Tag: ಅಂಕಲ್

  • ಕೆಳಮನೆ ಆಂಟಿ ಜೊತೆ ಎಸ್ಕೇಪ್ ಆಗಿದ್ದ ಲವರ್‌ಬಾಯ್ ಅಂಕಲ್ ತಡರಾತ್ರಿ ದಿಢೀರ್ ಪ್ರತ್ಯಕ್ಷ

    ಕೆಳಮನೆ ಆಂಟಿ ಜೊತೆ ಎಸ್ಕೇಪ್ ಆಗಿದ್ದ ಲವರ್‌ಬಾಯ್ ಅಂಕಲ್ ತಡರಾತ್ರಿ ದಿಢೀರ್ ಪ್ರತ್ಯಕ್ಷ

    ಬೆಂಗಳೂರು: ಕೆಳಮನೆ ಆಂಟಿ ಜೊತೆ ಎಸ್ಕೇಪ್ ಆಗಿದ್ದ ಲವರ್ ಬಾಯ್ ಅಂಕಲ್ ಮಂಗಳವಾರ ತಡರಾತ್ರಿ ದಿಢೀರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾನೆ. ನವೀದ್ ತಡರಾತ್ರಿ ವಕೀಲರ ಜೊತೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಪೊಲೀಸ್ ಠಾಣೆಗೆ ಹಾಜರಾಗಿ ಕಾಣೆಯಾಗಿದ್ದಾನೆಂದು ನವೀದ್ ಪತ್ನಿ ನೀಡಿದ್ದ ದೂರಿನ ಸಂಬಂಧ ಠಾಣೆಗೆ ಭೇಟಿ ನೀಡಿ ಪ್ರಕರಣ ಮುಗಿಸಿಕೊಂಡು ನವೀದ್ ಪತ್ನಿ ಝೀನತ್ ಜೊತೆ ಹೋಗದೆ ವಕೀಲರೊಟ್ಟಿಗೆ ಹೋಗಿದ್ದಾನೆ.

    ಇತ್ತ ನವೀದ್ ಪೊಲೀಸ್ ಠಾಣೆಗೆ ಹಾಜರಾಗುತ್ತಿದ್ದಂತೆ ನವೀದ್ ಜೊತೆ ಹೋಗಿರೋ ಶಾಜಿಯಾ ವಕೀಲರು ಡಿವೋರ್ಸ್ ನೋಟಿಸ್ ಹಿಡಿದುಕೊಂಡು ಜ್ಞಾನಭಾರತಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ನವೀದ್ ಪೊಲೀಸರ ಮುಂದೆ ನಾನು ಶಾಜಿಯಾಳನ್ನ ಕರೆದುಕೊಂಡು ಹೋಗಿಲ್ಲ. ನನ್ನ ಕೆಲಸದ ಮೇಲೆ ಹೋಗಿದ್ದಾಗಿ ಪೊಲೀಸರ ಮುಂದೆ ಹೇಳಿ ವಕೀಲರೊಟ್ಟಿಗೆ ಹೋಗಿದ್ದಾನೆ ಎಂದು ಪತ್ನಿ ಝೀನತ್ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.

    ನವೀದ್ ಪತ್ನಿ ಝೀನತ್ ನನ್ನ ಗಂಡ (Husband Missing) ಕಾಣೆಯಾಗಿದ್ದಾನೆಂದು ನಾನು ದೂರು ಕೊಟ್ಟಿದ್ದೆ. ನನ್ನ ಗಂಡನನ್ನ ಕರೆದುಕೊಂಡು ಬಂದಿರೋ ಪೊಲೀಸರು ನನ್ನ ಜೊತೆ ಕಳಿಸಿದೆ ವಕೀಲರೊಟ್ಟಿಗೆ ಕಳಿಸಿದ್ದಾರೆಂದು ಪೊಲೀಸರ ಮೇಲೆ ದೂರುತ್ತಿದ್ದಾರೆ. ನವೀದ್ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದಂತೆ ಶಾಜಿಯ ಡಿವೋರ್ಸ್ ಪೇಪರ್ ಕಳಿಸಿಕೊಟ್ಟಿದ್ದಾಳೆ. ಗಂಡ ಮುಬಾರಕ್ ಗೆ ಡಿವೋರ್ಸ್ ಪೇಪರ್ (Divorce Letter) ವಕೀಲರೊಟ್ಟಿಗೆ ಕಳಿಸಿಕೊಟ್ಟಿದ್ದಾಳೆ. ಡಿವೋರ್ಸ್ ಪೇಪರ್ ನವೀದ್ ಒಟ್ಟಿಗೆ ಬಂದಿದ್ದರಿಂದ ನವೀದ್ ಮತ್ತು ಶಾಜಿಯ ಒಟ್ಟಿಗೆ ಇರುವುದರ ಬಗ್ಗೆ ಎರಡು ಮನೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ನವೀದ್ ಜೊತೆ ಹೋಗಿರೋ ಶಾಜಿಯ ಈ ಹಿಂದೆ ಕೂಡ ಬೇರೊಬ್ಬನ ಜೊತೆ ಓಡಿ ಹೋಗಿದ್ದರು ಎನ್ನಲಾಗಿದೆ. ನವೀದ್ ಹಾಗೂ ಮುಬಾರಕ್ ದಂಪತಿಗೆ ಇಬ್ಬಿಬ್ಬರು ಮಕ್ಕಳಿದ್ದಾರೆ. ಕೆಳ ಮಹಡಿಯಲ್ಲಿ ಮುಬಾರಕ್ ಮತ್ತು ಶಾಜಿಯಾ, ಎರಡನೇ ಮಹಡಿಯಲ್ಲಿ ನವೀದ್, ಝೀನತ್ ದಂಪತಿ ವಾಸವಾಗಿದ್ದರು. ಇದನ್ನೂ ಓದಿ: ಕೆಳ ಮನೆಯಲ್ಲಿದ್ದ ವಿವಾಹಿತೆ, ಮೇಲಿನ ಮನೆಯಲ್ಲಿದ್ದ ವಿವಾಹಿತನ ಜೊತೆಗೆ ಎಸ್ಕೇಪ್!

