Tag: ಅಂಕಪಟ್ಟಿ

  • ಕೆಪಿಸಿಎಲ್ ನೇಮಕಾತಿ ಪರೀಕ್ಷೆ – ಅಂತಿಮ ಅಂಕಪಟ್ಟಿ ಪ್ರಕಟ

    ಕೆಪಿಸಿಎಲ್ ನೇಮಕಾತಿ ಪರೀಕ್ಷೆ – ಅಂತಿಮ ಅಂಕಪಟ್ಟಿ ಪ್ರಕಟ

    ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿನ (KPCL) 622 ಖಾಲಿ ಹುದ್ದೆಗಳನ್ನು ತುಂಬಲು ಫೆಬ್ರವರಿ 18ರಂದು ನಡೆಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ತನ್ನ ವೆಬ್‌ಸೈಟ್‌ನಲ್ಲಿ ಬುಧವಾರ ಪ್ರಕಟಿಸಿದೆ.

    ಆಕ್ಷೇಪಣೆಗಳ ಪರಿಶೀಲನೆ ನಂತರ, ಕಳೆದ ಬಾರಿಯಂತೆಯೇ ಈ ಬಾರಿಯೂ, ಪ್ರತಿ ತಪ್ಪು ಉತ್ತರಕ್ಕೆ 1/3ರಷ್ಟು ನಕಾರಾತ್ಮಕ ಅಂಕ ಕಡಿತಗೊಳಿಸಿ ಅಂತಿಮ ಅಂಕಪಟ್ಟಿ ಸಿದ್ದಪಡಿಸುವಂತೆ ಕೆಪಿಸಿಎಲ್ ಸಂಸ್ಥೆ ಲಿಖಿತ ರೂಪದಲ್ಲಿ ಸೂಚಿಸಿತ್ತು. ಆ ಪ್ರಕಾರವಾಗಿ, ಹುದ್ದೆವಾರು ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ:  ಕೇಂದ್ರ ಸಚಿವರಾಗಿ ಮೊದಲ ಕಡತಕ್ಕೆ ಹೆಚ್‌ಡಿಕೆ ಸಹಿ!

    ಅಂತಿಮ ಅಂಕಪಟ್ಟಿಯನ್ನು ಕೆಪಿಸಿಎಲ್ ಸಂಸ್ಥೆಗೆ ಹಸ್ತಾಂತರಿಸಲಾಗುವುದು. ನಿಯಮಾನುಸಾರ ಆಯ್ಕೆ ಪಟ್ಟಿ ಪ್ರಕಟಿಸಲು ಕೆಪಿಸಿಎಲ್ ಕ್ರಮ ವಹಿಸಲಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಪ್ರಸಿದ್ಧರು, ಸೆಲೆಬ್ರಿಟಿಗಳೆಂದು ಬಿಡುವ ಪ್ರಶ್ನೆ ಇಲ್ಲ: ದರ್ಶನ್ ಕೇಸ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ

    ಕೆಪಿಸಿಎಲ್‌ನ ಎಇ, ಜೆಇ (ವಿವಿಧ ವಿಭಾಗಗಳ), ಕೆಮಿಸ್ಟ್ ಮತ್ತು ಕೆಮಿಕಲ್ ಸೂಪರ್‌ವೈಸರ್ ಹುದ್ದೆಗಳ ನೇಮಕಾತಿಗಾಗಿ ಈ ಪರೀಕ್ಷೆ ನಡೆಸಲಾಗಿತ್ತು. ಇದನ್ನೂ ಓದಿ: ಕರ್ನಾಟಕದಲ್ಲಿ ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ್ ಅನ್ನೋದೇ ತಪ್ಪು: ಆರ್.ಅಶೋಕ್

