ಸ್ವೀಡನ್ ಪ್ರಥಮ ಮಹಿಳಾ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿ ಒಂದೇ ದಿನಕ್ಕೆ ರಾಜೀನಾಮೆ ನೀಡಿದ ಆ್ಯಂಡರ್ಸನ್‌

ಸ್ಟಾಕ್‌ಹೋಮ್‌: ಸ್ವೀಡನ್‌ ದೇಶದ ಪ್ರಥಮ ಮಹಿಳಾ ಪ್ರಧಾನ ಮಂತ್ರಿ ಮ್ಯಾಗ್ಡಲೀನಾ ಆ್ಯಂಡರ್ಸನ್‌ ಅಧಿಕಾರ ವಹಿಸಿಕೊಂಡ 12 ಗಂಟೆಯೊಳಗಡೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಗ್ರೀನ್ಸ್‌ ಪಕ್ಷವು ಆ್ಯಂಡರ್ಸನ್‌ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು. ಈ ವೇಳೆ ಆಂಡರ್ಸನ್‌ ಅವರನ್ನು ನಾಯಕಿ ಎಂದು ಘೋಷಿಸಿದ ನಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಗ್ರೀನ್ಸ್‌ ಪಕ್ಷವು ಮೈತ್ರಿಯಿಂದ ಹೊರನಡೆದಿದ್ದು, ಆ್ಯಂಡರ್ಸನ್‌ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿದೆ. ಜೊತೆಗೆ ತಮ್ಮ ಬಜೆಟ್‌ ಮಂಡಿಸುವಲ್ಲಿಯೂ ವಿಫಲರಾಗಿದ್ದಾರೆ. ಇದನ್ನೂ ಓದಿ: ಕತ್ರಿನಾ, ವಿಕ್ಕಿ ಮದುವೆಯಲ್ಲಿ ಅತಿಥಿಗಳ ಮೊಬೈಲ್‌ ಬಳಕೆಗೆ ನಿಷೇಧ

ವಲಸಿಗರ ವಿರೋಧಿ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಲಾಯಿತು. ಆದರೆ ಮಸೂದೆಗೆ ಗ್ರೀನ್ಸ್‌ ಪಕ್ಷವು ವಿರೋಧ ವ್ಯಕ್ತಪಡಿಸಿ ಮೈತ್ರಿಯಿಂದ ಹೊರನಡೆದಿದೆ ಎನ್ನಲಾಗಿದೆ. ಇದಾದ ಬಳಿಕ, “ನಾನು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸ್ಪೀಕರ್‌ಗೆ ತಿಳಿಸಿದ್ದೇನೆ” ಎಂದು ಆ್ಯಂಡರ್ಸನ್‌ ಪ್ರತಿಕ್ರಿಯಿಸಿದ್ದಾರೆ.

ಮೊದಲ ಬಾರಿಗೆ ಬಲಪಂಥೀಯರಿಗಾಗಿ ರೂಪಿಸಿರುವ ಮಸೂದೆ ಇದಾಗಿದೆ. ಅದಕ್ಕೆ ನಮ್ಮ ವಿರೋಧವಿದೆ ಎಂದು ಗ್ರೀನ್ಸ್‌ ಪಕ್ಷವು ತಿಳಿಸಿದೆ. ಇದನ್ನೂ ಓದಿ: ಅಮೆರಿಕ, ಭಾರತದ ತಂತ್ರಕ್ಕೆ ಒಪೆಕ್‌ ಗರಂ – ಮತ್ತೆ ಏರಿಕೆ ಆಗುತ್ತಾ ತೈಲ ಬೆಲೆ?

ಆಂಡರ್ಸನ್‌ ಅವರು ಬುಧವಾರವಷ್ಟೇ ಪ್ರಧಾನಿಯಾಗಿ ಅಧಿಕಾರಿ ಸ್ವೀಕರಿಸಿದ್ದರು. ರಾಜಕೀಯ ಪಲ್ಲಟದಿಂದಾಗಿ ಮಾರನೇ ದಿನವೇ ರಾಜೀನಾಮೆ ನೀಡಿದ್ದಾರೆ. ಸ್ವತಂತ್ರವಾಗಿ ಸರ್ಕಾರ ರಚಿಸಿ ಮತ್ತೆ ಪ್ರಧಾನಿಯಾಗುವ ಇಂಗಿತವನ್ನೂ ಅವರು ವ್ಯಕ್ತಪಡಿಸಿದ್ದಾರೆ. ‌

Comments

Leave a Reply

Your email address will not be published. Required fields are marked *