ಬೆಂಗಳೂರು ಚರ್ಚ್ ಸ್ಫೋಟ ಕೇಸ್- 12 ಅಪರಾಧಿಗಳಿಗೆ ಜಾಮೀನು ನೀಡಲ್ಲ: ಸುಪ್ರೀಂ

ನವದೆಹಲಿ: ಚರ್ಚ್‍ಗಳ ಮೇಲೆ ಸರಣಿ ಬಾಂಬ್ ಸ್ಫೋಟ ಮಾಡಿದ ಅಪರಾಧಿಗಳಿಗೆ ಜಾಮೀನು ನೀಡುವುದಿಲ್ಲ ಅಂತಾ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

2000ನೇ ಇಸವಿಯಲ್ಲಿ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಯ ಚರ್ಚ್ ಗಳ ಮೇಲೆ ದಾಳಿ ಮಾಡಿದ್ದ 12 ಜನ ಅಪರಾಧಿಗಳಿಗೆ ಜಾಮೀನು ನೀಡುವುದಿಲ್ಲ ಅಂತಾ ಸುಪ್ರೀಂಕೋರ್ಟ್ ಹೇಳಿದೆ.

ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ 12 ಜನ ಅಪರಾಧಿಗಳಿಗೆ ಹೈಕೊರ್ಟ್ ವಿಧಿಸಿದ್ದ ಜೀವವಾಧಿ ಶಿಕ್ಷೆಯನ್ನು ವಜಾಗೊಳಿಸಿ ಜಾಮೀನು ನೀಡಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಮಹತ್ವದ ಆದೇಶ ನೀಡಿದೆ.

ದೀನ್‍ಧಾರ್ ಅಂಜುಮನ್ ಸಂಘಟನೆಯ ಒಟ್ಟು ಹದಿಮೂರು ಮಂದಿ ಸದಸ್ಯರು 2000 ಇಸವಿಯಲ್ಲಿ ರಾಜ್ಯದ ಮೂರು ಜಿಲ್ಲೆಯಲ್ಲಿ ಸರಣಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಭಾಗಿಯಾಗಿದ್ರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೊರ್ಟ್ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿತ್ತು.

ಪ್ರಕರಣದ ಒಂಭತ್ತನೇ ಆರೋಪಿ ಸೈಯದ್ ಅಬ್ದುಲ್ ಗಿಲಾನಿ ಸುಪ್ರೀಂಕೋರ್ಟ್ ಮೂಲಕ ಈ ಹಿಂದೆ ಜಾಮೀನು ಪಡೆದಿದ್ದ. ಹೈಕೊರ್ಟ್ ಆದೇಶ ಪ್ರಶ್ನಿಸಿದ 12 ಅಪರಾಧಿಗಳು ಜಾಮೀನು ನೀಡುವಂತೆ ಸುಪ್ರಿಂಕೊರ್ಟ್ ಗೆ ಅರ್ಜಿ ಸಲ್ಲಿಸಿದ್ರು. ಇಂದು ವಿಚಾರಣೆ ನಡೆಸಿದ ನ್ಯಾ. ಪಿನಾಕಿ ಚಂದ್ರ ಘೋಷ್ ನೇತೃತ್ವದ ದ್ವಿಸದಸ್ಯ ಪೀಠ, ರಾಷ್ಟ್ರೀಯ ಭದ್ರತಾ ವಿಚಾರವಾಗಿರುವುದರಿಂದ ಅಪರಾಧಿಗಳೀಗೆ ಜಾಮೀನು ನೀಡುವುದಿಲ್ಲ ಎಂದಿದೆ.

ಸರ್ಕಾರದ ಪರ ವಕೀಲ ದೇವವತ್ ಕಾಮತ್, ಈ ಹಿಂದೆ ಜಾಮೀನು ಪಡೆದಿದ್ದ ಸೈಯದ್ ಅಬ್ದುಲ್ ಗಿಲಾನಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಈ ಹಿನ್ನಲೆ ಗಿಲಾನಿಗೆ ನೀಡಿದ್ದ ಜಾಮೀನು ವಜಾ ಮಾಡಬೇಕು. ಇದು ರಾಷ್ಟ್ರೀಯ ಭದ್ರತಾ ವ್ಯವಸ್ಥೆ ಗೆ ಸಂಬಂಧಿಸಿದ ವಿಷಯ ಎಂದು ಸವಾದ ಮಂಡಿಸಿದ್ರು. ಆದ ಆಲಿಸಿದ ಸುಪ್ರೀಂಕೋರ್ಟ್ ಜಾಮೀನು ರದ್ದು ಗೊಳಿಸುಂತೆ ಅರ್ಜಿ ಸಲ್ಲಿಸಲು ರಾಜ್ಯ ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿದ್ದು, ಗಿಲಾನಿಗೂ ನೀಡಿದ್ದ ಜಾಮೀನು ರದ್ದು ಮಾಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.

ಇನ್ನೂ 12 ಅಪರಾಧಿಗಳ ಅರ್ಜಿಗಳನ್ನು ವಿಚಾರಣೆಗೆ ಅಂಗೀಕಾರ ಮಾಡಿರುವ ಕೋರ್ಟ್ ಬೇಸಿಗೆ ರಜೆಯ ಬಳಿಕ ವಿಚಾರಣೆ ಮಾಡುವುದಾಗಿ ಹೇಳಿದೆ.

Comments

Leave a Reply

Your email address will not be published. Required fields are marked *