  • ಪಾಸ್ ಆಗದಿದ್ದಕ್ಕೆ 300 ವಿದ್ಯಾರ್ಥಿಗಳ ಅಂಕಪಟ್ಟಿ ಕದ್ದಿದ್ದ ಅಪೂರ್ಣ ಪದವೀಧರ

    ಪಾಸ್ ಆಗದಿದ್ದಕ್ಕೆ 300 ವಿದ್ಯಾರ್ಥಿಗಳ ಅಂಕಪಟ್ಟಿ ಕದ್ದಿದ್ದ ಅಪೂರ್ಣ ಪದವೀಧರ

    ಬೆಳಗಾವಿ : ಹಲವು ಬಾರಿ ಪರೀಕ್ಷೆ ಬರೆದರೂ ಪದವಿ ಪಾಸಾಗದೆ ಹತಾಶೆಗೊಂಡ ಯುವಕನೊಬ್ಬ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕೋಣೆಗೆ ನುಗ್ಗಿ 300 ವಿದ್ಯಾರ್ಥಿಗಳ ಅಂಕಪಟ್ಟಿ ಮತ್ತು ಸ್ಕಾನರ್ ಕದ್ದು ಪರಾರಿಯಾಗುವಾಗ ಸಿಕ್ಕಿಹಾಕೊಂಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ.

    ಬಸಪ್ಪ ಶಿವಲಿಂಗಪ್ಪ ಹೊನವಾಡ (23) ಕಳ್ಳತನ ಆರೋಪದಡಿ ಬಂಧಿಸಿರುವ ಯುವಕ. ಈತ ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ನಿವಾಸಿ. ಜಮಖಂಡಿ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಬಿ.ಕಾಂ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ.

    ಸೆಮಿಸ್ಟರನ ಕೆಲ ವಿಷಯಗಳಲ್ಲಿ ಅನುತ್ತಿರ್ಣನಾಗಿದ್ದ. ಅದಕ್ಕಾಗಿ ಹಲವು ಬಾರಿ ಮರು ಪರೀಕ್ಷೆ ಬರೆದರೂ ಪಾಸಾಗಿಲ್ಲ. ಇದರಿಂದಾಗಿ ಮತ್ತಷ್ಟು ಕಂಗೆಟ್ಟ ಬಸಪ್ಪ ಶುಕ್ರವಾರ ರಾತ್ರಿ ಬೆಳಗಾವಿಗೆ ಬಂದು ಕಾನೂನು ಬಾಹಿರವಾಗಿ ವಿಶ್ವವಿದ್ಯಾಲಯ ವಿದ್ಯಾರ್ಥಿ ನಿಲಯದಲ್ಲಿರುವ ಅತನ ಗೆಳೆಯರ ಕೋಣೆಯಲ್ಲಿ ಆಶ್ರಯ ಪಡೆದಿದ್ದಾನೆ.

    ನಂತರ ಶನಿವಾರ ಆತನ ಗೆಳೆಯರೊಂದಿಗೆ ಸೇರಿಕೊಂಡು ರೆಜಿಸ್ಟಾರ ಆಫೀಸಗೆ ತೆರಳಿ ನಾನು ಹಲವು ಬಾರಿ ಪರೀಕ್ಷೆ ಬರೆದರೂ ನೀವು ನನ್ನನ್ನು ಪಾಸ್ ಮಾಡುತ್ತಿಲ್ಲ ಎಂದು ಮೌಲ್ಯಮಾಪನ ಕುಲಸಚಿವರೊಂದಿಗೆ ಜಗಳ ಮಾಡಿದ್ದ ಎಂದು ತಿಳಿದು ಬಂದಿದೆ. ಇದಕ್ಕೆ ಕುಲಸಚಿವರು ಮರು ಮೌಲ್ಯಮಾಪನಕ್ಕೆ ಹಾಕುವಂತೆ ಸಲಹೆ ನೀಡಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಆತ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ.

    ಹೇಗಾದರೂ ಮಾಡಿ ಪದವಿ ಪಾಸಾದ ಅಂಕಪಟ್ಟಿ ಪಡೆಯಬೇಕು ಎಂಬ ಹಠದಿಂದ ರೆಜಿಸ್ಟಾರ ಕಚೇರಿಯಲ್ಲಿ ಸುತ್ತಾಡಿ ಎಲ್ಲ ಮಾಹಿತಿ ಕಲೆ ಹಾಕಿ, ರಾತ್ರಿ 1.30 ಗಂಟೆಗೆ ಶೌಚಾಲಯದ ಮುಖಾಂತರ ಕಚೇರಿ ಒಳಗಡೆ ಹೋಗಿ 3 ಗಂಟೆಗಳ ಕಾಲ ಒಳಗಡೆ ಇದ್ದು 300 ಪ್ರಮಾಣ ಪತ್ರ ಹಾಗೂ ಸ್ಕಾನರ್ ಗಳನ್ನು ತೆಗೆದುಕೊಂಡು ಪರಾರಿಯಾಗುವ ಸಮಯದಲ್ಲಿ ಅಲ್ಲಿನ ಸೆಕ್ಯುರಿಟಿ ಗಾರ್ಡ್ ಕಣ್ಣಿಗೆ ಬಿದ್ದಿದ್ದಾನೆ. ತಕ್ಷಣ ಪೋಲಿಸರಿಗೆ ಮಾಹಿತಿ ನೀಡಿದಾಗ ಪೋಲಿಸರು ಆತನನ್ನು ವಶಕ್ಕೆ ಪಡೆದಿದ್ದರು.

    ಕಳ್ಳನಿಗೆ ಆಶ್ರಯ ನೀಡಿದ ವಿದ್ಯಾರ್ಥಿ ಒಕ್ಕೂಟ ಪ್ರತಿನಿಧಿಗಳು?
    ಕಳ್ಳತನ ಆರೋಪಿ ಬಸಪ್ಪ ಶುಕ್ರವಾರ ವಿಶ್ವವಿದ್ಯಾಲಯಕ್ಕೆ ಬಂದು ಕಾನೂನು ಬಾಹಿರವಾಗಿ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದಿದ್ದಾದರೂ ಹೇಗೆ? ಎಂಬ ಪ್ರಶ್ನೆ ವಿಶ್ವವಿದ್ಯಾಲಯದಲ್ಲಿ ಚರ್ಚೆಗೆ ಎಡೆ ಮಾಡಿದೆ. ಯಾಕೆಂದರೆ ಆತ ಈ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಕೂಡಾ ಅಲ್ಲಾ. ಹಾಗಿದ್ದಲ್ಲಿ ಎರಡು ದಿನಗಳ ಕಾಲ ಆತ ಹೇಗೆ ಹಾಸ್ಟೆಲ್ ನಲ್ಲಿ ಇದ್ದು ಮಧ್ಯರಾತ್ರಿ ಕುಲಸಚಿವರ ಕಚೇರಿಗೆ ನುಗ್ಗಿರುವ ವಿಚಾರ ಹಲವು ಅನುಮಾನಗಳನ್ನು ಸೃಷ್ಟಿಸಿದೆ.

    ಒಂದು ಆತನಿಗೆ ಯಾರು ಸಹಾಯ ಮಾಡಿಲ್ಲ ಅನ್ನೋದಾದ್ರೆ ಆತ ಅಷ್ಟೊಂದು ಸರಳವಾಗಿ ರೆಜಿಸ್ಟಾರ್ ಕಚೇರಿಗೆ ನುಗ್ಗಿ ಬೀಗದ ಕೈಗಳನ್ನು ತೆಗೆದುಕೊಂಡು ಕುಲಸಚಿವರ ಕೊಠಡಿಯನ್ನು ಶೋಧಿಸಿದ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಪೋಲಿಸರು ಕಳ್ಳತನ ಸುದ್ದಿ ತಿಳಿಯುತ್ತಿದ್ದಂತೆ ಪಿಐ ಶ್ರೀಶೈಲ ಕೌಜಲಗಿ ಹಾಗೂ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ಆತನ ಕದಿದ್ದ ಎರಡು ಸ್ಕಾನರ್, 300 ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯ ತನಿಖೆ ನಡೆಸಿ ಹಿಂಡಲಗಾ ಜೈಲಿಗೆ ಕಳಿಸಲಾಗಿದೆ.

    ಗೋಮಾಳದಂತಾದ ವಿಧ್ಯಾರ್ಥಿ ನಿಲಯ:
    ವಿಶ್ವವಿದ್ಯಾಲಯ ವಿದ್ಯಾರ್ಥಿ ನಿಲಯಕ್ಕೆ ಹಳೇ ವಿದ್ಯಾರ್ಥಿಗಳು ಅಷ್ಟೇ ಅಲ್ಲದೆ ಅವರ ಸ್ನೇಹಿತರು, ಸಂಬಂಧಿಕರು ಮತ್ತು ಜಿಲ್ಲೆಯ ಸ್ನಾತಕೋತ್ತರ ಕೇಂದ್ರಗಳ ವಿಧ್ಯಾರ್ಥಿಗಳಿಗೆ ಅಕ್ರಮವಾಗಿ ನೆಲೆಸುವ ಆಶ್ರಮವಾಗಿದೆ. ಇದಕ್ಕೆ ಪ್ರತ್ಯಕ್ಷ ಉದಾಹರಣೆ ಈಗ ನಡೆದಿರುವ ಘಟನೆ.

    ಇಂತಹ ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಆಶ್ರಯ ಪಡೆದು ಕಳ್ಳತನ ಮಾಡಿದರೂ ಹಾಸ್ಟೆಲ್ ವಾರ್ಡನ್, ಆಶ್ರಯ ನೀಡಿರುವ ವಿದ್ಯಾರ್ಥಿ ಒಕ್ಕೂಟದ ಪ್ರತಿನಿಧಿಗಳ ಮೇಲೆ ಯಾವ ಕ್ರಮ ಕೈಗೊಂಡಿಲ್ಲ. ಇದರಿಂದ ವಿಶ್ವವಿದ್ಯಾಲಯ ಆಡಳಿತ ಅವ್ಯವಸ್ಥೆ ಹಾಗೂ ಬೇಜವಾಬ್ದಾರಿ ಸ್ಪಷ್ಟವಾಗಿ ಕಾಣುತ್ತಿದೆ.

  • ನೆರೆ ಪೀಡಿತ ಜಿಲ್ಲೆಗಳಿಗೆ ಪಿಯು ಬೋರ್ಡ್ ಅಭಯ – ಅಂಕಪಟ್ಟಿ ಕಳೆದುಕೊಂಡವರಿಗೆ ಹೊಸ ಅಂಕಪಟ್ಟಿ

    ನೆರೆ ಪೀಡಿತ ಜಿಲ್ಲೆಗಳಿಗೆ ಪಿಯು ಬೋರ್ಡ್ ಅಭಯ – ಅಂಕಪಟ್ಟಿ ಕಳೆದುಕೊಂಡವರಿಗೆ ಹೊಸ ಅಂಕಪಟ್ಟಿ

    ಬೆಂಗಳೂರು: ನೆರೆಯಿಂದ ಅಂಕಪಟ್ಟಿ ಕಳೆದುಕೊಂಡಿರುವ ವಿದ್ಯಾರ್ಥಿಗಳ ನೆರವಿಗೆ ಪಿಯುಸಿ ಬೋರ್ಡ್ ಧಾವಿಸಿದೆ.

    ಅಂಕಪಟ್ಟಿ ಕಳೆದುಕೊಂಡ ವಿದ್ಯಾರ್ಥಿಗಳಿಗೆ ಹೊಸದಾಗಿ ಅಂಕಪಟ್ಟಿ ನೀಡಲು ಪಿಯುಸಿ ಬೋರ್ಡ್ ನಿರ್ಧಾರ ಮಾಡಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಪಿಯುಸಿ ಬೋರ್ಡ್, ಅಂಕಪಟ್ಟಿ ಕಳೆದುಕೊಂಡಿರುವ ವಿದ್ಯಾರ್ಥಿಗಳು ಆಯಾ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಹೋಗಿ ಹೊಸ ಅಂಕಪಟ್ಟಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಹೊಸ ಅಂಕಪಟ್ಟಿ ನೀಡಲಾಗುತ್ತೆ ಎಂದು ಬೋರ್ಡ್ ತಿಳಿಸಿದೆ.

