ಕಳ್ಳತನದ ಶಂಕೆ – ವ್ಯಕ್ತಿಯನ್ನು ಮರಕ್ಕೆ ಕಟ್ಟಿ, ಹೊಡೆದು ಸಾಯಿಸಿದ ಕಾರ್ಮಿಕರು

crime

ಚೆನ್ನೈ: ಕಳ್ಳತನ (Theft) ಮಾಡಿದ್ದಾನೆ ಎಂದು ಶಂಕಿಸಿ ವ್ಯಕ್ತಿಯೊಬ್ಬನನ್ನು (Man) ಮರಕ್ಕೆ ಕಟ್ಟಿ ಹಾಕಿ, ಥಳಿಸಿ ಕೊಂದಿರುವ ಕ್ರೂರ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.

ವರದಿಗಳ ಪ್ರಕಾರ ತಿರುಚ್ಚಿ-ಮದುರೈ ಹೆದ್ದಾರಿಯ ಮಣಿಗಂಡಂನಲ್ಲಿ ಘಟನೆ ನಡೆದಿದೆ. ಪೀಠೋಪಕರಣ ಹಾಗೂ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ಮಿಲ್‌ನಲ್ಲಿ (Saw Mill)ಕೆಲಸ ಮಾಡುತ್ತಿದ್ದ ವಿವಿಧ ರಾಜ್ಯಗಳ ಕಾರ್ಮಿಕರು ಈ ಕೃತ್ಯವನ್ನು ನಡೆಸಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬ ಮಿಲ್‌ನೊಳಗೆ ಅನುಮತಿಯಿಲ್ಲದೇ ನುಗ್ಗುವುದನ್ನು ನೋಡಿದ ಕಾರ್ಮಿಕರು ಆತನನ್ನು ಹಿಡಿದು, ಕಳ್ಳತನದ ಆರೋಪವನ್ನು ಮಾಡಿದ್ದಾರೆ. ಬಳಿಕ ಆತನನ್ನು ಮರಕ್ಕೆ ಕಟ್ಟಿ ಹಾಕಿ, ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಕಳ್ಳತನವನ್ನೇ ವೃತ್ತಿ ಮಾಡ್ಕೊಂಡಿದ್ದ ದಂಪತಿ ಅರೆಸ್ಟ್ – ಬಂಧಿತರಿಂದ 5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ವಶಕ್ಕೆ

ಕಳ್ಳತನ ಮಾಡಿದ್ದಾನೆ ಎಂದು ಆರೋಪಿಸಿ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸುವಷ್ಟರಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೃತನನ್ನು ತುವಕುಡಿಯ ಚಕ್ರವರ್ತಿ ಎಂದು ಗುರುತಿಸಲಾಗಿದೆ. ಆತನ ಕುತ್ತಿಗೆ, ಎದೆ, ಬಲಗೈ, ಬಲ ಮೊಣಕಾಲು ಹಾಗೂ ಗುಪ್ತಾಂಗದ ಮೇಲೂ ಗಾಯಗಳಾಗಿರುವುದು ಕಂಡುಬಂದಿದೆ.

CRIME

ಪೊಲೀಸರು ಮಿಲ್ ಮಾಲೀಕ ಧೀರೇಂದರ್ ಸೇರಿದಂತೆ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಫೈಝಲ್ ಶೇಕ್ ಹಾಗೂ ಮಫ್ಜುಲ್ ಹುಕ್ ವಿರುದ್ಧ ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಕೂದಲು ಕಸಿ ಮಾಡಲು ಹೋಗಿ ಎಡವಟ್ಟು- ನೋವಿನಿಂದ ನರಳಿ ನರಳಿ ವ್ಯಕ್ತಿ ಸಾವು

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *