40 ವರ್ಷಗಳ ನಂತರ ತನ್ನ ಮೂಲ ಹುಡುಕುತ್ತಾ ಬಂದ ಸ್ವೀಡನ್ ಪ್ರಜೆ!

ಧಾರವಾಡ: ಸ್ವೀಡನ್ ಪ್ರಜೆಯೊಬ್ಬರು ಧಾರವಾಡದಲ್ಲಿ ತನ್ನ ಮೂಲ ಹುಡುಕುತ್ತಿದ್ದಾರೆ. 40 ವರ್ಷಗಳ ಹಿಂದೆ ದತ್ತು ಹೋಗಿದ್ದ ವ್ಯಕ್ತಿ ಇದೀಗ ತನ್ನ ಮೂಲ ಕಂಡುಕೊಳ್ಳಲು ಪ್ರಯತ್ನ ನಡೆಸಿದ್ದಾರೆ.

40 ವರ್ಷಗಳ ಹಿಂದೆ ಸ್ವೀಡನ್‍ನಿಂದ ಬಂದ ದಂಪತಿ ಅನಾಥಾಶ್ರಮದಿಂದ ದತ್ತು ವ್ಯಕ್ತಿ ಈಗ ಮೂಲ ಪಾಲಕರ ನೆನಪು ಮಾಡಿಕೊಂಡು ಧಾರವಾಡ ನನ್ನೂರು, ನಾನು ಧಾರವಾಡದವನೆಂದು ಹೇಳಿಕೊಂಡಿದ್ದಾರೆ. ಪಂತು ಜೋಹಾನ್ ಪಾಮ್ಕ್ವಿಸ್ಟ್ ಎಂಬ ವ್ಯಕ್ತಿ ಸೋಶಿಯಲ್ ಮೀಡಿಯಾ ಮೂಲಕ ತನ್ನವರಿಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಹಿಜಬ್ ಫೈಟ್ – ಪದವಿ ಪೂರ್ವ ಕಾಲೇಜು ನಿರ್ದೇಶಕಿ ಎತ್ತಂಗಡಿ!

ಟ್ವೀಟರ್ ಮತ್ತು ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿ ಪಿಎಂ ಮತ್ತು ಸಿಎಂ ಕಚೇರಿಗೆ ಪೋಸ್ಟ್ ಟ್ಯಾಗ್ ಮಾಡಿದ್ದಾರೆ. ಈ ಹಿನ್ನೆಲೆ ಆತನ ಮೂಲ ಹುಡುಕುವಂತೆ ಧಾರವಾಡ ಎಸ್ಪಿಗೆ ಮೇಲಾಧಿಕಾರಿಗಳಿಂದ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ತನ್ನ ಧಾರವಾಡ ಹೆಸರು ಪಂತು ಎಂದು ಹೇಳಿಕೊಂಡಿದ್ದು, ತಾಯಿಯ ಅಸ್ಪಷ್ಟ ಮುಖ, ಎಮ್ಮೆ ಹಾಲು ಕುಡಿಯೋದು, ಓರ್ವ ವೃದ್ಧ, ಪೊಲೀಸರ ಮುಂದೆ ಅಳುತ್ತಾ ನಿಂತ ನೆನಪು ಹಂಚಿಕೊಂಡಿದ್ದಾರೆ. ಪಂತು ಸದ್ಯ ಸ್ವೀಡನ್‍ನಲ್ಲಿ ಚಿತ್ರಕಲಾವಿದನಾಗಿದ್ದಾರೆ. ಬಾಲ್ಯದ ಫೋಟೋ ಸಮೇತ ಪೋಸ್ಟ್ ಮಾಡಿದ್ದಾರೆ.

ನನ್ನ ಬಳಿ ದಾಖಲೆಗಳಿಲ್ಲ ಇದೊಂದೇ ಫೋಟೋ ಇರೋದು ಅಂತಾ ಪ್ರಸ್ತಾಪಿಸಿದ್ದು, ನನ್ನವರು ಯಾರಾದ್ರೂ ಇದ್ರೆ ಸಹಾಯಕ್ಕೆ ಬನ್ನಿ ಅಂತಾ ಅಳಲು ತೋಡಿಕೊಂಡಿದ್ದಾರೆ. ಧಾರವಾಡದಲ್ಲಿ 1980ರಲ್ಲಿ ಪಂತು ಪಾಲಕರಿಂದ ದೂರ ಹೋಗಿದ್ದ. ಆ ವೇಳೆ ಪೊಲೀಸರಿಗೆ ಸಿಕ್ಕಿದ್ದ ಬಾಲಕ ಪಂತುನನ್ನು ಪೊಲೀಸರು ಅನಾಥಾಶ್ರಮಕ್ಕೆ ಸೇರಿಸಿದ್ದರು. ಇದನ್ನೂ ಓದಿ: ಚಹಾ ಮಾರಾಟ ಮಾಡ್ತಿದ್ದವ ಒಂದೇ ಪ್ರಯತ್ನಕ್ಕೆ NEET ಪಾಸ್ – ದೆಹಲಿಯಲ್ಲಿ AIIMS ಪ್ರವೇಶಕ್ಕೆ ಸಿದ್ಧ

ಅನಾಥಾಶ್ರಮದಿಂದ ಸ್ವೀಡನ್ ದಂಪತಿ ಅವರನ್ನು ದತ್ತು ಪಡೆದುಕೊಂಡಿದ್ದರು. ದತ್ತು ಪಡೆದುಕೊಂಡು ಸ್ವೀಡನ್.ಗೆ ಕರೆದೊಯ್ದಿದ್ದರು. ಪಂತುಗೆ ಈಗ 43 ವರ್ಷ ವಯಸ್ಸು ನಾಲ್ಕು ದಶಕದ ಬಳಿಕ ಮೂಲ ಪಾಲಕರ ನೆನಪು ಪಂತುಗೆ ಕಾಡುತ್ತಿದೆ.

Comments

Leave a Reply

Your email address will not be published. Required fields are marked *