    ಮುಬಾರಕ್ ಪತ್ನಿ ಶಾಜಿಯಾ ಜೊತೆಗೆ ಝೀನತ್ ಪತಿ ನವೀದ್ ಗೆ ಅನೈತಿಕ ಸಂಬಂಧ ಆರೋಪ ಮಾಡಲಾಗಿತ್ತು. ಇಬ್ಬರಿಂದ ಜ್ಞಾನಭಾರತಿ ಪೊಲೀಸ್ ಠಾಣೆ (JnanaBharati Police Station) ಯಲ್ಲಿ ಪ್ರತ್ಯೇಕ ದೂರು ದಾಖಲು ಮಾಡಿದ್ದರು. ಒಂದು ಮಿಸ್ಸಿಂಗ್ ಕೇಸ್ ಪತ್ತೆ ಮಾಡಿರೋ ಪೊಲೀಸರು ಶಾಜಿಯಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಂಕಲ್ ಅಂದಿದ್ದೇ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ

    ಅಂಕಲ್ ಅಂದಿದ್ದೇ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ

    ಡೆಹ್ರಾಡೂನ್: ಅಂಕಲ್ ಎಂದು ಕರೆದಿದ್ದಕ್ಕೆ 18 ವರ್ಷದ ಯುವತಿಗೆ 35 ವರ್ಷದ ಅಂಗಡಿ ಮಾಲೀಕನೊಬ್ಬ ಹಿಗ್ಗಾಮುಗ್ಗಾ ಥಳಿಸಿರುವ ಆಘಾತಕಾರಿ ಘಟನೆ ಉಧಮ್ ಸಿಂಗ್ ನಗರ ಜಿಲ್ಲೆಯ ಸಿತಾರ್‌ಗಂಜ್ ಪಟ್ಟಣದಲ್ಲಿ ಘಟನೆ ನಡೆದಿದೆ.

    ಈ ಘಟನೆ ಮಂಗಳವಾರ ನಡೆದಿದ್ದು, ತಲೆಗೆ ತೀವ್ರವಾಗಿ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಆರೋಪಿಯನ್ನು ಮೋಹಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಐಪಿಸಿ ಸೆಕ್ಷನ್ 354 ಮಹಿಳೆಯೊಬ್ಬಳು ತನ್ನ ನಮ್ರತೆಗೆ ಆಕ್ರೋಶ ವ್ಯಕ್ತಪಡಿಸಲು ಹಲ್ಲೆ, ಸೆಕ್ಷನ್ 323 ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು ಮತ್ತು ಸೆಕ್ಷನ್ 506 ಕ್ರಿಮಿನಲ್ ಬೆದರಿಕೆ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: 29 ವರ್ಷದ ಬಳಿಕ ಪಾಕಿಸ್ತಾನದ ಜೈಲಿನಿಂದ ತಾಯಿನಾಡಿಗೆ ಕಾಲಿಟ್ಟ ಕುಲದೀಪ್ ಸಿಂಗ್

    ಘಟನೆಯ ಕುರಿತಂತೆ ಪ್ರತಿಕ್ರಿಯಿಸಿದ ಎಸ್‍ಎಚ್‍ಒ, ಯುವತಿ ಡಿಸೆಂಬರ್ 19 ರಂದು ಬ್ಯಾಡ್ಮಿಂಟನ್ ರಾಕೆಟ್ ಖರೀದಿಸಿದ್ದಳು. ಮಂಗಳವಾರ ಅದನ್ನು ಬದಲಾಯಿಸಿಕೊಳ್ಳಲು ಹೋಗಿದ್ದಳು. ರಾಕೆಟ್ ನ ಕೆಲವು ತಂತಿಗಳು ಮುರಿದು ಹೋಗಿದ್ದವು. ಈ ವೇಳೆ ಅಂಗಡಿಯವನನ್ನು ಯುವತಿ ಅಂಕಲ್ ಎಂದು ಕರೆದಿದ್ದಾಳೆ. ಇಷ್ಟಕ್ಕೆ ರೊಚ್ಚಿಗೆದ್ದ ಮೋಹಿತ್ ಯುವತಿಗೆ ಅಮಾನುಷವಾಗಿ ಥಳಿಸಿದ್ದಾನೆ. ಇದೀಗ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೇ ಈ ಘಟನೆ ಸಂಬಂಧ ಯುವತಿ ತಂದೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬರೋಬ್ಬರಿ 10 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ವಶ

  • ಪಾರ್ಕಿಗೆ ಬಾ ಅಂತಿದ್ಳು – ಅಂಕಲ್‍ಗಳೇ ಈಕೆಯ ಟಾರ್ಗೆಟ್!

