T20 ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಸೋತಿದ್ದು ಎಲ್ಲಿ? ಕಳಪೆ ಪ್ರದರ್ಶನಕ್ಕೆ ಕಾರಣ ಏನು?

ದುಬೈ: ಟಿ20 ವಿಶ್ವಕಪ್ ಆರಂಭಕ್ಕೂ ಮೊದಲು ಈ ಬಾರಿ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದ್ದ ಟೀಂ ಇಂಡಿಯಾ ಸತತ ಸೋಲುಗಳಿಂದ ಕಂಗೆಟ್ಟಿದೆ. ಈಗಿನ ಸ್ಥಿತಿ ನೋಡುತ್ತಿದ್ದರೆ ಟೂರ್ನಿಯಿಂದಲೇ ಹೊರಬೀಳುವ ಹಂತದಲ್ಲಿದೆ.

ಟೀಂ ಇಂಡಿಯಾ ಟಿ20 ವಿಶ್ವಕಪ್ ಆರಂಭಕ್ಕೂ ಮೊದಲು ಫೆವರೀಟ್ ಆಗಿ ಗುರುತಿಸಿಕೊಂಡಿತ್ತು. ಜೊತೆಗೆ ತಂಡದಲ್ಲಿ ಬಲಿಷ್ಠ ಆಟಗಾರರ ದಂಡೆ ಇತ್ತು. ಆದರೆ ವಿಶ್ವಕಪ್ ಆರಂಭವಾಗಿ ಎರಡು ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ ಸತತ ಸೋಲಿನಿಂದ ನಿರಾಸೆ ಅನುಭವಿಸಿದೆ. ಸ್ಟಾರ್ ಆಟಗಾರರು ಯಾರು ಕೂಡ ತಂಡಕ್ಕಾಗಿ ಹೋರಾಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದನ್ನೂ ಓದಿ: ಐಪಿಎಲ್‍ನಲ್ಲಿ ಅಬ್ಬರ, ವಿಶ್ವಕಪ್‍ನಲ್ಲಿ ಠುಸ್ ಪಠಾಕಿ – ಭಾರತಕ್ಕೆ ಹೀನಾಯ ಸೋಲು

ಭಾರತ ತಂಡದ ಈ ಸ್ಥಿತಿಗೆ ಪ್ರಮುಖ ಕಾರಣವಾಗಿರುರುವುದು ಐಪಿಎಲ್. ಭಾರತ ತಂಡದಲ್ಲಿರುವ ಬಹುತೇಕ ಆಟಗಾರರು ಐಪಿಎಲ್‍ನಲ್ಲಿ ಫ್ರಾಂಚೈಸಿ ಪರ ಸತತವಾಗಿ ಆಡಿ ಒತ್ತಡಕ್ಕೆ ಒಳಗಾಗಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ ಫ್ರಾಂಚೈಸಿ ಪರ ಆಡುವಾಗ ಯಾವುದೇ ಹೆಚ್ಚಿನ ಒತ್ತಡ ಆಟಗಾರರಿಗೆ ಇರುತ್ತಿರಲಿಲ್ಲ. ಆದರೆ ದೇಶದ ಪರ ಆಡುವಾಗ ಒತ್ತಡ ಆಟಗಾರರ ಮೇಲೆ ಹೆಚ್ಚಿದೆ ಹಾಗಾಗಿ ನಿರೀಕ್ಷಿತ ಮಟ್ಟದ ಪ್ರದರ್ಶನ ಕೊಡಲು ಟೀಂ ಇಂಡಿಯಾ ವಿಫಲತೆ ಕಂಡಿದೆ.

ಭಾರತದ ಸೋಲುಗಳಿಗೆ ಇನ್ನೊಂದು ಪ್ರಮುಖ ಕಾರಣ ಅತೀಯಾದ ಬಯೋ ಬಬಲ್ ಹೌದು ಟೀಂ ಇಂಡಿಯಾ ಕೊರೊನಾ ಕಾರಣದಿಂದಾಗಿ ಸತತ ಬಯೋ ಬಬಲ್‍ನಲ್ಲಿ ಆಡುತ್ತಿದೆ. ಇದರಿಂದಾಗಿ ಆಟಗಾರರಿಗೆ ಹೊಂದಾಣಿಕೆ ಸಮಸ್ಯೆಯಾಗುತ್ತಿದೆ.  ಇದನ್ನೂ ಓದಿ: ಮಂಡಿಯೂರಲು ಒಪ್ಪಿದ ಡಿ ಕಾಕ್ ಶ್ರೀಲಂಕಾ ವಿರುದ್ಧ ಪಂದ್ಯಕ್ಕೆ ಹಾಜರ್

ಟಿ20 ವಿಶ್ವಕಪ್ ಆಯ್ಕೆ ಮಾಡಿರುವ ಭಾರತ ತಂಡದಲ್ಲಿ ಪ್ರಮುಖವಾಗಿ ಟಿ20 ಸ್ಪೆಷಲಿಸ್ಟ್ ಎನಿಸಿಕೊಂಡಿರುವ ಆಟಗಾರರು ಇದ್ದರೂ ಕೂಡ ಅವಕಾಶ ಸಿಗುತ್ತಿಲ್ಲ. ಪ್ರಸ್ತುತ ತಂಡದಲ್ಲಿರುವವರು ಮತ್ತೆ, ಮತ್ತೆ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಈ ಎಲ್ಲದರ ಪರಿಣಾಮವಾಗಿ ಇದೀಗ ಟೀಂ ಇಂಡಿಯಾದ ಸೆಮಿ ಫೈನಲ್‌ ಹಾದಿ ಬಂದ್‌ ಆಗಿದ್ದು, ಪವಾಡ ನಡೆದರೆ ಮಾತ್ರ ಪ್ರವೇಶ ಪಡೆಯಬಹುದು. ಇದನ್ನೂ ಓದಿ: ಆರ್​ಸಿಬಿ, ಬೆಂಗಳೂರು ಬುಲ್ಸ್ ಜೊತೆಗಿತ್ತು ಅಪ್ಪು ಒಡನಾಟ

Comments

Leave a Reply

Your email address will not be published. Required fields are marked *