ಆಸೀಸ್‌ ವಿರುದ್ಧ 2 ಸಿಕ್ಸರ್‌ ಸಿಡಿಸಿ ವಿಶೇಷ ದಾಖಲೆ ಬರೆದ ಸೂರ್ಯ

ಕ್ಯಾನ್ಬೆರಾ: ಆಸ್ಟ್ರೇಲಿಯಾ (Australia) ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 2 ಭರ್ಜರಿ ಸಿಕ್ಸರ್‌ ಸಿಡಿಸುವ ಮೂಲಕ ಟೀಂ ಇಂಡಿಯಾದ ಟಿ20 ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar Yadav) ವಿಶೇಷ ದಾಖಲೆ ಬರೆದಿದ್ದಾರೆ.

ಹೌದು. ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವನ್ನು ಇಂದು ಭಾರತ ಆಡುತ್ತಿದೆ. ಕ್ಯಾನ್ಬೆರಾದ ಮನುಕಾ ಓವಲ್ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ (Team India) 9.4 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 97 ರನ್‌ ಗಳಿಸಿದೆ. ಬಳಿಕ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಇದನ್ನೂ ಓದಿ: ICC ODI Rankings | ನಿವೃತ್ತಿ ವದಂತಿ ನಡುವೆಯೂ ನಂ.1 ಪಟ್ಟಕ್ಕೇರಿದ ಹಿಟ್‌ಮ್ಯಾನ್‌

ಕ್ರೀಸ್‌ಗಿಳಿದ ಬೆನ್ನಲ್ಲೇ ಜೋಶ್‌ ಹೇಜಲ್ವುಡ್‌ಗೆ ಮೊದಲ ಸಿಕ್ಸರ್‌ (Sixes) ಬಾರಿಸಿದ ಸೂರ್ಯ 10 ಓವರ್‌ನ 3ನೇ ಎಸೆತದಲ್ಲಿ ನಾಥನ್‌ ಎಲ್ಲಿಸ್‌ಗೆ‌ ಭರ್ಜರಿ ಸಿಕ್ಸರ್‌ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚಿ ಸಿಕ್ಸರ್‌ ಸಿಡಿಸಿದ ವಿಶ್ವದ 5ನೇ ಬ್ಯಾಟರ್‌ ಹಾಗೂ ಭಾರತದ 2ನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 205 ಸಿಕ್ಸರ್‌ ಸಿಡಿಸಿರುವ ರೋಹಿತ್‌ ಶರ್ಮಾ ಅಗ್ರಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ವೈಯಕ್ತಿಕ ಹಗೆತನಕ್ಕೆ ಬಲಿಯಾಗ್ತಿದೆಯೇ ಟೀಂ ಇಂಡಿಯಾ – ಇನ್ನೂ ಮುಗಿದಿಲ್ವಾ ಕೊಹ್ಲಿ-ಗಂಭೀರ್‌ ಮುನಿಸು?

T20I ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ವಿಶ್ವದ ಟಾಪ್‌-5 ಬ್ಯಾಟರ್ಸ್‌
* ರೋಹಿತ್‌ ಶರ್ಮಾ – 159 ಪಂದ್ಯ – 205 ಸಿಕ್ಸರ್‌
* ಮೊಹಮ್ಮದ್‌ ವಸೀಮ್‌ – 91 ಪಂದ್ಯ – 187 ಸಿಕ್ಸರ್
* ಮಾರ್ಟಿನ್‌ ಗಪ್ಟಿಲ್‌ – 122 ಪಂದ್ಯ – 173 ಸಿಕ್ಸರ್
* ಜೋಸ್‌ ಬಟ್ಲರ್‌ – 144 ಪಂದ್ಯ – 172‌ ಸಿಕ್ಸರ್‌
* ಸೂರ್ಯಕುಮಾರ್‌ ಯಾದವ್‌ – 91 ಪಂದ್ಯ – 150 ಸಿಕ್ಸರ್‌