     

    ನೆರೆ ಜಿಲ್ಲೆಗಳಲ್ಲಿ ಪ್ರಥಮ ಪಿಯುಸಿಗೆ ದಾಖಲಾತಿಯಾಗುವ ದಿನಾಂಕವನ್ನು ಆಗಸ್ಟ್ 23ವರೆಗೂ ದಿನಾಂಕ ವಿಸ್ತರಣೆ ಮಾಡಿದೆ. ಇದರ ಜೊತೆಗೆ ನೆರೆ ಜಿಲ್ಲೆಗಳ ಶೈಕ್ಷಣಿಕ-ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪಿಯುಸಿ ಬೋರ್ಡ್ ಸಮಿತಿಗಳ ನೇಮಕ ಮಾಡಿದೆ.

    ಜಿಲ್ಲೆಯ ಉಪ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಸಮತಿ ರಚನೆ ಆಗಿದ್ದು, ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ 5 ಜನ ಪ್ರಾಂಶುಪಾಲರು ಸಮಿತಿಯ ಸದಸ್ಯರಾಗಲಿದ್ದಾರೆ. ಈ ಸಮಿತಿ ನೆರೆ ಜಿಲ್ಲೆಗಳ ಶೈಕ್ಷಣಿಕ, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಿದೆ ಅಂತ ಪಿಯುಸಿ ಬೋರ್ಡ್ ತಿಳಿಸಿದೆ.

  • ಆನ್‍ಲೈನ್ ನಲ್ಲೇ ಅಂಕಪಟ್ಟಿ ಪಡೆಯಿರಿ: ಪಿಯುಸಿ ಬೋರ್ಡ್ ಈಗ ಮತ್ತಷ್ಟು ಹೈಟೆಕ್

    ಆನ್‍ಲೈನ್ ನಲ್ಲೇ ಅಂಕಪಟ್ಟಿ ಪಡೆಯಿರಿ: ಪಿಯುಸಿ ಬೋರ್ಡ್ ಈಗ ಮತ್ತಷ್ಟು ಹೈಟೆಕ್

    ಬೆಂಗಳೂರು: ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆಯು ಮತ್ತಷ್ಟು ಹೈಟೆಕ್ ಆಗಿದ್ದು, ಈ ಬಾರಿಯ ಪಿಯು ಅಂಕಪಟ್ಟಿಗಳನ್ನು ಡಿಜಿ ಲಾಕರ್ ನಲ್ಲಿ ಪಡೆಯುವ ಅವಕಾಶ ಕಲ್ಪಿಸಿದೆ.

    ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ಮೊದಲ ಬಾರಿಗೆ ಡಿಜಿ ಲಾಕರ್ ಮೂಲಕ ಅಂಕಪಟ್ಟಿ ನೀಡುವ ಯೋಜನೆ ರೂಪಿಸಿಕೊಂಡಿದ್ದು, ಮತ್ತಷ್ಟು ಹೈಟೆಕ್ ಸೌಲಭ್ಯವನ್ನು ಜಾರಿಗೊಳಿಸಲು ಸಜ್ಜಾಗಿದೆ.

    ಕಳೆದ ಮಾರ್ಚ್ ನಲ್ಲಿ ನಡೆದ ದ್ವೀತಿಯ ಪಿಯುಸಿ ಪರೀಕ್ಷೆಯ ಅಂಕಪಟ್ಟಿಗಳನ್ನು ಡಿಜಿ ಲಾಕರ್ ನಲ್ಲಿ ಅಪ್‍ಲೋಡ್ ಮಾಡಿದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಅಂಕಪಟ್ಟಿಗಳನ್ನು ಡಿಜಿ ಲಾಕರ್ ವೆಬ್ ಸೈಟ್ ನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಕರ್ನಾಟಕ ಪದವಿ ಪೂರ್ವ ಮಂಡಳಿಯ ನಿರ್ದೇಶಕಿ ಶಿಖಾರವರು ತಿಳಿಸಿದ್ದಾರೆ.

