ಸ್ವಾಮೀಜಿ ಸಾವಿನ ಸುತ್ತ ಅನುಮಾನಗಳ ಹುತ್ತ

– ಹೃದಯಾಘಾತವಾ, ಆತ್ಮಹತ್ಯೆಯಾ?

ಮೈಸೂರು: ಸ್ವಾಮೀಜಿಯ ಸಾವಿನ ಸುತ್ತ ಅನುಮಾನಗಳ ಹುತ್ತ ಎದ್ದಿದ್ದು, ಮಠದ ಶಿಷ್ಯರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳುತ್ತಿದ್ದರೆ, ಗ್ರಾಮಸ್ಥರು ಆತ್ಮಹತ್ಯೆ ಎಂದು ಹೇಳುತ್ತಿದ್ದಾರೆ.

ಮೈಸೂರು ಜಿಲ್ಲೆಯ ಟಿ.ನರಸೀಪುರದ ಬೆನಕಹಳ್ಳಿ ಗ್ರಾಮದ ಪಟ್ಟದ ಮಠದ ಮಹದೇವ ಸ್ವಾಮೀಜಿ(55) ಅನುಮಾನಸ್ಪದವಾಗಿ ಮೃತಪಟ್ಟಿದ್ದಾರೆ. ಬೆಳಗ್ಗೆಯಾದರೂ ಸ್ವಾಮೀಜಿ ಕೊಣೆಯಿಂದ ಹೊರಗೆ ಬಾರದಿದ್ದಾಗ ಬಾಗಿಲು ಮುರಿದು ಒಳಗೆ ಹೋದೆವು. ಆಗ ಸ್ವಾಮೀಜಿ ನಿಧನ ವಿಚಾರ ಬೆಳಕಿಗೆ ಬಂದಿದೆ. ಮಠದಲ್ಲಿ ಮಲಗಿದ್ದ ವೇಳೆಯೇ ಸ್ವಾಮೀಜಿಗೆ ಹೃದಯಾಘಾತವಾಗಿದೆ. ಹೀಗಾಗಿ ಸ್ವಾಮೀಜಿ ಸಾವನ್ನಪ್ಪಿದ್ದಾರೆ ಎಂದು ಮಠದ ಶಿಷ್ಯ ವರ್ಗ ಹೇಳುತ್ತಿದೆ.

ಆದರೆ ಸ್ವಾಮೀಜಿ ಸಾವಿನ ಬಗ್ಗೆ ಗ್ರಾಮದಲ್ಲಿ ಹಲವು ರೀತಿಯ ವದಂತಿ ಹಬ್ಬಿವೆ. ಇದು ಹೃದಯಾಘಾತವಲ್ಲ, ಆತ್ಮಹತ್ಯೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಗ್ರಾಮಸ್ಥರ ಈ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ನಿರ್ಧಾರಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಸ್ವಾಮೀಜಿ ಸಾವಿಗೆ ಕಾರಣ ಸ್ಪಷ್ಟವಾಗಲಿದೆ.

Comments

Leave a Reply

Your email address will not be published. Required fields are marked *