Tag: ಅಂಕಿತಾ

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಕಮಲಿ’ ಖ್ಯಾತಿಯ ಅಂಕಿತಾ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಕಮಲಿ’ ಖ್ಯಾತಿಯ ಅಂಕಿತಾ

    ಕಿರುತೆರೆಯ ಜನಪ್ರಿಯ ಸೀರಿಯಲ್ `ಕಮಲಿ’ ಖ್ಯಾತಿ ನಿಂಗಿ ಅಲಿಯಾಸ್ ಅಂಕಿತಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಹಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    `ಕಮಲಿ’ ಧಾರಾವಾಹಿ ಮೂಲಕ ಮನೆಮಾತಾದ ನಟಿ ಅಂಕಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ನಟಿಯ ಮದುವೆಗೆ ಕಮಲಿ ಧಾರಾವಾಹಿ ತಂಡ ಕೂಡ ಕಾಣಿಸಿಕೊಂಡು, ನವಜೋಡಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: `ಬ್ರಹ್ಮಾಸ್ತ್ರ’ ಚಿತ್ರ ರಿಲೀಸ್ ಬೆನ್ನಲ್ಲೇ ಇಟಲಿಗೆ ಹಾರಿದ ರಣ್‌ಬೀರ್ ಕಪೂರ್ ದಂಪತಿ

     

    View this post on Instagram

     

    A post shared by Gabriella Smith (@gabby_ella_smith)

    ವರ್ಷಗಳ ಹಿಂದೆಯೇ ಅಂಕಿತಾ ಹಾಗೂ ಸುಹಾಸ್ ಎನ್ನುವವರ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥ ಆಗಿ ಸರಿಯಾಗಿ ಒಂದು ವರ್ಷ ಆದನಂತರದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ಸುಹಾಸ್ ಕುಮಾರಸ್ವಾಮಿ ಎಂಬುವವರ ಜೊತೆ ಅಂಕಿತಾ ಮದುವೆ ನಡೆದಿದೆ. ಕೆನಡಾದಲ್ಲಿ ಸುಹಾಸ್ ನೆಲೆಸಿದ್ದು, ಫೋಟೋಗ್ರಾಫರ್ ಆಗಿ ಸುಹಾಸ್ ಕೆಲಸ ಮಾಡುತ್ತಿದ್ದಾರೆ. ಇನ್ನು ನೆಚ್ಚಿನ ನಟಿಯ ಹೊಸ ಬಾಳಿಗೆ ಫ್ಯಾನ್ಸ್ ಕೂಡ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಟೋಕಿಯೋ ಒಲಿಂಪಿಕ್ಸ್ ಹಾಕಿ ಕೋಚ್ ಅಂಕಿತಾರನ್ನು ಸನ್ಮಾನಿಸಿದ ಬೊಮ್ಮಾಯಿ

    ಟೋಕಿಯೋ ಒಲಿಂಪಿಕ್ಸ್ ಹಾಕಿ ಕೋಚ್ ಅಂಕಿತಾರನ್ನು ಸನ್ಮಾನಿಸಿದ ಬೊಮ್ಮಾಯಿ

    ಬೆಂಗಳೂರು: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮಹಿಳಾ ಹಾಕಿ ತಂಡದ ತರಬೇತುದಾರರಲ್ಲಿ ಒಬ್ಬರಾದ ಕು. ಅಂಕಿತಾ ಸುರೇಶ್ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಸನ್ಮಾನಿಸಿದ್ದಾರೆ.

    ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಹಾಕಿ ತಂಡ ಅತ್ಯುತ್ತಮ ಪ್ರದರ್ಶನ ತೋರಿದೆ. ಪದಕ ಗೆಲ್ಲಲು ಸಾಧ್ಯವಾಗದಿದ್ದರೂ ಭಾರತೀಯರ ಮನಸ್ಸನ್ನು ಮಹಿಳಾ ತಂಡ ಗೆದ್ದಿದ್ದು, ತಂಡದ ತರಬೇತಿದಾರರಿಗೆ ತುಂಬು ಹೃದಯದ ಧನ್ಯವಾದಗಳು. ಕನ್ನಡದ ಯುವತಿ ಭಾರತ ತಂಡದ ಕೋಚ್ ಆಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಬೊಮ್ಮಾಯಿ, ಅಂಕಿತಾ ಅವರಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಹಾಕಿಯಲ್ಲಿ ಸಾಧನೆ – ಕೊಡಗಿನಲ್ಲಿ ಅಂಕಿತಾ ಸುರೇಶ್‍ಗೆ ಅದ್ಧೂರಿ ಸ್ವಾಗತ

