ನಿರ್ದೇಶಕ ನನ್ನ ಎದೆಯ ಭಾಗ, ತೊಡೆ ನೋಡಬೇಕು ಎಂದಿದ್ದ: ನಟಿ ಸುರ್ವೀನ್

ಮುಂಬೈ: ನಿರ್ದೇಶಕನೊಬ್ಬ ನನ್ನ ಎದೆಯ ಭಾಗ ಹಾಗೂ ತೊಡೆ ನೋಡಬೇಕೆಂದು ಹೇಳಿದ್ದನು ಅಂತ ಬಾಲಿವುಡ್ ನಟಿ ಸುರ್ವೀನ್ ಚಾವ್ಲಾ ಅವರು ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ.

ನಾನು 5 ಬಾರಿ ಕಾಸ್ಟಿಂಗ್ ಕೌಚ್‍ಗೆ ಒಳಗಾಗಿದ್ದೇನೆ. ಮೂರು ಬಾರಿ ಸೌತ್ ಫಿಲಂ ಇಂಡಸ್ಟ್ರಿಯಲ್ಲಿ ಹಾಗೂ ಎರಡು ಬಾರಿ ಬಾಲಿವುಡ್‍ನಲ್ಲಿ ನನಗೆ ಕಾಸ್ಟಿಂಗ್ ಕೌಚ್ ಅನುಭವವಾಗಿದೆ. ನಿರ್ದೇಶಕನೊಬ್ಬ ನನ್ನ ಎದೆಯ ಭಾಗವನ್ನು ನೋಡಬೇಕು ಎಂದು ಹೇಳಿದ್ದನು. ಇನ್ನುಳಿದ ನಿರ್ದೇಶಕರು ನಿಮ್ಮ ತೊಡೆಯನ್ನು ನೋಡಬೇಕು ಎಂದು ಹೇಳಿದ್ದರು ಎಂದು ನಟಿ ಸುರ್ವೀನ್ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ.

ಮೊದಲು ನಾನು ಆಡಿಶನ್‍ಗೆ ಹೋಗಿದ್ದಾಗ ವ್ಯಕ್ತಿಯೊಬ್ಬರು ನೀನು ತುಂಬಾ ದಪ್ಪ ಇದ್ದೀಯಾ ಎಂದು ಹೇಳಿದ್ದರು. ಆದರೆ ನಾನು ಆಗ ಕೇವಲ 56 ಕೆಜಿ ತೂಕ ಇದ್ದೆ. ಆ ವ್ಯಕ್ತಿ ದಪ್ಪ ಎಂದು ಹೇಳಿದಾಗ ಆತನಿಗೆ ಕನ್ನಡಕದ ಅವಶ್ಯಕತೆ ಇದೆ ಎಂದು ನನಗೆ ಎನಿಸಿತ್ತು ಎಂದು ಸುರ್ವೀನ್ ಹೇಳಿದ್ದಾರೆ.

ಸುರ್ವೀನ್ ‘ಕಹಿ ತೋ ಹೋಗಾ’ ಟಿವಿ ಶೋ ಮೂಲಕ ನಟನೆಯನ್ನು ಶುರು ಮಾಡಿದ್ದರು. ಇದಾದ ಬಳಿಕ ಅವರು ಕನ್ನಡದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರ ಜೊತೆ ‘ಪರಮೇಶ ಪಾನ್‍ವಾಲಾ’ ಚಿತ್ರದಲ್ಲಿ ನಟಿಸಿದ್ದರು. ಅಲ್ಲದೆ ತಮಿಳು ಹಾಗೂ ತೆಲುಗು ಚಿತ್ರದಲ್ಲಿ ನಟಿಸಿದ ಬಳಿಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು.

Comments

Leave a Reply

Your email address will not be published. Required fields are marked *