್ರಗಳಲ್ಲಿ ನಟಿಸಿ ಜನಮನಸೂರೆಗೊಂಡಿರುವ ದಕ್ಷಿಣ ಭಾರತದ ಜನಪ್ರಿಯ ನಟ ಶ್ರೀಮನ್ (Sriman) ಅವರು ಸಹ ಜಸ್ಟ್ ಮ್ಯಾರೀಡ್ ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿಶುಪಾಲ ಪಾತ್ರದಲ್ಲಿ ಶ್ರೀಮನ್ ಅವರು ಅಭಿನಯಿಸಿದ್ದು, ಅವರ ಪಾತ್ರ ಪರಿಚಯದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

    ಇತ್ತೀಚೆಗಷ್ಟೇ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಪಾತ್ರದ ಕುರಿತು ಸಹ ಚಿತ್ರತಂಡ ಮಾಹಿತಿ ನೀಡಿತ್ತು. ಭಾರತೀಯ ಚಿತ್ರರಂಗದ ಜನಪ್ರಿಯ ಹಾಗೂ ಅನುಭವಿ ಕಲಾವಿದರು ಸಂಗಮದಲ್ಲಿ ಮೂಡಿಬಂದಿರುವ ಜಸ್ಟ್ ಮ್ಯಾರೀಡ್ ಚಿತ್ರವನ್ನು ಆದಷ್ಟು ಬೇಗ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

  • ಶೈನ್-ಅಂಕಿತಾ ಸಿನಿಮಾಗೆ ನಟ ದೇವರಾಜ್ ಎಂಟ್ರಿ

    ಶೈನ್-ಅಂಕಿತಾ ಸಿನಿಮಾಗೆ ನಟ ದೇವರಾಜ್ ಎಂಟ್ರಿ

    ಜನೀಶ್ ಲೋಕನಾಥ್ ಜೊತೆ ಸೇರಿ ಸಿ.ಆರ್.ಬಾಬಿ ನಿರ್ಮಿಸಿ, ನಿರ್ದೇಶನ ಮಾಡಿರುವ, ಬಿಗ್‌ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಬಹುನಿರೀಕ್ಷಿತ “ಜಸ್ಟ್ ಮ್ಯಾರೀಡ್” (Just Married) ಚಿತ್ರ ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದೆ.

    ಕನ್ನಡ ಚಿತ್ರರಂಗದ ಸಾಕಷ್ಟು ಅನುಭವಿ ಹಾಗೂ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆ ಪೈಕಿ ತಮ್ಮ ಅಮೋಘ ಅಭಿನಯದಿಂದ ಅಭಿಮಾನಿಗಳ ಮನಗೆದ್ದಿರುವ ಡೈನಾಮಿಕ್ ಸ್ಟಾರ್ ದೇವರಾಜ್ (Devaraj) ಅವರು ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ.ಇದನ್ನೂ ಓದಿ: Mysuru | ಅಣ್ಣಾವ್ರ `ಕಾಮನಬಿಲ್ಲು’ ಶೂಟ್ ಆದ ಜಾಗದಲ್ಲೇ ರಜನಿ ಸಿನಿಮಾ

    ದೇವರಾಜ್ ಅವರು ನಿವೃತ್ತ ನ್ಯಾಯಾಧೀಶರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೂರ್ಣಚಂದ್ರ ಇವರ ಪಾತ್ರದ ಹೆಸರು. “ಕರ್ತವ್ಯದಲ್ಲಿ ನ್ಯಾಯಾಧೀಶ, ಸ್ವಭಾವದಲ್ಲಿ ರಕ್ಷಕ ನ್ಯಾಯಾಲಯದಲ್ಲಾದರೂ ಮನೆಯಲ್ಲಾದರೂ ಕಾನೂನು ಸದಾ ಪಾಲನೆ ಆಗುತ್ತದೆ. ನ್ಯಾಯವು ಕೇವಲ ಉದ್ಯೋಗವಲ್ಲ, ಅದು ಬದುಕಿನ ಶೈಲಿ” ಎಂಬ ವಾಕ್ಯಗಳೊಂದಿಗೆ ದೇವರಾಜ್ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

    “ಜಸ್ಟ್ ಮ್ಯಾರೀಡ್” ಪ್ರೇಮಕಥೆಯ ಚಿತ್ರವಾಗಿದ್ದರೂ, ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳು ಹೊಂದಿದೆ. ಸಿ.ಆರ್ ಬಾಬಿ ಅವರೆ ಕಥೆ ಬರೆದಿದ್ದು, ಚಿತ್ರಕಥೆ ಸಿ.ಆರ್ ಬಾಬಿ ಹಾಗೂ ಧನಂಜಯ್ ರಂಜನ್ ಅವರದು. ರಘು ನಿಡುವಳ್ಳಿ ಈ ಚಿತ್ರದ ಸಂಭಾಷಣೆಕಾರರು.

    ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ, ಪಿಜಿ ಅವರ ಛಾಯಾಗ್ರಹಣ, ಶ್ರೀಕಾಂತ್ ಮತ್ತು ಪ್ರತೀಕ್ ಅವರ ಸಂಕಲನ., ಅಮರ್ ಅವರ ಕಲಾ ನಿರ್ದೇಶನ, ವಿಕ್ರಮ್ ಮೋರ್ ಅವರ ಸಾಹಸ ನಿರ್ದೇಶನ ಹಾಗೂ ಬಾಬಾ ಭಾಸ್ಕರ್, ಶಾಂತಿ ಅರವಿಂದ್ ಅವರ ನೃತ್ಯ ನಿರ್ದೇಶನವಿರುವ “ಜಸ್ಟ್ ಮ್ಯಾರಿಡ್” ಚಿತ್ರದ ಹಾಡುಗಳನ್ನು ಕೆ.ಕಲ್ಯಾಣ್, ಡಾ.ವಿ ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ನಾಗರ್ಜುನ ಶರ್ಮ ಮತ್ತು ಧನಂಜಯ್ ರಂಜನ್ ಬರೆದಿದ್ದಾರೆ.ಇದನ್ನೂ ಓದಿ: ಯಶ್ ತಾಯಿ ನಿರ್ಮಾಣದ ಕೊತ್ತಲವಾಡಿ ರಿಲೀಸ್ ಡೇಟ್ ಫಿಕ್ಸ್