    ಪಾರ್ಕಿಗೆ ಬಾ ಅಂತಿದ್ಳು – ಅಂಕಲ್‍ಗಳೇ ಈಕೆಯ ಟಾರ್ಗೆಟ್!

    – ಕೊನೆಗೂ ವೀಡಿಯೋ ಲೇಡಿ ಅಂದರ್

    ಭೋಪಾಲ್: ಪಾರ್ಕ್ ನಲ್ಲಿ ಮಧ್ಯ ವಯಸ್ಕ ಮತ್ತು 60 ವರ್ಷ ಮೇಲ್ಪಟ್ಟ ಪುರುಷರನ್ನ ಕರೆಸಿ, ವೀಡಿಯೋ ಮಾಡಿಕೊಂಡು ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ ಮಹಿಳೆ ಮತ್ತು ಓರ್ವ ಯುವಕನನ್ನು ಮಧ್ಯಪ್ರದೇಶದ ಭೋಪಾಲ್ ಪೊಲೀಸರು ಬಂಧಿಸಿದ್ದಾರೆ.

    ಕೆಲ ದಿನಗಳ ಹಿಂದೆ 65 ವರ್ಷದ ವೃದ್ಧರೊಬ್ಬರು ಪುತ್ರನೊಂದಿಗೆ ಆಗಮಿಸಿ ಮಹಿಳೆ ಮತ್ತು ಯುವಕನ ವಿರುದ್ಧ ದೂರು ದಾಖಲಿಸಿದ್ದರು. ಇಬ್ಬರು ತಮಗೆ 2 ಲಕ್ಷ ರೂ. ನೀಡಬೇಕೆಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ವೃದ್ಧ ಆರೋಪಿಸಿದ್ದರು. ದೂರಿನಲ್ಲಿ ಇಬ್ಬರ ಪರಿಚಯ ತಮಗಿಲ್ಲ ಎಂದು ಕರೆ ಮಾಡುತ್ತಿದ್ದ ಮೊಬೈಲ್ ಸಂಖ್ಯೆ ನೀಡಿದ್ದರು. ದೂರಿನ ಅನ್ವಯ ಪೊಲೀಸರು ಮಹಿಳೆ ಮತ್ತು ಓರ್ವ ಯುವಕನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ವೃದ್ಧ ವಿಮೆ ಮಾಡಿಸಲು ಮಹಿಳೆಗೆ ಫೋನ್ ಮಾಡಿದ್ದರು. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಮಾತುಕತೆ ನಡೆದಿತ್ತು. ಕಳೆದ ತಿಂಗಳು ಇಂದೋರ್ ನಲ್ಲಿರುವ ಮೇಘಧೂತ ಪಾರ್ಕ್ ನಲ್ಲಿ ಭೇಟಿಯಾಗುವಂತೆ ಮಹಿಳೆ ಹೇಳಿದ್ದಾಳೆ. ವೃದ್ಧ ಸಹ ವಿಮೆ ಮಾಡಿಸಲು ದಾಖಲೆಗಳೊಂದಿಗೆ ತೆರಳಿದ್ದರು. ಈ ವೇಳೆ ಇಬ್ಬರು ಕುಳಿತಿರುವ ವೀಡಿಯೋ ಮಾಡಿಕೊಂಡ ಆಕೆಯ ಜೊತೆಗಾರ ಯುವಕ ಬ್ಲ್ಯಾಕ್‍ಮೇಲ್ ಮಾಡಲಾರಂಭಿಸಿ ಎರಡು ಲಕ್ಷ ರೂ. ನೀಡುವಂತೆ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಆಕ್ಟೀವ್ ಆಗಿದೆಯಾ ಓಜಿಕುಪ್ಪಂ ಗ್ಯಾಂಗ್? ಒಂಟಿ ಮಹಿಳೆಯರೇ ಇವರ ಟಾರ್ಗೆಟ್!

    ಮಹಿಳೆ ಮತ್ತು ಯುವಕ ನಿವೃತ್ತಿ ಪಡೆದ ಪುರುಷರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಸೋಶಿಯಲ್ ಮೀಡಿಯಾ ಮೂಲಕ ತನ್ನನ್ನು ಪರಿಚಯ ಮಾಡಿಕೊಳ್ಳುತ್ತಿದ್ದ ಮಹಿಳೆ, ಉಪಾಯವಾಗಿ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದಳು. ತದನಂತರ ಉಪಾಯವಾಗಿ ಪಾರ್ಕ್ ಗಳಿಗೆ ಕರೆಸಿಕೊಂಡು ವೀಡಿಯೋ ಚಿತ್ರೀಕರಿಸಿ ಹಣಕ್ಕಾಗಿ ಪೀಡಿಸುತ್ತಿದ್ದಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಇದನ್ನೂ ಓದಿ: ಬಾಲಕಿಗೆ ಸೆಕ್ಸ್ ವೀಡಿಯೋ ಕಳಿಸ್ತಿದ್ದ ಆಂಟಿ ವಿರುದ್ಧ ಎಫ್‍ಐಆರ್

