ಸ್ವಿಗ್ಗಿ ಮೂಲಕ ಗಾಂಜಾ ಸಪ್ಲೈ – 7 ಮಂದಿ ಬಂಧನ

ಬೆಂಗಳೂರು: ಲಾಕ್‍ಡೌನ್ ನಂತಹ ಕಷ್ಟದ ಪರಿಸ್ಥಿತಿಯಲ್ಲೂ, ಸ್ಚಿಗ್ಗಿ ಡೆಲಿವರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿತು. ಆದರೆ ಇದನ್ನೇ ದುರುಪಯೋಗ ಮಾಡ್ಕೊಂಡ ಕೆಲವರು, ಸ್ವಿಗ್ಗಿ ಮೂಲಕವೇ ಗಾಂಜಾ ಸಪ್ಲೈ ಮಾಡುತ್ತಿದ್ರು ಅನ್ನೋ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.

ಬೆಂಗಳೂರಿನ ಎನ್‍ಸಿಬಿ ಅಧಿಕಾರಿಗಳು ಇಂತದ್ದೊಂದು ಕಾರ್ಯಾಚರಣೆ ನಡೆಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸ್ವಿಗ್ಗಿ  ಬಾಕ್ಸ್‌ಗಳಲ್ಲಿ ಊಟದ ಜೊತೆಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಇಬ್ಬರು ಎನ್‍ಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ಆ ಇಬ್ಬರನ್ನು ತೀವ್ರ ವಿಚಾರಣೆ ನಡೆಸಿದ ಅಧಿಕಾರಿಗಳಿಗೆ ಮತ್ತೆ ಐವರು ಇದೇ ರೀತಿ ಸ್ವಿಗ್ಗಿ ಮೂಲಕ ಡ್ರಗ್ಸ್ ಸಪ್ಲೈ ಮಾಡುತ್ತಿರೋದು ಪತ್ತೆಯಾಗಿತ್ತು.

ಬೆಂಗಳೂರಿನ ಪ್ರತಿಷ್ಠಿತ ಅಪಾರ್ಟ್ಮೆಂಟ್, ಪ್ರತಿಷ್ಠಿತ ಕಾಲೇಜುಗಳು, ಮನೆಗಳಿಗೆ ಪುಡ್ ಡೆಲಿವರಿ ಮಾಡುವ ನೆಪದಲ್ಲಿ ಬೇರೆ ಬೇರೆ ರೀತಿಯ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಈ ಹಿಂದೆಯೂ ಕೂಡ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು. ಇದನ್ನೂ ಓದಿ:  ಈ ಶತಮಾನದ ರಾಕ್ಷಸಿ ಕೃತ್ಯ ಎಸಗಿರೋ ತಾಲಿಬಾನ್ ಜೊತೆ RSS ಹೋಲಿಕೆ ಸರಿಯಲ್ಲ: ಶ್ರೀನಿವಾಸ್ ಪ್ರಸಾದ್

ಇಂದು ಏಳು ಜನರನ್ನು ಬಂಧಿಸಿರುವ ಅಧಿಕಾರಿಗಳು, ಬರೋಬ್ಬರಿ 142 ಕೆಜಿ ಹೈಡ್ರೋ ಗಾಂಜಾ ವಶಕ್ಕೆ ಪಡೆದಿದ್ದಾರೆ. ಈ ಗಾಂಜಾ ಎಲ್ಲಿಂದ ಬರುತ್ತಿತ್ತು, ಇದರ ಮೂಲ ಎಲ್ಲಿ ಅನ್ನೋದರ ಬಗ್ಗೆ ತನಿಖೆ ಮುಂದುವರಿದಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಸಿಗಬೇಕಿದೆ.

ಅಗತ್ಯ ಸೇವೆಗಳಿಗೆ ಸರ್ಕಾರ ಕೊಟ್ಟಿರುವ ಅವಕಾಶ ವನ್ನು ಈ ರೀತಿ ದುರುಪಯೋಗ ಮಾಡ್ಕೊಂಡಿರುವ ಬಗ್ಗೆ ಪೊಲೀಸರು ಕೂಡ ಗಮನ ಹರಿಸಿದ್ದು, ಬರೇ ಡ್ರಗ್ಸ್ ಅಲ್ದೇ, ಮದ್ಯ ಸೇರಿದಂತೆ ಬೇರೆ ಬೇರೆ ರೀತಿಯ ಅಕ್ರಮ ವಸ್ತುಗಳ ಸಾಗಾಟ ಮಾಡುತ್ತಿರುವುದು ಕೂಡ ಅಧಿಕಾರಿಗಳ ತನಿಖೆ ವೇಳೆ ಬಹಿರಂಗವಾಗಿದೆ.

Comments

Leave a Reply

Your email address will not be published. Required fields are marked *