    ಅಂಕಿತಾ ಅವರು ಮಡಿಕೇರಿ ಮೂಲದವರಾಗಿದ್ದು, ಇವರ ತರಬೇತಿಯಲ್ಲಿ ಪಳಗಿದ ದೇಶದ ಮಹಿಳಾ ಹಾಕಿ ತಂಡ ಬಲಿಷ್ಠವಾಗಿದೆ. ಕಳೆದ ಎರಡು ವರ್ಷಗಳಿಂದ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅಂಕಿತಾ ತರಬೇತಿ ನೀಡುತ್ತಿದ್ದಾರೆ. ಪ್ರಥಮ ಬಾರಿಗೆ ಒಲಂಪಿಕ್ಸ್ ನಲ್ಲಿ ಮಹಿಳಾ ತಂಡ ಸೆಮಿಫೈನಲ್ ಹಂತಕ್ಕೆ ತೇರ್ಗಡೆಗೊಂಡು ಅಮೋಘ ಸಾಧನೆ ಮಾಡಿದ್ದು ಅವರಿಗೆ ಹಾಗೂ ಭಾರತೀಯ ಮಹಿಳಾ ಹಾಕಿ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿ ಸಿಎಂ ಸಂತಸ ವ್ಯಕ್ತಪಡಿಸಿದರು.

  • ಹಾಕಿ ಕೋಚ್ ಅಂಕಿತಾಗೆ ಕೊಡಗಿನ ಜನತೆಯಿಂದ ಶುಭ ಹಾರೈಕೆ

    ಹಾಕಿ ಕೋಚ್ ಅಂಕಿತಾಗೆ ಕೊಡಗಿನ ಜನತೆಯಿಂದ ಶುಭ ಹಾರೈಕೆ

    ಮಡಿಕೇರಿ: ಕ್ರೀಡಾ ಜಿಲ್ಲೆ ಆಗಿರುವ ಕೊಡಗು ಇದೀಗ ಹಾಕಿ ಕ್ರೀಡೆಗೆ ಸಂಬಂಧಿಸಿದಂತೆ ರಾಷ್ಟ್ರದ ಗಮನ ಸೆಳೆಯುತ್ತಿದೆ. ಕೊಡಗಿನ ಹಾಕಿ ಕಲಿಯೊಬ್ಬರು ಜಪಾನಿನ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಸೀನಿಯರ್ ಮಹಿಳಾ ಹಾಕಿ ತಂಡದ ಕೋಚ್ ಆಗಿ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಇದನ್ನೂ ಓದಿ: ಸಿಎಂ ಬಿಎಸ್‍ವೈ ಬದಲಾವಣೆ ವಿಚಾರ – ಒಂದು ವಾರ ಕಾಯಿರಿ: ಡಿಕೆಶಿ

    ಅಂಕಿತಾ ಸುರೇಶ್ ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಹೊನ್ನಂಪಾಡಿ ನಿವಾಸಿಯಾಗಿದ್ದಾರೆ. ಈ ಸಲದ ಒಲಿಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಈಗಾಗಲೇ ಕೋಚ್ ಅಂಕಿತಾ ಅವರನ್ನೊಳಗೊಂಡ ಭಾರತದ ಮಹಿಳಾ ಹಾಕಿ ತಂಡ ಟೋಕಿಯೋಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ನಮ್ಮಂಥ ಸಿಎಂ ಯಾವ ರಾಜ್ಯದಲ್ಲೂ ಇಲ್ಲ: ಸೋಮಶೇಖರ್ ರೆಡ್ಡಿ

    ಅಂಕಿತಾ ಅವರ ಕೋಚಿಂಗ್‍ನಲ್ಲಿ ಭಾರತ ಮಹಿಳಾ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡು ಬರಲಿ ಎಂಬುದು ಕೊಡಗಿನ ಜನತೆಯ ಹಾರೈಕೆ ಆಗಿದೆ. ಅಂಕಿತ ಅವರು ಕಂಬಿಬಾಣೆಯ ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಅವರ ಪತ್ನಿಯಾಗಿದ್ದಾರೆ. ದೇಶಕ್ಕೆ ಜಿಲ್ಲೆಗೆ ಹೆಸರು ತರಲಿ ಎಂದು ಕ್ರೀಡಾ ತವರು ಕೊಡಗು ಜಿಲ್ಲೆ ಜನರ ಆಶಾಯವಾಗಿದೆ. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಗೆಳೆಯನಿಗೆ ಶ್ರುತಿ ಹಾಸನ್ ಕಿಸ್