    ಏನಿದು ಡಿಜಿ ಲಾಕರ್?
    ಕೇಂದ್ರ ಸರ್ಕಾರವು ಆನ್‍ಲೈನ್‍ಗಳಲ್ಲಿ ಅಂಕಪಟ್ಟಿ ಶೇಖರಣಾ ಮಾಡಿ ನಮಗೆ ಯಾವಾಗ ಬೇಕಾದರೂ ಪಡೆಯಬಹುದಾದ ನೂತನ ಡಿಜಿ ಲಾಕರ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು. ಈ ಡಿಜಿ ಲಾಕರ್ ವೆಬ್‍ಸೈಟ್‍ನಲ್ಲಿ ಒಟ್ಟು 5 ಜಿಬಿವರೆಗಿನ ದಾಖಲೆಗಳನ್ನು ಶೇಖರಿಸಿಡಬಹುದಾಗಿದೆ. ಅಲ್ಲದೇ ಯಾವುದೇ ದಾಖಲೆಗಳ ಪರಿಶೀಲನೆಗೆ ಈ ಡಿಜಿ ಲಾಕರ್ ವ್ಯವಸ್ಥೆ ಬಲು ಸುಲಭವಾಗಿದೆ. ಇದರಲ್ಲಿ ಶೈಕ್ಷಣಿಕ ಪ್ರಮಾಣ ಪತ್ರ, ಅಂಕಪಟ್ಟಿ, ಗುರುತಿನ ಚೀಟಿ ಮೊದಲಾದ ದಾಖಲೆಗಳನ್ನು ಇಮೇಜ್ ರೂಪದಲ್ಲಿ ಸಂಗ್ರಹಿಸಿಡಬಹುದಾಗಿದೆ.

  • ಚಿನ್ನದ ಪದಕ ಪಡೆದಿದ್ದ ಅಂಕಪಟ್ಟಿಗಳು ಕಳೆದಿದ್ದಕ್ಕೆ ಮಾನಸಿಕ ಅಸ್ವಸ್ಥನಾದ!

    ಚಿನ್ನದ ಪದಕ ಪಡೆದಿದ್ದ ಅಂಕಪಟ್ಟಿಗಳು ಕಳೆದಿದ್ದಕ್ಕೆ ಮಾನಸಿಕ ಅಸ್ವಸ್ಥನಾದ!

    ಹಾವೇರಿ: ಮಾನಸಿಕ ಅಸ್ವಸ್ಥನಾಗಿ ಬಳಲುತ್ತಾ ಮನೆಯಲ್ಲೇ ವಾಸವಾಗಿದ್ದ ವ್ಯಕ್ತಿಯನ್ನು ರಕ್ಷಿಸಿ ಪೊಲೀಸರು ಮತ್ತು ಅಧಿಕಾರಿಗಳು ಚಿಕಿತ್ಸೆಗೆ ಎಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿ ನಡೆದಿದೆ.

    ಸಿದ್ದಪ್ಪ ರೇವಣ(40) ಮಾನಸಿಕ ಅಸ್ವಸ್ಥ ವ್ಯಕ್ತಿಯಾಗಿದ್ದು, ಇವರು 2002ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಎಂ.ಕಾಂ ಪದವಿ ಪಡೆದಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಯಾವುದೋ ಕಾರಣಕ್ಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾ ಮನೆಯಲ್ಲೇ ತಂದೆಯೊಂದಿಗೆ ವಾಸವಾಗಿದ್ದರು.

    ಇದೀಗ ಸಿದ್ದಪ್ಪ ಅವರ ಆರೋಗ್ಯದ ಪರಿಸ್ಥಿತಿ ಹದಗೆಡುತ್ತಾ ಬಂದಿದ್ದರಿಂದ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆಡೂರು ಠಾಣೆ ಪೊಲೀಸರು ಮತ್ತು ಆರೋಗ್ಯ ಇಲಾಖೆಯವರು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಿದ್ದಪ್ಪರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ ಎನ್ನಲಾಗಿದೆ. ಸಿದ್ದಪ್ಪರೊಂದಿಗೆ ಅವರ ತಂದೆಯೂ ಆಸ್ಪತ್ರೆಯಲ್ಲಿದ್ದು ಮಗನನ್ನು ನೋಡಿಕೊಳ್ಳುತ್ತಿದ್ದಾರೆ.