  • ಲೌಕ್‍ಡೌನ್ ವೇಳೆ ಆಂಟಿ ಮನೆಯಲ್ಲಿ ಲಾಕ್- ಹುಡ್ಗಿ ಮೇಲೆ ಅಂಕಲ್ ರೇಪ್

    ಲೌಕ್‍ಡೌನ್ ವೇಳೆ ಆಂಟಿ ಮನೆಯಲ್ಲಿ ಲಾಕ್- ಹುಡ್ಗಿ ಮೇಲೆ ಅಂಕಲ್ ರೇಪ್

    – 2 ತಿಂಗಳು ಅತ್ಯಾಚಾರಗೈದ ಕಾಮುಕ
    – ವೀಡಿಯೋ ಮಾಡಿ ಬೆದರಿಕೆ

    ಮುಂಬೈ: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶದಲ್ಲಿಯೇ ಲಾಕ್‍ಡೌನ್ ಹೇರಲಾಗಿತ್ತು. ಈ ಸಂದರ್ಭದಲ್ಲಿ ತನ್ನ ಆಂಟಿ ಮನೆಯಲ್ಲಿ ಹೋಗಿ ಸಿಲುಕಿಕೊಂಡ 17 ವರ್ಷದ ಹುಡುಗಿಯ ಮೇಲೆ ಆಕೆಯ ಅಂಕಲ್ ಅತ್ಯಾಚಾರವೆಸಗಿದ ಪ್ರಕರಣ ಬೆಳಕಿಗೆ ಬಂದಿದೆ.

    ಲಾಕ್‍ಡೌನ್ ಮುಖ್ತವಾದ ಬಳಿಕ ಅವಳು ತನ್ನ ಮನೆಗೆ ತೆರಳಿದ ವೇಳೆ ಅಂಕಲ್ ಕಥೆ ಬಯಲಾಗಿದೆ. ಆರೋಪಿ ಅಂಕಲ್ ಹೆಸರನ್ನು ಬಹಿರಂಗಪಡಿಸಿಲ್ಲ. ಆದರೆ ಆತನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಧುಲೆ ನಿವಾಸಿಯಾಗಿರುವ ಹುಡುಗಿ, ಲಾಕ್‍ಡೌನ್ ಸಮಯದಲ್ಲಿ ಪ್ಯಾರೆಲ್‍ನಲ್ಲಿರುವ ತನ್ನ ಚಿಕ್ಕಮ್ಮನ ಸ್ಥಳಕ್ಕೆ ಬಂದಿದ್ದಾಳೆ. ಇದೇ ಸಮಯವನ್ನು ಹುಡುಗಿಯ ಚಿಕ್ಕಪ್ಪನಾಗಿರುವ ಆರೋಪಿ ಸದುಪಯೋಗಪಡಿಸಿಕೊಂಡಿದ್ದಾನೆ. ಕುಟುಂಬದ ಇತರ ಸದಸ್ಯರು ಮನೆಯಿಂದ ಹೊರಗೆ ಹೋದಾಗಲೆಲ್ಲಾ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಹುಡುಗಿ ಹೇಳಿಕೊಂಡಿದ್ದಾಳೆ. ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳ ನಡುವೆ ಆರೋಪಿ ಹುಡುಗಿಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

    ಇತ್ತೀಚೆಗೆ ಹುಡುಗಿ ತನ್ನ ಮನೆಗೆ ಮರಳಿದ್ದಳು. ಈ ವೇಳೆ ಅವಳು ಹೊಟ್ಟೆನೋವಿನಿಂದ ಬಳಲಿದ್ದಳು. ಹೀಗಾಗಿ ಪೋಷಕರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷೆಯ ವೇಳೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬಯಲಾಗಿದೆ. ಇತ್ತ ಆಸ್ಪತ್ರೆಯ ಸಿಬ್ಬಂದಿ ಕೂಡಲೇ ಧುಲೇನಲ್ಲಿರುವ ಸ್ಥಳೀಯ ಪೊಲೀಸರನ್ನು ಎಚ್ಚರಿಸಿದ್ದು, ಅಂಕಲ್ ವಿರುದ್ಧ ಶೂನ್ಯ ಎಫ್‍ಐಆರ್ ದಾಖಲಿಸಿ ಭೋವಾಡಾ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

    ಅಂಕಲ್ ತನ್ನ ಮೇಲೆ ಮೊದಲ ಬಾರಿಗೆ ಅತ್ಯಾಚಾರ ನಡೆಸಿದ್ದ ವೇಳೆ ಅದರ ವೀಡಿಯೋ ಮಾಡಿದ್ದಾನೆ. ಅಲ್ಲದೆ ಈ ವಿಚಾರ ಯಾರಿಗಾದರೂ ಹೇಳಿದರೆ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರ ಬಳಿ ಹೇಳಿದ್ದಾಳೆ. ಆಕೆಯ ಹೇಳಿಕೆಯ ಸಂಬಂಧ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದರು.

  • ಅತ್ಯಾಚಾರಕ್ಕೆ ವಿರೋಧಿಸಿದ 7 ವರ್ಷದ ಬಾಲಕಿಯನ್ನು ಕೊಲೆಗೈದ ಅಂಕಲ್

    ಅತ್ಯಾಚಾರಕ್ಕೆ ವಿರೋಧಿಸಿದ 7 ವರ್ಷದ ಬಾಲಕಿಯನ್ನು ಕೊಲೆಗೈದ ಅಂಕಲ್

    – ನಾಯಿ ಕಚ್ಚಿದ ರೀತಿಯಲ್ಲಿ ಶವ ಪತ್ತೆ

    ಅಹಮ್ಮದಾಬಾದ್: ಏಳು ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿರುವ ಆರೋಪದ ಮೇಲೆ 46 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಅಪ್ರಾಪ್ತೆ ಶನಿವಾರ ನಾಪತ್ತೆಯಾಗಿದ್ದು, ಮಂಗಳವಾರ ರಾತ್ರಿ ಒಗ್ನಾಜ್ ಟೋಲ್ ಪ್ಲಾಜಾ ಬಳಿಯ ಹೊಲದಲ್ಲಿ ಆಕೆಯ ಶವ ಕೊಳೆತ ಸ್ಥಿತಿಯಲ್ಲಿ, ಮೈಮೇಲೆ ಬಟ್ಟೆ ಇಲ್ಲದೆ ಹಾಗೂ ನಾಯಿ ಕಚ್ಚಿದ ಗುರುತುಗಳೊಂದಿಗೆ ಪತ್ತೆಯಾಗಿತ್ತು.

    ಬಂಧಿತ ವ್ಯಕ್ತಿಯನ್ನು ಬಿಖಾ ಮಿಸ್ತ್ರಿ ಎಂದು ಗುರುತಿಸಲಾಗಿದ್ದು, ಈತ ಮೆಹ್ಶಾನಾ ನಿವಾಸಿ. ಅಹಮ್ಮದಾಬಾದ್ ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಅವಿವಾಹಿತನಾಗಿರುವ ಮಿಸ್ತ್ರಿ ಅಪ್ರಾಪ್ತೆಯ ಮನೆಯ ಪಕ್ಕದಲ್ಲೇ ಇರುವ ತನ್ನ ಸಹೋದರನ ಮನೆಯಲ್ಲಿ ವಾಸವಾಗಿದ್ದಾನೆ.

    ಸೆಪ್ಟೆಂಬರ್ 12ರಂದು 7 ವರ್ಷದ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ದೂರು ಬಂದಿದೆ. ಈ ಹಿನ್ನೆಲೆಯಲ್ಲಿ ಅಪಹರಣ ಪ್ರಕರಣ ದಾಖಲಿಸಲಾಗಿದ್ದು, ಬಾಲಕಿಯ ಪತ್ತೆಗೆ ಪೊಲೀಸರ ತಂಡ ರಚಿಸಲಾಗಿತ್ತು. ಈ ಮಧ್ಯೆ ಮಂಗಳವಾರ ರಾತ್ರಿಯೇ ಬಾಲಕಿಯ ಶವ ಪತ್ತೆಯಾಗಿದೆ ಎಂದು ಅಹಮ್ಮದಾಬಾದ್ ಡಿಟೆಕ್ಷನ್ ಆಫ್ ಕ್ರೈಂ ಬ್ರಾಂಚ್(ಡಿಸಿಬಿ) ಅಧಿಕಾರಿ ತಿಳಿಸಿದ್ದಾರೆ.

    ತನಿಖೆಯ ವೇಳೆ ಆರೋಪಿ ಬಾಲಕಿಯ ಚಿಕ್ಕಪ್ಪನಾಗಿದ್ದು, ಆಕೆಗೆ ಆಮಿಷವೊಡ್ಡಿ ಅಪಹರಿಸಿದ್ದಾನೆ. ಸೆಪ್ಟೆಂಬರ್ 12ರಂದು ರಾತ್ರಿ ಆಟೋರಿಕ್ಷಾದಲ್ಲಿ ಕೃಷಿಭೂಮಿಯೋಂದರ ಬಳಿ ಕರೆದೊಯ್ದಿದ್ದಾನೆ ಎಂದು ಅಧಿಕಾರಿ ಉಲ್ಲೇಖಿಸಿದ್ದಾರೆ.

    ಆರೋಪಿ ಪೊಲೀಸರ ಬಳಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕೃಷಿಭೂಮಿಗೆ ಕರೆದೊಯ್ದ ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿರುವುದಾಗಿ ಪೊಲೀಸರ ಬಳಿ ತಿಳಿಸಿದ್ದಾನೆ. ತನ್ನ ಕೃತ್ಯವನ್ನು ಬಾಲಕಿ ವಿರೋಧಿಸಿದಾಗ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ಮೃತದೇಹವನ್ನು ಪೊದೆಗೆ ಎಸೆದು ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ಅಧಿಕಾರಿ ವಿವರಿಸಿದ್ದಾರೆ.

    ಘಟನೆ ಸಂಬಂಧ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ (302) ಹಾಗೂ 376(ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಸಿಗರೇಟಿಗೆ ಬೆಂಕಿ ಹಚ್ಚಿಕೊಡದ 15 ವರ್ಷದ ಅಳಿಯನಿಗೆ ಚಾಕು ಇರಿದ

    ಸಿಗರೇಟಿಗೆ ಬೆಂಕಿ ಹಚ್ಚಿಕೊಡದ 15 ವರ್ಷದ ಅಳಿಯನಿಗೆ ಚಾಕು ಇರಿದ

    ಚೆನ್ನೈ: ವ್ಯಕ್ತಿಯೊಬ್ಬ ಸಿಗರೇಟ್ ಹೊತ್ತಿಸಿಕೊಡಲು ನಿರಾಕರಿಸಿದ ಸೋದರಳಿಯನಿಗೆ ಚಾಕುವಿನಿಂದ ಇರಿದ ಘಟನೆ ಶನಿವಾರ ರಾತ್ರಿ ರಾಮನಾಥಪುರಂನ ಬಜನೈಕೋವಿಲ್ ರಸ್ತೆಯಲ್ಲಿ ನಡೆದಿದೆ.

    ಹಲ್ಲೆಗೊಳಗಾದ ಅಳಿಯನನ್ನು ಯೋಗೇಶ್(15) ಎಂದು ಗುರುತಿಸಲಾಗಿದೆ. ಯೋಗೇಶ್, ಮಣಿಕಂದನ್ ಅಕ್ಕನ ಮಗ. 43 ವರ್ಷದ ಆರೋಪಿ ಮಣಿಕಂದನ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದನು.

    ಯೋಗೇಶ್ ತಾಯಿಯ ಹೆಸರು ಕೃಷ್ಣಮಣಿ ಎಂದಾಗಿದ್ದು, ಇವರು ಇರುಗೂರ್ ಮಾರ್ಕೆಟ್ ರಸ್ತೆಯಲ್ಲಿ ನೆಲೆಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಯೊಗೇಶ್ ತನ್ನ ಅಂಕಲ್ ಮಣಿಕಂದನ್ ಮನೆಗೆ ಬಂದಿದ್ದನು.

    ಶನಿವಾರ ಯೋಗೇಶ್ ಬಳಿ ಮಣಿಕಂದನ್ ಸಿಗರೇಟ್ ಗೆ ಬೆಂಕಿ ಹಚ್ಚಿಕೊಡುವಂತೆ ಕೇಳಿಕೊಂಡಿದ್ದಾನೆ. ಆದರೆ ಯೋಗೇಶ್ ಇದನ್ನು ನಿರಾಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಣಿಕಂದನ್, ಹೇಳಿದ ಕೆಲಸ ಮಾಡುವಂತೆ ಮತ್ತೊಮ್ಮೆ ಬಾಲಕನ ಗದರಿಸಿದ್ದಾನೆ. ಆದರೆ ಬಾಲಕ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಮಣಿಕಂದನ್, ಬಾಲಕನ ಹೊಟ್ಟೆಗೆ ಚೂರಿಯಿಂದ ಇರಿದಿದ್ದಾನೆ.

    ಕೂಡಲೇ ಆತನನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಸದ್ಯ ಬಾಲಕನ ಆರೋಗ್ಯ ಸುಧಾರಿಸುತ್ತಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಬಾಲಕನ ತಂದೆ ನೀಡಿದ ದೂರಿನಂತೆ ಪೊಲೀಸರು ಮಣಿಕಂದನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬೆತ್ತಲೆ ದೇಹ ತೋರಿಸಿ ಸೆಕ್ಸ್‌ಗೆ ಆಹ್ವಾನ -ಪಕ್ಕದ್ಮನೆ ಆಂಟಿಗೆ ಅಂಕಲ್ ಪ್ಲೈನ್ ಕಿಸ್

    ಬೆತ್ತಲೆ ದೇಹ ತೋರಿಸಿ ಸೆಕ್ಸ್‌ಗೆ ಆಹ್ವಾನ -ಪಕ್ಕದ್ಮನೆ ಆಂಟಿಗೆ ಅಂಕಲ್ ಪ್ಲೈನ್ ಕಿಸ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಓರ್ವ ಕಾಮುಕ ಅಂಕಲ್ ಇದ್ದು, ಪಕ್ಕದ ಮನೆ ಮಹಿಳೆಗೆ ಪ್ಲೈನ್ ಕಿಸ್ ಕೊಟ್ಟು ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ.

    ಆರೋಪಿಯನ್ನು ಸೋಮಶೇಖರ್ ಎಂದು ಗುರುತಿಸಲಾಗಿದೆ. ಕೆಟ್ಟದಾಗಿ ಸನ್ನೆ ಮಾಡಿ ಲೈಂಗಿಕ ಕಿರುಕುಳ ಕೊಡುತ್ತಿದ್ದಾನೆ ಎಂದು ಮಹಿಳೆ ಆರೋಪಿ ಸೋಮಶೇಖರ್ ವಿರುದ್ಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಪಕ್ಕದ ಮನೆಯ ನಿವಾಸಿ ಸೋಮಶೇಖರ್ ಸುಮಾರು ಆರು ತಿಂಗಳಿನಿಂದ ನನಗೆ ಕೆಟ್ಟದಾಗಿ ಸನ್ನೆ ಮಾಡಿ, ಬಟ್ಟೆಯಿಲ್ಲದ ತನ್ನ ಬೆತ್ತಲೆ ದೇಹವನ್ನು ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಇತ್ತೀಚೆಗೆ ಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಬರಲು ಹೋಗುತ್ತಿದ್ದಾಗ ಆರೋಪಿ ಕೆಟ್ಟದಾಗಿ ಸನ್ನೆ ಮಾಡಿ ಪ್ಲೈನ್ ಕಿಸ್ ನೀಡಿ ಕಿರುಕುಳ ನೀಡಿದ್ದನು. ಆದ್ದರಿಂದ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸದ್ಯಕ್ಕೆ ಆರೋಪಿ ವಿರುದ್ಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 17ರ ಬಾಲೆಯನ್ನ ಅತ್ಯಾಚಾರಗೈದ ಅಂಕಲ್ – ಅಪ್ರಾಪ್ತೆಯ ಮಡಿಲಲ್ಲಿ ಕಂದಮ್ಮ

