ವಾಜಪೇಯಿ ಅಂತಿಮ ದರ್ಶನಕ್ಕೆ ತೆರಳೋವಾಗ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ

ನವದೆಹಲಿ: ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮೇಲೆ ಹಲ್ಲೆ ನಡೆಸಿದ ಘಟನೆ ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ಇಂದು ಮಧ್ಯಾಹ್ನ  ನಡೆದಿದೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ದರ್ಶನ ಪಡೆಯಲು ತೆರಳುತ್ತಿದ್ದ ವೇಳೆ ಅಗ್ನಿವೇಶ್ ಮೇಲೆ ಕೆಲವರು ದಾಳಿ ನಡೆಸಿ ಹಲ್ಲೆ ನಡೆಸಿದ್ದಾರೆ.

ಅಗ್ನಿವೇಶ್ ಮೇಲೆ ದಾಳಿ ನಡೆಸಿರುವ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ವಿಡಿಯೋದಲ್ಲಿ ಜನರು ಗುಂಪೊಂದು ಆಗ್ನಿವೇಶ್ ಮೇಲೆ ದಾಳಿ ನಡೆಸಿ ಥಳಿಸುತ್ತಿರುವ ದೃಶ್ಯಗಳನ್ನು ಕಾಣಬಹುದಾಗಿದೆ. ಅಲ್ಲದೇ ಮಹಿಳೆಯೊಬ್ಬರು ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲ ಮಂದಿ ಅವರನ್ನು ಗುಂಪಿನಿಂದ ರಕ್ಷಿಸಿ ದೂರ ಕರೆದ್ಯೊದಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆಯಷ್ಟೇ ಭಾರತೀಯ ಯುವ ಜನತಾ ಮೋರ್ಚಾ (ಬಿಜೆವೈಎಂ) ಕಾರ್ಯಕರ್ತರು ಜಾರ್ಖಂಡ್ ನ ಪಾಕೂರ್ ಎಂಬಲ್ಲಿ ಸ್ವಾಮಿ ಅಗ್ನಿವೇಶ್ ಮೇಲೆ ದಾಳಿ ನಡೆಸಿ ಹಲ್ಲೆ ನಡೆಸಿದ್ದರು. ಈ ಮೇಲೆ ಅಗ್ನಿವೇಶ್ ಪ್ರತಿಕ್ರಿಯೆ ನೀಡಿ ತಮ್ಮ ಮೇಲಿನ ದಾಳಿ ಪ್ರಯೋಜಿತವಾಗಿ ನಡೆದಿದ್ದು ಎಂದು ಆರೋಪಿಸಿದ್ದರು.

ನನ್ನ ಮೇಲೆ ಹಲ್ಲೆ ನಡೆಸುವುದಕ್ಕೂ ಮುನ್ನ ಕಾರ್ಯಕ್ರಮದ ಹೊರ ಆವರಣದಲ್ಲಿ ಕೆಲ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ತಮ್ಮ ಗಮನಕ್ಕೆ ಬಂದಿತ್ತು. ಆದರೆ ಈ ವೇಳೆ ಅವರಿಗೆ ತಮ್ಮ ಜೊತೆ ಮಾತುಕತೆ ನಡೆಸಲು ಮುಕ್ತ ಆಹ್ವಾನ ನೀಡುವುದಾಗಿ ತಿಳಿಸಿದ್ದೆ. ಆದರೆ ಯಾರೊಬ್ಬರು ಇದಕ್ಕೆ ಬರಲಿಲ್ಲ ಎಂದು ಅಗ್ನಿವೇಶ್ ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *