ಶ್ರೀದೇವಿ ಸಾವಿನ ಸುತ್ತ ಅನುಮಾನದ ಹುತ್ತ

ಮುಂಬೈ: ದಶಕಗಳ ಕಾಲ ಭಾರತೀಯ ಸಿನಿರಂಗದಲ್ಲಿ ಮೆರೆದ ನಟಿ ಶ್ರೀದೇವಿಯ ಸಾವು ನಿಗೂಢವಾಗಿದ್ದು, ಮೃತದೇಹ ಭಾರತಕ್ಕೆ ಬರೋದು ಇನ್ನೂ ವಿಳಂಬವಾಗಲಿದೆ.

ಆಲ್ ರಶೀದ್ ಆಸ್ಪತ್ರೆಯ ಮರಣೋತ್ತರ ವರದಿಯನ್ನ ಬಿಡುಗಡೆ ಮಾಡಿರೋ ದುಬೈ ಪೊಲೀಸರು ಇದು ಹೃದಯಾಘಾತವಲ್ಲ. ಆಕಸ್ಮಿಕವಾಗಿ ಬಾತ್‍ಟಬ್‍ನಲ್ಲಿ ಮುಳುಗಿ ಸತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಜೊತೆಗೆ ಶ್ರೀದೇವಿ ನೀರಿನಲ್ಲಿ ಮುಳುಗುವಾಗ ಆಲ್ಕೋಹಾಲ್ ಸೇವಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂದು ಹೇಳಿದ್ದಾರೆ.

ಬಾತ್‍ಟಬ್ ನಲ್ಲಿದ್ದ 1.5 ಅಡಿ ನೀರಿನಲ್ಲಿ ಶ್ರೀದೇವಿ ಮುಳುಗಿದಾದ್ದರೂ ಹೇಗೆ ಎನ್ನುವುದು ಕಗ್ಗಂಟಾಗಿ ಉಳಿದಿದೆ. ಇನ್ನು, ಪ್ರಕರಣವನ್ನು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್‍ಗೆ ಹಸ್ತಾಂತರಿಸಿದ್ದು, ಪ್ರಾಸಿಕ್ಯೂಷನ್ ಕಾನೂನು ಪ್ರಕ್ರಿಯೆ ಮುಂದುವರಿಸಿದೆ.

ಈಗಾಗಲೇ ಶ್ರೀದೇವಿ ಮೃತದೇಹ ಪತ್ತೆಯಾಗಿದ್ದ ಎಮಿರೇಟ್ಸ್ ಹೋಟೆಲ್‍ನ 2201 ನಂಬರ್‍ನ ರೂಂಗೆ ಬೀಗ ಜಡಿದಿರುವ ಪೊಲೀಸರು, ಹೋಟೆಲ್ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ ಪತಿ ಬೋನಿ ಕಪೂರ್ ರನ್ನೂ ಸತತ 18 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ.

ಮೃತದೇಹ ಭಾರತಕ್ಕೆ ಮರಳಲು ವಿಳಂಬ ಯಾಕೆ?
* ಪಾರ್ಥಿವ ಶರೀರದ ಎಲ್ಲಾ ಪರೀಕ್ಷೆಗಳ ಬಳೀಕ ಫೊರೆನ್ಸಿಕ್ ವರದಿ ತಯಾರಿ (ಈಗಾಗಲೇ ಕೊಡಲಾಗಿದೆ)
* ಮಹೈಸ್ನಾಗೆ ಮೃತದೇಹವನ್ನು ತೆಗೆದುಕೊಂಡು ಹೋಗಲಾಗುತ್ತದೆ. (ಯಾವುದೇ ಕ್ಷಣದಲ್ಲಿ ಆಗಬಹುದು )
* ವಿಮಾನದಲ್ಲಿ ತೆರಳಿಸಲು ಅನುಕೂಲವಾಗುವ ರೀತಿಯಲ್ಲಿ ಮೃತದೇಹಕ್ಕೆ ಸುಗಂಧದ್ರವ್ಯ.
* ಶುಭ್ರವಾದ ವಸ್ತ್ರದಿಂದ ಮೃತದೇಹವನ್ನು ಸುತ್ತುತ್ತಾರೆ.
* ಈ ಎಂಬಾಮಿಂಗ್ ಪ್ರಕ್ರಿಯೆಗೆ ಏನಿಲ್ಲ ಎಂದರೂ 2 ಗಂಟೆ ಹಿಡಿಯುತ್ತದೆ
* ಈ ಅವಧಿಯಲ್ಲಿ ಸ್ಥಳೀಯ ಪೊಲೀಸರು ಡೆತ್ ಸರ್ಟಿಫಿಕೇಟ್ ನೀಡಬೇಕಾಗುತ್ತದೆ.
* ಡೆತ್ ಸರ್ಟಿಫಿಕೇಟ್ ನೀಡುವಾಗ ಮೃತರ ಕುಟುಂಬಸ್ಥರು ಅಫಿಡವಿಟ್ ಸಲ್ಲಿಸಬೇಕಾಗುತ್ತದೆ.
* ಪೊಲೀಸರು ಇದೆಲ್ಲ ಪ್ರಕ್ರಿಯೆ ನಡೆಸುವುದು ಪೊರೆನ್ಸಿಕ್ ರಿಪೋರ್ಟ್ ಸಿಕ್ಕಿದ ಬಳಿಕ.
* ದುಬೈನ ಭಾರತೀಯ ದೂತವಾಸದ ಅಧಿಕಾರಿಗಳು ಮೃತರ ಪಾಸ್‍ಪೋರ್ಟ್ ರದ್ದು ಮಾಡುತ್ತಾರೆ
* ಪಬ್ಲಿಕ್ ಪ್ರಾಸಿಕ್ಯೂಟರ್ ಅನುಮತಿ ಮೇರೆಗೆ ಬಂಧುಗಳಿಗೆ ಮೃತದೇಹ ಹಸ್ತಾಂತರ
* ವಿಮಾನ ನಿಲ್ದಾಣಕ್ಕೆ ಮೃತದೇಹ ರವಾನೆ.. ಕಸ್ಟಮ್ಸ್ ಕ್ಲಿಯರೆನ್ಸ್ ನಂತರ ವಿಮಾನದಲ್ಲಿ ಭಾರತಕ್ಕೆ.

Comments

Leave a Reply

Your email address will not be published. Required fields are marked *