    17ರ ಬಾಲೆಯನ್ನ ಅತ್ಯಾಚಾರಗೈದ ಅಂಕಲ್ – ಅಪ್ರಾಪ್ತೆಯ ಮಡಿಲಲ್ಲಿ ಕಂದಮ್ಮ

    ಮುಂಬೈ: ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಅಂಕಲ್ ನಿರಂತರವಾಗಿ 7 ತಿಂಗಳ ಕಾಲ ಅತ್ಯಾಚಾರ ಎಸಗಿದ್ದು, ಬಾಲಕಿ ಮಗುವಿಗೆ ಜನ್ಮ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಪಿಂಪ್ರಿ ಚಿಂಚವಾಡ್‍ದಲ್ಲಿ ಘಟನೆ ನಡೆದಿದ್ದು, ಇಂದು ಹೊಟ್ಟೆನೋವು ಅಂತ ಆಸ್ಪತ್ರೆಗೆ ದಾಖಲಾಗಿದ್ದ 17 ವರ್ಷ ಬಾಲಕಿ ಅವಧಿಗೂ ಮುನ್ನ (Premature Baby) ಮಗುವಿಗೆ ಜನ್ಮ ನೀಡಿದ್ದಾಳೆ. ಈ ಸಂಬಂಧ ಆರೋಪಿಯ ವಿರುದ್ಧ ಬಾಲಕಿಯ ಪೋಷಕರು ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಅತ್ಯಾಚಾರಕ್ಕೊಳಗಾದ ಬಾಲಕಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಬಾಲಕಿ ಹಾಗೂ ಆರೋಪಿ ಅಂಕಲ್ ಒಂದೇ ಮನೆಯಲ್ಲಿ ವಾಸವಾಗಿದ್ದು, ಇದೇ ವರ್ಷ ಮೇ ತಿಂಗಳು ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದಾನೆ. ಬಳಿಕ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.

    ಆರೋಪಿಗೆ ಮದುವೆಯಾಗಿದ್ದು, ಕೆಲ ದಿನಗಳ ಹಿಂದೆ ಆತನ ಪತ್ನಿ ಬಿಟ್ಟು ಹೋಗಿದ್ದಾಳೆ. ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 376 (ಬಲವಂತ ಸಂಭೋಗಕ್ಕೆ ದಂಡನೆ), 506 (ದಂಡನೆ) ಅಡಿ ಪ್ರಕರಣ ದಾಖಲಾಗಿದೆ. ಆರೋಪಿ ಡಿಸೆಂಬರ್ 25ರಿಂದ ನಾಪತ್ತೆಯಾಗಿದ್ದು, ನಮ್ಮ ಜೊತೆಗೆ ಬಾಲಕಿಯ ಪೋಷಕರು ಹುಡುಕಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • 8ನೇ ಕ್ಲಾಸ್ ಓದಿರೋ ಅಂಕಲ್‍ನಿಂದ 6 ಮಹಿಳೆಯರ ಫೇಸ್‍ಬುಕ್ ಖಾತೆ ಹ್ಯಾಕ್

    8ನೇ ಕ್ಲಾಸ್ ಓದಿರೋ ಅಂಕಲ್‍ನಿಂದ 6 ಮಹಿಳೆಯರ ಫೇಸ್‍ಬುಕ್ ಖಾತೆ ಹ್ಯಾಕ್

    -ಮೆಸೇಜ್ ಕಳಿಸಿ ಸೆಕ್ಸ್ ಗೆ ಬೇಡಿಕೆ

    ಇಂದೋರ್: 6 ಮಹಿಳೆಯರ ಫೇಸ್‍ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ 8 ನೇ ಕ್ಲಾಸ್ ಓದಿರೋ ಅಂಕಲ್ ನನ್ನು ಇಂದೋರ್ ಪೊಲೀಸರು ಬಂಧಿಸಿದ್ದಾರೆ.

