ತುಳುನಾಡಿನ ಜನರನ್ನು ಬೆಸೆಯುವ ಸಾಧನವಾಗಿ ಟೋಲ್ ತೆರವು ಹೋರಾಟ ಪರಿವರ್ತನೆಗೊಂಡಿದೆ: ಶಕುಂತಲಾ ಶೆಟ್ಟಿ

ಮಂಗಳೂರು: ಸುರತ್ಕಲ್ ಅಕ್ರಮ ಟೋಲ್ ಗೇಟ್ (Surathkal Toll Gate) ತೆರವಿನ ವಿಚಾರದಲ್ಲಿ ಬಿಜೆಪಿ (BJP) ಸರ್ಕಾರದ ಭಂಡತನ ಅಚ್ಚರಿ ಮೂಡಿಸುತ್ತಿದೆ. ತುಳುನಾಡಿನ ಘಟ್ಟದ ತಪ್ಪಲು ಹಾಗೂ ಸಮುದ್ರ ದಂಡೆಯ ಜನರನ್ನು ಬೆಸೆಯುವ ಸಾಧನವಾಗಿ ಟೋಲ್ ಗೇಟ್ ವಿರೋಧಿ ಹೋರಾಟ ಪರಿವರ್ತನೆಗೊಂಡಿದೆ. ಬಿಜೆಪಿ ಸಂಸದ, ಶಾಸಕರುಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ (Shakunthala Shetty) ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸುರತ್ಕಲ್ ಟೋಲ್ ಗೇಟ್ ಸಮೀಪ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹಗಲು ರಾತ್ರಿ ಧರಣಿಯ ನಾಲ್ಕನೇ ದಿನದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕರಾವಳಿಯ (Karavalli) ಜನ ಸರ್ಕಾರದ ಟೋಲ್ ಸುಲಿಗೆ ನೀತಿಯ ವಿರುದ್ಧ ಆಕ್ರೋಶ ಭರಿತರಾಗಿದ್ದು, ಘಟ್ಟದ ಬದಿಯ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ಜನರೂ ಸಮುದ್ರ ದಂಡೆಯ ಸುರತ್ಕಲ್‌ನಲ್ಲಿರುವ ಟೋಲ್ ಗೇಟ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸತೊಡಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ರಾಜ್ಯದ 11 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಪ್ರತಿಭಟನೆಯಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಶಾಸಕರುಗಳಾದ ಅಭಯಚಂದ್ರ ಜೈನ್, ಮೊಯ್ದಿನ್ ಬಾವಾ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್ ಮಹಮ್ಮದ್, ಶಾಲೆಟ್ ಪಿಂಟೊ, ಬಿ.ಕೆ ಇಮ್ತಿಯಾಜ್, ಪುರುಷೋತ್ತಮ ಚಿತ್ರಾಪುರ, ಪ್ರಮೀಳಾ ಶಕ್ತಿನಗರ, ಆಶಾ ಬೋಳೂರು, ಶ್ರೀನಾಥ್ ಕುಲಾಲ್, ರಮೇಶ್ ಟಿ ಎನ್, ರಾಜೇಶ್ ಪೂಜಾರಿ, ಡಾ ರಾಜಾರಾಮ್ ಉಪ್ಪಿನಂಗಡಿ, ಮುಹಮ್ಮದ್ ಕುಂಜತ್ತಬೈಲ್, ಆನಂದ ಅಮೀನ್, ಅಕ್ಬರ್ ಅಲಿ ಮುಕ್ಕ, ಹರೀಶ್ ಪೇಜಾವರ, ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಕೋಲ್ಕತ್ತಾ ಫ್ಲೈಓವರ್ ಕುಸಿದಾಗ ಬ್ಯಾನರ್ಜಿಯನ್ನು ನಿಂದಿಸಿದ್ದ ನೀವು ಇದಕ್ಕೆ ಏನ್ ಹೇಳ್ತೀರಿ: ಮೋದಿ ವಿರುದ್ಧ ವಿಪಕ್ಷಗಳು ಕಿಡಿ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *