ತನ್ನೂರಿನ ಯುವ ಕ್ರಿಕೆಟಿಗರಿಗಾಗಿ ಸ್ವಂತ ಹಣದಲ್ಲಿ ಕ್ರಿಕೆಟ್ ಮೈದಾನ ತೆರೆದ ನಟರಾಜನ್

ಚೆನ್ನೈ: ಟೀಂ ಇಂಡಿಯಾದ ವೇಗಿ ಟಿ.ನಟರಾಜನ್ ತಮ್ಮ ಹಳ್ಳಿಯಲ್ಲಿ ಯುವ ಕ್ರಿಕೆಟಿಗರಿಗಾಗಿ ಸ್ವಂತ ಹಣದಲ್ಲಿ ಕ್ರಿಕೆಟ್ ಮೈದಾನವೊಂದನ್ನು ಆರಂಭಿಸಿದ್ದಾರೆ.

ಮೂಲತಃ ತಮಿಳುನಾಡಿನ ಚಿನ್ನಪ್ಪಂಪಟ್ಟಿ ಹಳ್ಳಿಯವರಾದ ನಟರಾಜನ್ ಐಪಿಎಲ್ ಮೂಲಕ ಬೆಳಕಿಗೆ ಬಂದ ಪ್ರತಿಭೆ. ನಟರಾಜನ್ ತಮ್ಮ ಯಾರ್ಕರ್ ಬೌಲಿಂಗ್ ಮೂಲಕ ಎಲ್ಲರ ಗಮನಸೆಳೆದಿದ್ದರು. ಈ ಮೂಲಕ ಟೀಂ ಇಂಡಿಯಾದ ಮೂರು ಮಾದರಿ ಕ್ರಿಕೆಟ್ ತಂಡಕ್ಕೂ ಕೂಡ ಪಾದಾರ್ಪಣೆ ಮಾಡಿದ್ದರು. ಆದರೆ ಆ ಬಳಿಕ ಗಾಯಳುವಾಗಿ ತಂಡದಿಂದ ಹೊರಗುಳಿದಿದ್ದಾರೆ. ಇದನ್ನೂ ಓದಿ: ಕೊಹ್ಲಿ Vs ರೋಹಿತ್ ನಾಯಕತ್ವ ಫೈಟ್ – ಸಂಕಷ್ಟದಲ್ಲಿ ಟೀಂ ಇಂಡಿಯಾ

ಈ ಹಿಂದೆ ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ತಮ್ಮ ಊರಿನ ಯುವ ಆಟಗಾರರಿಗೆ ಆಡಲು ಕ್ರಿಕೆಟ್ ಮೈದಾನವಿಲ್ಲ ನಮ್ಮ ಊರಿನಲ್ಲಿ ಕ್ರಿಕೆಟ್ ಮೈದಾನವೊಂದನ್ನು ತೆರೆಯುವ ಆಸೆಯೊಂದಿದೆ ಎಂದು ಹೇಳಿಕೊಂಡಿದ್ದರು. ಇದೀಗ ತುಂಬಾ ಸಂತೋಷದಿಂದ ನಮ್ಮ ಊರಿನಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ನೂತನವಾಗಿ ತೆರೆಯಲಾಗಿರುವ ಕ್ರಿಕೆಟ್ ಮೈದಾನ ಕುಳಿತುಕೊಳ್ಳಲು ಸಿದ್ಧವಾಗಿದೆ. ಇದರ ಹೆಸರು ಕೂಡ ನಟರಾಜನ್ ಕ್ರಿಕೆಟ್ ಗ್ರೌಂಡ್ (NCG) ಎಂದಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದೆ, ಈ ವರ್ಷ ನನ್ನದೆ ಮೈದಾನದಲ್ಲಿ ಕೂತಿದ್ದೇನೆ ಎಂದು ಟ್ವಿಟ್ಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಹೇಳದೇ ಕೇಳದೇ ನಾಯಕ ಪಟ್ಟದಿಂದ ತೆಗೆದ್ರು – ಮೌನ ಮುರಿದ ಕೊಹ್ಲಿ

13ನೇ ಆವೃತ್ತಿಯ ಐಪಿಎಲ್‍ನಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡದ ಪರ ತಮ್ಮ ಯಾರ್ಕರ್ ಮೂಲಕ ಎದುರಾಳಿ ಬ್ಯಾಟ್ಸ್‌ಮ್ಯಾನ್‌ಗಳನ್ನು ನಟರಾಜ ಕಂಗೇಡಿಸಿದ್ದರು. ಅವರ ಯಾರ್ಕರ್ ಬೌಲಿಂಗ್‍ಗೆ ಮಾಜಿ ಆಟಗಾರರು ಸಹಿತ ಹಿರಿಯ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಬಳಿಕ ಟೀಂ ಇಂಡಿಯಾಗೆ ಆಯ್ಕೆಯಾದ ನಟರಾಜನ್ 1 ಟೆಸ್ಟ್, 2 ಏಕದಿನ ಮತ್ತು 4 ಟಿ20 ಪಂದ್ಯಗಳಿಂದ ಒಟ್ಟು 13 ವಿಕೆಟ್ ಪಡೆದಿದ್ದಾರೆ.

Comments

Leave a Reply

Your email address will not be published. Required fields are marked *