    ಜಾಗೃತಿ ನಗರದ ನಿವಾಸಿ 36 ವರ್ಷದ ದಿಲೀಪ್ ಬಂಧಿತ ವ್ಯಕ್ತಿ. ದಿಲೀಪ್ ತಾನು ಹ್ಯಾಕ್ ಮಾಡಿದ ಎಫ್‍ಬಿ ಖಾತೆಯಲ್ಲಿ ಅಶ್ಲೀಲ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದನು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ 6 ದೂರುಗಳು ದಾಖಲಾಗಿದ್ದವು. ಪ್ರಕರಣ ಕೈಗೆತ್ತಿಕೊಂಡ ಕ್ರೈಂ ಬ್ರಾಂಚ್ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆರಂಭದಲ್ಲಿ ತನ್ನದೇನು ತಪ್ಪಿಲ್ಲ ಎಂದು ಬಲವಾಗಿ ವಾದಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ತೋರಿಸುತ್ತಿದ್ದಂತೆ ಆರೋಪಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ದಿಲೀಪ್ ಫೇಸ್‍ಬುಕ್ ಖಾತೆ ಹ್ಯಾಕ್ ಮಾಡಲು ಕೆಲವು ವಿಐಪಿ ಅಥವಾ ಫ್ಯಾನ್ಸಿ ಮೊಬೈಲ್ ನಂಬರ್‍ಗಳನ್ನು ಬಳಕೆ ಮಾಡುತ್ತಿದ್ದನು. ಹೀಗೆ ಪದೇ ಪದೇ ನಂಬರ್ ಗಳನ್ನು ಹಾಕುವ ಮೂಲಕ ಫೇಸ್‍ಬುಕ್ ಖಾತೆಗಳನ್ನ ಹ್ಯಾಕ್ ಮಾಡುತ್ತಿದ್ದನು. ಖಾತೆ ಹ್ಯಾಕ್ ಬಳಿಕ ಮಹಿಳೆಯರಿಗೆ ತನ್ನೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಬೇಡಿಕೆ ಇಡುತ್ತಿದ್ದನು. ಒಂದು ವೇಳೆ ಮಹಿಳೆ ಒಪ್ಪದೇ ಇದ್ದಲ್ಲಿ ಅವರ ಫೇಸ್‍ಬುಕ್ ಖಾತೆಯಲ್ಲಿ ಅಶ್ಲೀಲ ಫೋಟೋಗಳನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ಕಳೆದ ಮೂರು ತಿಂಗಳನಿಂದ ಆರೋಪಿ ಎಫ್‍ಬಿ ಅಕೌಂಟ್ ಹ್ಯಾಕ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಹೇಗೆ ಹ್ಯಾಕ್ ಮಾಡ್ತಿದ್ದ..?
    ಒಂದು ದಿನ ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಫೇಸ್‍ಬುಕ್ ನಲ್ಲಿ ಕೆಲವು ಮೊಬೈಲ್ ನಂಬರ್ ಹಾಕಿ ಖಾತೆ ತೆರೆಯುವ ಪ್ರಯತ್ನ ಮಾಡಲಾರಂಭಿಸಿದ್ದಾನೆ. ಹೀಗೆ ಒಂದೆರೆಡು ಖಾತೆ ಓಪನ್ ಆಗುತ್ತಲೇ ಇದನ್ನೇ ಕೆಲಸ ಮಾಡಿಕೊಂಡಿದ್ದಾನೆ. ಮುಂದೆ ಫಾನ್ಸಿ ಅಥವಾ ಮೊಬೈಲ್ ನಂಬರ್ ಬಳಸಿ, ಅಂದಾಜಿನ ಮೇಲೆಯೇ ಕಾಮನ್ ಪಾಸ್ ವರ್ಡ್ ಬಳಸಿ ಕೆಲ ಮಹಿಳೆಯರ ಎಫ್‍ಬಿ ಖಾತೆಗಳು ಓಪನ್ ಆಗಿವೆ. ಆದ್ರೆ ದಿಲೀಪ್ ಖಾತೆ ತೆರೆದ ಮಹಿಳೆಯರ ಪರಿಚಯ ಮೊದಲು ಇರಲಿಲ್ಲ. ಖಾತೆಗಳು ಓಪನ್ ಆಗುತ್ತಿದ್ದಂತೆ ಮೆಸೇಜ್ ಕಳಿಸಿ ಸೆಕ್ಸ್ ಗೆ ಬೇಡಿಕೆ ಇಡುತ್ತಿದ್ದನು.

    ಆರೋಪಿ ದಿಲೀಪ್ 8ನೇ ತರಗತಿಯವರೆಗೆ ಮಾತ್ರ ವ್ಯಾಸಂಗ ಮಾಡಿದ್ದು, ಜಾಗೃತ ನಗರದ ಸಿಂಧಿ ಕಾಲೋನಿಯ ನಿವಾಸಿಯಾಗಿದ್ದಾನೆ. ಪಟ್ಟಣದಲ್ಲಿ ತನ್ನದೇ ಸ್ವಂತ ಫೂಟ್‍ವೇರ್ ಅಂಗಡಿಯನ್ನು ಹೊಂದಿದ್ದಾನೆ. ಇದೇ ರೀತಿಯಾಗಿ ಯಾರಾದ್ರೂ ಮಹಿಳೆಯರು ತೊಂದರೆ ಅನುಭವಿಸಿದ್ದರೆ, ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ನಿಮಗೆ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸುವ ವ್ಯಕ್ತಿಯಿಂದ ದೂರ ಇರಬೇಕು ಎಂದು ಕ್ರೈಂ ಬ್ರ್ಯಾಂಚ್ ಎಎಸ್‍ಪಿ ಅಮರೇಂದ್ರ ಸಿಂಗ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv