ಸರ್ಜಿಕಲ್ ಸ್ಪಿರಿಟ್‍ಗೆ ನೀರು ಬೆರೆಸಿ ಕಳ್ಳಬಟ್ಟಿ ಸಾರಾಯಿ ಎಂದು ಮಾರಾಟ

ದಾವಣಗೆರೆ: ಮದ್ಯ ಸಿಗದ್ದಕ್ಕೆ ಹಲವರು ಕಳ್ಳಬಟ್ಟಿ ಸಾರಾಯಿ ಮೊರೆ ಹೋಗುತ್ತಿದ್ದು, ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಕೆಲವರು ಸರ್ಜಿಕಲ್ ಸ್ಪಿರಿಟ್‍ನ್ನು ಕಳ್ಳಬಟ್ಟಿ ಸರಾಯಿ ಎಂದು ನಂಬಿಸಿ ಮಾರಾಟ ಮಾಟುತ್ತಿದ್ದಾರೆ.

ದಾವಣಗೆರೆಯಲ್ಲಿ ಸರ್ಜಿಕಲ್ ಸ್ಪಿರಿಟ್ ದಂಧೆ ಜೋರಾಗಿದ್ದು, ಸರ್ಜಿಕಲ್ ಸ್ಪೀರಿಟ್‍ನ್ನು ನೀರಿಗೆ ಬೆರೆಸಿ ಕಳ್ಳಬಟ್ಟಿ ಎಂದು ನಂಬಿಸಿ ಮಾರಾಟ ಮಾಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಯಾರೇ ಕೇಳಿದರೂ ಸರ್ಜಿಕಲ್ ಸ್ಪಿರಿಟ್ ನೀಡದಂತೆ ಡ್ರಗ್ ಕಂಟ್ರೋಲ್ ರೂಮ್‍ಗೆ ಪತ್ರ ಬರೆಯಲಾಗಿದೆ. ಸರ್ಜಿಕಲ್ ಸ್ಪಿರಿಟ್ ಬೇಕು ಎಂದರೆ ಅವರ ಅಧಾರ್ ಕಾರ್ಡ್ ಪ್ರತಿ ಪಡೆಯಲು ಔಷಧಿ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅಬಕಾರಿ ಆಯುಕ್ತ ನಾಗರಾಜ್ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಸಾವಿರಾರು ಲೀಟರ್ ಕಳ್ಳಬಟ್ಟಿ ನಾಶ ಮಾಡಲಾಗಿದೆ. ಆಲೂರು ಹಟ್ಟಿಯಲ್ಲೇ ಸಾವಿರ ಲೀಟರ್ ಕಳ್ಳಬಟ್ಟಿ ನಾಶ ಮಾಡಲಾಗಿದೆ. ಜಿಲ್ಲೆಯಾದ್ಯಂತ 259 ಬಾರ್ ಗಳಿದ್ದು ಕಾವಲು ಕಾಯುವಂತೆ ಮಾಲೀಕರಿಗೆ ಸೂಚನೆ ನೀಡಲಾಗಿದೆ. ಯಾರೂ ಕಳ್ಳಬಟ್ಟಿ, ಸರ್ಜಿಕಲ್ ಸ್ಪಿರಿಟ್ ಕುಡಿಯ ಬೇಡಿ. ಕುಡಿದರೆ ಬಹು ಅಂಗಾಂಗ ಸಮಸ್ಯೆ ಉಂಟಾಗುತ್ತದೆ ಎಂದು ಅಬಕಾರಿ ಆಯುಕ್ತರು ಮನವಿ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *