Tag: ಅಂಕಿತಾ ಲೋಕಂಡೆ

  • ಸಾವರ್ಕರ್ ಪತ್ನಿ ಪಾತ್ರದಲ್ಲಿ ಬಿಗ್ ಬಾಸ್ ಸ್ಪರ್ಧಿ ಅಂಕಿತಾ

    ಸಾವರ್ಕರ್ ಪತ್ನಿ ಪಾತ್ರದಲ್ಲಿ ಬಿಗ್ ಬಾಸ್ ಸ್ಪರ್ಧಿ ಅಂಕಿತಾ

    ಬಾಲಿವುಡ್ ನಲ್ಲಿ ಮೂಡಿ ಬರುತ್ತಿರುವ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾದ ಪ್ರೊಮೋ ರಿಲೀಸ್ ಆಗಿದ್ದು, ಸಾರ್ವಕರ್ ಪತ್ನಿಯಾಗಿ ಬಿಗ್ ಬಾಸ್ ಸ್ಪರ್ಧಿ ಅಂಕಿತಾ ಲೋಕಂಡೆ  (Ankita Lokande) ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ರಣದೀಪ್ ಹೂಡಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅವರೇ ಸಾವರ್ಕರ್ ಪಾತ್ರವನ್ನೂ ನಿರ್ವಹಿಸಿದ್ದಾರೆ.

    ಈ ನಡುವೆ ಸಿನಿಮಾ ಬಗ್ಗೆ ಅಪಸ್ವರ ಕೇಳಿ ಬಂದಿದೆ. ನಿರ್ದೇಶಕರ ವಿರುದ್ಧ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhash Chandra Bose) ಕುಟುಂಬ ಅಸಮಾಧಾನಗೊಂಡಿದೆ. ರಣದೀಪ್ ನಿರ್ದೇಶಿಸಿ, ನಟಿಸುತ್ತಿರುವ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾದ ಕುರಿತಾದ ಪೋಸ್ಟರ್ ನಲ್ಲಿ ನೇತಾಜಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ನೇತಾಜಿ ಮರಿ ಮೊಮ್ಮಗ ಚಂದ್ರಕುಮಾರ್ ಬೋಸ್ (Chandrakumar Bose) ಗರಂ ಆಗಿದ್ದಾರೆ.

    ಸಾವರ್ಕರ್ (Veer Savarkar) ಹುಟ್ಟು ಹಬ್ಬದ ದಿನದಂದು ರಣದೀಪ್ ತಮ್ಮ ಸಿನಿಮಾದ ಪೋಸ್ಟರ್ ನ್ನು ಹಂಚಿಕೊಂಡಿದ್ದರು. ಆ ಪೋಸ್ಟರ್ ಪೋಸ್ಟ್ ಮಾಡುವಾಗ ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಹಾಗೂ ಖುದಿರಾಮ್ ಬೋಸ್ ಇವರೆಲ್ಲರಿಗೂ ಸಾವರ್ಕರ್ ಸ್ಫೂರ್ತಿಯಾಗಿದ್ದರು ಎನ್ನುವ ಅರ್ಥದಲ್ಲಿ ಬರೆದಿದ್ದರು. ಈ ಬರಹವೇ ನೇತಾಜಿ ಕುಟುಂಬಕ್ಕೆ ಕೋಪ ತರಿಸಿದೆ.

    ನೇತಾಜಿ ಮರಿ ಮೊಮ್ಮಗ ಈ ಕುರಿತು ಮಾತನಾಡಿ, ‘ಸುಳ್ಳು ಇತಿಹಾಸವನ್ನು ಯಾರೂ ಹೇಳಬಾರದು. ಸಾವರ್ಕರ್ ಸಿದ್ಧಾಂತಕ್ಕೆ ನೇತಾಜಿ ವಿರೋಧಿಯಾಗಿದ್ದರು. ನೇತಾಜಿ ಜಾತ್ಯಾತೀತ  ಗುಣಗಳನ್ನು ಹೊಂದಿದವರು. ನಿಮ್ಮ ಸಿನಿಮಾ ಪ್ರಚಾರಕ್ಕೆ, ಗಿಮಿಕ್ ಗಾಗಿ ಸುಳ್ಳು ಹೇಳಬೇಡಿ. ಸತ್ಯವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿ. ಇಲ್ಲವೇ ಸುಮ್ಮನಿದ್ದು ಬಿಡಿ’ ಎಂದು ಹೇಳಿದ್ದಾರೆ.

     

    ನೇತಾಜಿಗೆ ಪ್ರೇರಣೆ ಕಂಡಿತಾ ಸಾವರ್ಕರ್ ಅಲ್ಲ. ಅವರಿಗೆ ಪ್ರೇರಣೆ ಸ್ವಾಮಿ ವಿವೇಕಾನಂದರು. ಅವರು ಅಧ್ಯಾತ್ಮದ ಗುರು ಕೂಡ ಆಗಿದ್ದರು. ಮತ್ತೊಬ್ಬರು ಸ್ವಾತಂತ್ರ್ಯ ಹೋರಾಟಗಾರ ದೇಶಬಂಧು ಚಿತ್ತರಂಜನ್ ದಾಸ್. ಇವರ ಹೊರತಾಗಿ ಯಾರೂ ಅವರಿಗೆ ಸ್ಫೂರ್ತಿ ಆಗಿರಲಿಲ್ಲವೆಂದು ನೇತಾಜಿ ಮರಿಮೊಮ್ಮಗ ಹೇಳಿದ್ದಾರೆ. ಸಾವರ್ಕರ್ ಅವರನ್ನು ನೇತಾಜಿ ವಿರೋಧಿಸುತ್ತಲೇ ಬಂದಿದ್ದರು ಎಂದು ಗಟ್ಟಿಯಾಗಿ ಹೇಳಿದ್ದಾರೆ.

  • ಸುಶಾಂತ್ ನಿಧನದ 1 ತಿಂಗಳ ಬಳಿಕ ಅಂಕಿತಾ ಫೋಟೋ ಪೋಸ್ಟ್

    ಸುಶಾಂತ್ ನಿಧನದ 1 ತಿಂಗಳ ಬಳಿಕ ಅಂಕಿತಾ ಫೋಟೋ ಪೋಸ್ಟ್

    ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ಒಂದು ತಿಂಗಳ ಬಳಿಕ ಗೆಳತಿ ಅಂಕಿತಾ ಲೋಕಂಡೆ ಮೊದಲ ಪೋಸ್ಟ್ ಮಾಡಿದ್ದಾರೆ. ಸುಶಾಂತ್ ಸಾವಿನ ಹಿಂದಿನ ದಿನ ಪೋಸ್ಟ್ ಮಾಡಿದ್ದ ಅಂಕಿತಾ ಗೆಳೆಯನ ನಿಧನದ ಬಳಿಕ ಮೌನವಾಗಿದ್ದರು. ಸದಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುತ್ತಿದ್ದ ಅಂಕಿತಾ ಒಂದು ತಿಂಗಳಿನಿಂದ ಯಾವುದೇ ಪೋಸ್ಟ್ ಸಹ ಮಾಡಿಕೊಂಡಿರಲಿಲ್ಲ.

    ದೇವರ ಮುಂದೆ ದೀಪ ಹಚ್ಚಿರುವ ಫೋಟೋವನ್ನು ಅಂಕಿತಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸುಶಾಂತ್ ಸಾವನ್ನಪ್ಪಿ ಇಂದಿಗೆ ಒಂದು ತಿಂಗಳು ಆಗಿದೆ. ಹೀಗಾಗಿ ಗೆಳೆಯನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಂಕಿತಾ ದೀಪ ಹಚ್ಚಿ ಪ್ರಾರ್ಥನೆ ಮಾಡಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಸುಶಾಂತ್ ನಿಧನ ಬಳಿಕ ಅಂಕಿತಾ ಗೆಳೆಯನಿಲ್ಲದ ಮನೆಗೆ ತೆರಳಿ ಪೋಷಕರಿಗೆ ಸಮಾಧಾನ ಹೇಳಿ ಬಂದಿದ್ದರು.

    https://www.instagram.com/p/CCm2bflBzpN/

    11 ವರ್ಷಗಳ ಹಿಂದೆ ಅಂಕಿತಾ ಮತ್ತು ಸುಶಾಂತ್ ಖಾಸಗಿ ವಾಹಿನಿಯ ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸಿದ್ದರು. ಈ ನಡುವೆ ಸುಶಾಂತ್ ರಿಯಾಲಿಟಿ ಶೋನಲ್ಲಿ ಅಂಕಿತಾರಿಗೆ ಬಹಿರಂಗವಾಗಿ ಪ್ರಪೋಸ್ ಮಾಡಿದ್ದರು. ಕೆಲ ದಿನಗಳ ಬಳಿಕ ಇಬ್ಬರ ಪ್ರೀತಿ ಮುರಿದಿತ್ತು. ಇಂದು ಬೆಳಗ್ಗೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಸಹ ಭಾವನಾತ್ಮಕವಾಗಿ ಕೆಲ ಸಾಲುಗಳನ್ನು ಬರೆದುಕೊಂಡಿದ್ದರು.

  • ಬಣ್ಣದ ಲೋಕದ 3 ನಟಿಯರ ಜೊತೆ ಸುಶಾಂತ್ ಹೆಸ್ರು ಥಳಕು

    ಬಣ್ಣದ ಲೋಕದ 3 ನಟಿಯರ ಜೊತೆ ಸುಶಾಂತ್ ಹೆಸ್ರು ಥಳಕು

    -ಲವ್, ಬ್ರೇಕಪ್, ಗಾಸಿಪ್

    ಮುಂಬೈ: ಸಾವಿರಾರು ಜನರನ್ನು ಕೈ ಬೀಸಿ ಕರೆಯುವ ಬಣ್ಣದ ಲೋಕ ಅಪ್ಪಿ ಒಪ್ಪಿಕೊಳ್ಳುವುದು ಕೆಲವರನ್ನ ಮಾತ್ರ. ಅಂತರ ಅದೃಷ್ಟವಂತರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಸಹ ಒರ್ವ ಅಂದ್ರೆ ತಪ್ಪಾಗಲಾರದು. ಯಾವುದೇ ಗಾಡ್ ಫಾದರ್ ಇಲ್ಲದೇ ಬಾಲಿವುಡ್ ನಲ್ಲಿ ಬೆಳೆದ ನಟರ ಪೈಕಿಯಲ್ಲಿ ಸುಶಾಂತ್ ಸಹ ಒಬ್ಬರು. ಸಣ್ಣ ಪಾತ್ರವಾದರೂ ಸರಿ ನಾನು ನಟಿಸುತ್ತೇನೆ ಎಂದು ಹೇಳಿಕೊಳ್ಳುತ್ತಿದ್ದ ಸುಶಾಂತ್ ಬಾರದ ಲೋಕಕ್ಕೆ ಪಯಣ ಬೆಳೆಸುವ ಮೂಲಕ ಅಪಾರ ಅಭಿಮಾನಿಗಳು, ಬಂಧು ಮಿತ್ರರಿಗೆ ಶಾಕ್ ನೀಡಿ ಚಿರ ನಿದ್ರೆಗೆ ಜಾರಿದ್ದಾರೆ. 11 ವರ್ಷಗಳ ಸಿನಿ ಕೆರಿಯರ್ ನಲ್ಲೂ ಸುಶಾಂತ್ ಹೆಸರು ಥಳಕು ಹಾಕಿಕೊಂಡಿತ್ತು. ಸುಶಾಂತ್ ಬಹಿರಂಗವಾಗಿಯೇ ಓರ್ವ ನಟಿಗೆ ಪ್ರಪೋಸ್ ಮಾಡಿ ನಂತ್ರ ಬೇಕ್ರಪ್ ಮಾಡಿಕೊಂಡ ವಿಚಾರ ಎಲ್ಲರಿಗೂ ಗೊತ್ತಿರುವ ವಿಷಯ.

    1. ಅಂಕಿತಾ ಲೋಕಂಡೆ:
    ಖಾಸಗಿ ವಾಹಿನಿಯ ಪವಿತ್ರ ರಿಶ್ತಾ ಧಾರಾವಾಹಿ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಸುಶಾಂತ್‍ಗೆ ಜೊತೆಯಾಗಿದ್ದು ನಟಿ ಅಂಕಿತಾ ಲೋಕಂಡೆ. ಮಾನವ್ ಮತ್ತು ಅರ್ಚನಾ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ಜೋಡಿ ಮಹಿಳಾ ಮಣಿಗಳ ಹಾಟ್ ಫೇವರೇಟ್ ಆಗಿತ್ತು. ಧಾರಾವಾಹಿಯಲ್ಲಿ ಮುಗ್ಧ ಮನಸ್ಸಿನ ಯುವಕನ ಪಾತ್ರ ನೋಡುಗರಿಗೆ ಅಯ್ಯೋ ಅನ್ನುವಂತೆ ಮಾಡುತ್ತಿತ್ತು. ತೆರೆಯ ಮೇಲೆ ಒಂದಾಗಿದ್ದ ಸುಶಾಂತ್ ಮತ್ತು ಅರ್ಚನಾ ರಿಯಲ್ ಲೈಫ್‍ನಲ್ಲಿ ನಾವು ಒಂದಾಗುತ್ತೇವೆ ಅಂತಾ ಹೇಳಿಕೊಂಡಿದ್ದರು. ರಿಯಾಲಿಟಿ ಶೋ ವೇದಿಕೆಯಲ್ಲಿ ಎಲ್ಲರೆದುರೇ ಅಂಕಿತಾಗೆ ಸುಶಾಂತ್ ಪ್ರಪೋಸ್ ಮಾಡಿದ್ದರು. ಧಾರಾವಾಹಿ ಆರಂಭವಾದ ಒಂದು ವರ್ಷದಲ್ಲಿ ಹಿರಿತೆರೆ ಸುಶಾಂತ್ ನನ್ನು ಕೈ ಬೀಸಿ ಕರೆದಿತ್ತು. ಧಾರಾವಾಹಿಯಿಂದ ಹೊರ ಬಂದ ಸುಶಾಂತ್ ಸಿನಿಮಾಗಳಲ್ಲಿ ಬ್ಯುಸಿ ಆದ್ರು. ಇತ್ತ ಅಂಕಿತಾ ಧಾರಾವಾಹಿಯಲ್ಲಿ ಉಳಿದ್ರು. ಹೀಗೆ ದೂರವಾದ ಇಬ್ಬರು ಕೆಲ ದಿನಗಳ ಬಳಿಕ ಬ್ರೇಕಪ್ ಮಾಡಿಕೊಂಡರು. ಕೆಲ ದಿನಗಳ ಬಳಿಕ ಅಂಕಿತಾ, ನನ್ನನ್ನು ಸುಶಾಂತ್‍ನ ಎಕ್ಸ್ ಗರ್ಲ್ ಫ್ರೆಂಡ್ ಅಂತಾ ಕರಿಬೇಡಿ ಅಂತ ಹೇಳಿದ್ದರು. ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ನಟನೆಯ ಟಾಪ್ 5 ಹಾಡುಗಳು

