ಪ್ರಿಯಕರನೊಂದಿಗೆ ಮದುವೆಗೆ ಸುಶ್ಮಿತಾ ಸೇನ್ ರೆಡಿ?

ಮುಂಬೈ: ಬಾಲಿವುಡ್‍ನ ಖ್ಯಾತ ನಟಿ ಸುಶ್ಮಿತಾ ಸೇನ್ ತಮ್ಮ ಪ್ರಿಯಕರ ರೋಹ್ಮನ್ ಶಾಲ್‍ನನ್ನು ಮದುವೆ ಆಗಲು ಸಿದ್ದರಾಗಿದ್ದಾರಾ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಹೌದು, ಇತ್ತೀಚೆಗೆ ಸುಶ್ಮಿತಾ ಸೇನ್ ತಮ್ಮ ಪ್ರಿಯಕರ ರೋಹ್ಮನ್ ಶಾಲ್ ಜೊತೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಇವರಿಬ್ಬರ ಫೊಟೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಇಬ್ಬರೂ ಕಳೆದ ಎರಡು ತಿಂಗಳಿನಿಂದ ಡೇಟಿಂಗ್‍ನಲ್ಲಿದ್ದು, ಮುಂಬರುವ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಜೋಡಿ ನಿರ್ಧರಿಸಿವೆ ಎನ್ನುವ ಮಾತುಗಳು ಬಾಲಿವುಡ್ ನಲ್ಲಿ ಕೇಳಿಬರುತ್ತಿವೆ.

https://www.instagram.com/p/BpySX8BgD0k/?utm_source=ig_embed

ಪ್ರೀತಿ ಹುಟ್ಟಿದ್ದು ಹೇಗೆ?
ಸುಶ್ಮಿತಾ ಹಾಗೂ ರೋಹ್ಮನ್ ಕೆಲವು ತಿಂಗಳ ಹಿಂದೆ ಫ್ಯಾಶನ್ ಗಾಲಾ ಎಂಬ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಭೇಟಿ ವೇಳೆ ಇಬ್ಬರು ಪರಸ್ಪರ ಸ್ನೇಹ ಬೆಳಸಿದ್ದರು. ದಿನ ಕಳೆದಂತೆ ಸ್ನೇಹ ಪ್ರೀತಿಗೆ ತಿರುಗಿದೆ. ಅಲ್ಲದೇ ಕೆಲವು ವಾರಗಳ ಹಿಂದೆಯಷ್ಟೇ, ರೋಹ್ಮನ್ ಸುಶ್ಮಿತಾಗೆ ಪ್ರಪೋಸ್ ಮಾಡಿದ್ದರು. ಪ್ರಪೋಸಲ್‍ಗೆ ಸುಶ್ಮಿತಾ ಒಪ್ಪಿಗೆ ನೀಡಿ, ಒಟ್ಟಿಗೆ ಓಡಾಡುತ್ತಿದ್ದರು. ಸುಶ್ಮಿತಾ ಹಾಗೂ ರೋಹ್ಮನ್ 2019 ರಲ್ಲಿ ಮದುವೆ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಡಲು ತೀರ್ಮಾನಿಸಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದರಲ್ಲಿ ಸುದ್ದಿ ಬಿತ್ತರವಾಗಿತ್ತು.

https://www.instagram.com/p/Bp1Avn9ltD-/?utm_source=ig_embed

ಸುಶ್ಮಿತಾ ಮದುವೆಗೂ ಮುನ್ನವೇ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದು ನೋಡಿಕೊಳ್ಳುತ್ತಿದ್ದಾರೆ. ಮೊದಲನೇ ಮಗುವನ್ನು 2000ರ ಇಸವಿಯಲ್ಲಿ ದತ್ತು ಪಡೆದಿದ್ದರೆ, ಎರಡನೇ ಪುತ್ರಿಯನ್ನು 2010ರಲ್ಲಿ ದತ್ತು ಪಡೆದುಕೊಂಡಿದ್ದರು. ಸದ್ಯ ರೋಹ್ಮನ್ ಜೊತೆ ಸುಶ್ಮಿತಾ ತುಂಬಾ ಸಂತೋಷವಾಗಿದ್ದಾರೆ. ಇಬ್ಬರು ಜೊತೆಯಲ್ಲಿರುವ ಫೋಟೋಗಳು ಸಾಕಷ್ಟು ವೈರಲ್ ಆಗಿವೆ.

https://www.instagram.com/p/BpztsN_HkxI/?utm_source=ig_embed

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/

Comments

Leave a Reply

Your email address will not be published. Required fields are marked *