ಸ್ಕಾಟ್ಲೆಂಡ್ ಮೇಲೆ ಸವಾರಿ ಮಾಡಿದ ಭಾರತ – 8 ವಿಕೆಟ್‍ಗಳ ಜಯದೊಂದಿಗೆ ಸೆಮೀಸ್ ಆಸೆ ಜೀವಂತ

ದುಬೈ: ಸ್ಕಾಟ್ಲೆಂಡ್ ತಂಡದ ಮೇಲೆ ಬೌಲಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ಮಿಂಚಿದ ಭಾರತ ತಂಡ 8 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿ ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಂಡಿದೆ.

ಸ್ಕಾಟ್ಲೆಂಡ್ ನೀಡಿದ 86 ರನ್‍ಗಳ ಗುರಿ ಬೆನ್ನಟ್ಟಿದ ಭಾರತ ತಂಡ 6.3 ಓವರ್‍ ಗಳಲ್ಲಿ 89 ರನ್ ಬಾರಿಸಿ 8 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿದೆ. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಬೌಂಡರಿ, ಸಿಕ್ಸರ್‍ ಗಳ ಸುರಿಮಳೆ ಗೈದರು. ಈ ಜೋಡಿ ಮೊದಲ ವಿಕೆಟ್‍ಗೆ 70 ರನ್ (30 ಎಸೆತ) ಜೊತೆಯಾಟವಾಡಿತು. ರೋಹಿತ್ ಶರ್ಮಾ 30 ರನ್ (16 ಎಸೆತ, 5 ಬೌಂಡರಿ, 1 ಸಿಕ್ಸ್) ಔಟ್ ಆದರೆ, ರಾಹುಲ್ 50 ರನ್ (19 ಎಸೆತ, 6 ಬೌಂಡರಿ, 3 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು. ಕಡೆಗೆ ಭಾರತ ತಂಡ 6.3 ಓವರ್‍ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 89ರನ್ ಸಿಡಿಸಿ ಜಯ ದಾಖಲಿಸಿತು. ಈ ಮೂಲಕ ಭಾರತ ತಂಡದ ನೆಟ್ ರನ್ ರೇಟ್ +1.619ಕ್ಕೆ ಏರಿದೆ. ಇದನ್ನೂ ಓದಿ: T20 ವಿಶ್ವಕಪ್‍ನಲ್ಲಿ ಡಲ್ ಆದ ಚಾಂಪಿಯನ್ ಆಟಗಾರರು – ಸೂಪರ್ 12 ಹಂತದಲ್ಲೇ ಔಟ್

ಜಡೇಜಾ ಜಾದೂ, ಶಮಿ ಸಖತ್ ಬೌಲಿಂಗ್

ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ತಂಡ ಭಾರತ ತಂಡದ ಆಲ್‍ರೌಂಡರ್ ರವೀಂದ್ರ ಜಡೇಜಾ ಮತ್ತು ವೇಗಿ ಮೊಹಮ್ಮದ್ ಶಮಿ ದಾಳಿಗೆ ತತ್ತರಿಸಿದ ಸ್ಕಾಟ್ಲೆಂಡ್ ಅಲ್ಪ ಮೊತ್ತಕ್ಕೆ ಕುಸಿಯಿತು. ಸ್ಕಾಟ್ಲೆಂಡ್ ಪರ ಜಾರ್ಜ್ ಮುನ್ಸಿ 24 ರನ್ (19 ಎಸೆತ, 4 ಬೌಂಡರಿ, 1 ಸಿಕ್ಸ್) ಕ್ಯಾಲಮ್ ಮ್ಯಾಕ್ಲಿಯೋಡ್ 16 ರನ್ (28 ಎಸೆತ), ಮೈಕೆಲ್ ಲೀಸ್ಕ್ 21 ರನ್ (12 ಎಸೆತ, 2 ಬೌಂಡರಿ, 1 ಸಿಕ್ಸ್) ಮಾರ್ಕ್ ವ್ಯಾಟ್ 14 ರನ್ (13 ಎಸೆತ, 2 ಬೌಂಡರಿ) ಹೊರತುಪಡಿಸಿ ಉಳಿದ 7 ಜನ ಆಟಗಾರರು ಒಂದಂಕಿ ಮೊತ್ತಕ್ಕೆ ಔಟ್ ಆದರು. ಸ್ಕಾಟ್ಲೆಂಡ್ 17.4 ಓವರ್‍ ಗಳಲ್ಲಿ 85 ರನ್‍ಗೆ ಆಲ್‍ಔಟ್ ಆಯಿತು. ಇದನ್ನೂ ಓದಿ: ಟೀಂ ಇಂಡಿಯಾ ಸೆಮಿಫೈನಲ್ ಕನಸು ನನಸಾಗಲು ಇದೊಂದೇ ಮಾರ್ಗ

ಭಾರತದ ಪರ ಜಡೇಜಾ ಮತ್ತು ಶಮಿ ತಲಾ 3 ವಿಕೆಟ್ ಕಿತ್ತು ಮಿಂಚಿದರೆ, ಬುಮ್ರಾ 2 ಮತ್ತು ಅಶ್ವಿನ್ 1 ವಿಕೆಟ್ ಪಡೆದರು.

Comments

Leave a Reply

Your email address will not be published. Required fields are marked *