    2. ಕೃತಿ ಸನನ್:
    ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಆಧಾರಿತ ಸಿನಿಮಾದಲ್ಲಿ ನಟಿಸಿದ ಬಳಿಕ ಸುಶಾಂತ್ ಜೀವನ ಸಂಪೂರ್ಣ ಬದಲಾಗಿತ್ತು. ಧೋನಿ ಸಿನಿಮಾದ ನಂತರ ತೆರೆಕಂಡ ಚಿತ್ರ ರಾಬ್ತಾ. ಸಿನಿಮಾ ಸೂಪರ್ ಹಿಟ್ ಪಟ್ಟಿಗೆ ಸೇರದಿದ್ರೂ ಚಿತ್ರದಲ್ಲಿಯ ಕೃತಿ ಸನನ್ ಮತ್ತು ಸುಶಾಂತ್ ಕೆಮಿಸ್ಟ್ರಿ ನೋಡುಗರಿಗೆ ಇಷ್ಟವಾಗಿತ್ತು. ಸಿನಿಮಾ ಸೆಟ್ಟೇರಿದಾಗಿನಿಂದಲೂ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವುದು, ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದಾರೆ. ಅಂಕಿತಾ ಬ್ರೇಕಪ್ ಬಳಿಕ ಸುಶಾಂತ್ ಬಾಳಲ್ಲಿ ಕೃತಿ ಎಂಬ ಶೀರ್ಷಿಕೆಯಡಿ ಹಲವು ಲೇಖನಗಳು ಪ್ರಕಟವಾದವು. ಕೆಲವು ದಿನ ಇಬ್ಬರು ಪರಸ್ಪರ ಒಪ್ಪಿಗೆ ಬ್ರೇಕಪ್ ಮಾಡಿಕೊಂಡು ದೂರವಾದ್ರೂ ಎಂಬ ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡಿದವು. ಆದ್ರೆ ಇಬ್ಬರು ಎಲ್ಲಿಯೂ ತಮ್ಮ ಪ್ರೇಮದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ.

    3. ರಿಯಾ ಚಕ್ರವರ್ತಿ:
    ಕೆಲವು ದಿನಗಳಿಂದ ಸುಶಾಂತ್ ಸಿಂಗ್ ಹೆಸರು ನಟಿ ರಿಯಾ ಚಕ್ರವರ್ತಿಯೊಂದಿಗೆ ಕೇಳಿ ಬಂದಿತ್ತು. ಖಾಸಗಿ ಕಾರ್ಯಕ್ರಮಗಳು ಸೇರಿದಂತೆ ಹಲವೆಡೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳಲಾರಭಿಸಿದ್ದರು. ಸುಶಾಂತ್ ಮದುವೆ ಆಗ್ತಿದ್ದಾರೆ ಅಂತಾ ನ್ಯೂಸ್ ಹರಿದಾಡಿದ್ದುಂಟು. ಈಗತಾನೇ ಬಣ್ಣದ ಲೋಕಕ್ಕೆ ಕಾಲಿಟ್ಟಿರುವ ರಿಯಾ, ವೃತ್ತಿ ಜೀವನದಲ್ಲಿ ಸಾಧನೆ ಮಾಡಲು ಹೆಚ್ಚು ಆಸಕ್ತಿ ತೋರಿದ್ದರು. ಹಾಗಾಗಿ ಮದುವೆಗೆ ಹಿಂದೇಟು ಹಾಕಿದ್ದರಂತೆ. ಇಲ್ಲಿ ಸಹ ಸುಶಾಂತ್ ತಮ್ಮ ಪ್ರೀತಿಯನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ.