ಸ್ಪೀಕರ್ ಬೋಪಯ್ಯ ಆಯ್ಕೆ ವಿರೋಧಿಸಿ ಕಾಂಗ್ರೆಸ್ ಅರ್ಜಿ- ಇಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ

ನವದೆಹಲಿ: ಹಂಗಾಮಿ ಸ್ಪೀಕರ್ ಆಗಿ ಕೆ.ಜಿ ಬೋಪಯ್ಯ ಅವರನ್ನು ಆಯ್ಕೆ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

ಬೋಪಯ್ಯ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ತ್ವರಿತ ವಿಚಾರಣೆಗೆ ಕಾಂಗ್ರೆಸ್ ಪರ ವಕೀಲರು ಮನವಿ ಮಾಡಿದ್ದರು. ಹೀಗಾಗಿ ನ್ಯಾಯಮೂರ್ತಿ ಎ.ಕೆ.ಸಿಕ್ರಿ ನ್ಯಾ. ಅಶೋಕ್ ಭೂಷಣ್ ಹಾಗೂ ನ್ಯಾ.ಎಸ್.ಎ ಬೊಬ್ಡೆ ತ್ರಿಸದಸ್ಯ ಪೀಠದಿಂದ ವಿಚಾರಣೆ ನಡೆಯಲಿದೆ.

ಇಂದಿನ ವಿಶ್ವಾಸಮತದ ಐತಿಹಾಸಿಕ ಅಧಿವೇಶನ ಆರಂಭಕ್ಕೆ ಮೊದಲೇ ವಿವಾದಕ್ಕೀಡಾಗಿದೆ. ಹಿರಿತನವನ್ನೇ ಬದಿಗಿರಿಸಿ ಯಡಿಯೂರಪ್ಪ ಅವರ ನಿಷ್ಠಾಳು ಆಗಿರೋ ಬೋಪಯ್ಯ ಅವರನ್ನ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿ ನೇಮಿಸಿದೆ. ಇದನ್ನೂ ಓದಿ: ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ನೇಮಕ: ಬಹುಮತ ಸಾಬೀತಿಗೂ ಮುನ್ನ ಜೆಡಿಎಸ್ ರೆಬೆಲ್ ಶಾಸಕರು ಅನರ್ಹ?

ಹಂಗಾಮಿ ಸ್ಪೀಕರ್ ಬೋಪಯ್ಯ ನೇಮಕ ವಿವಾದವೇಕೆ?
* ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡುವುದು ವಾಡಿಕೆ
* ಬೋಪಯ್ಯಗಿಂತ ಆರ್.ವಿ. ದೇಶಪಾಂಡೆ, ಉಮೇಶ್ ಕತ್ತಿ ಹಿರಿಯರು
* ಬೋಪಯ್ಯ 4 ಬಾರಿ ಎಂಎಲ್‍ಎಯಾದ್ರೆ, ಇವರಿಬ್ಬರು 8 ಬಾರಿ ಎಂಎಲ್‍ಎಗಳು
* ಜಮೀರ್ ಅಹ್ಮದ್, ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯ್ಕ್ ಅನರ್ಹ ಭೀತಿ
* 2010ರಲ್ಲಿ ಪಕ್ಷಾಂತರ ಕಾಯ್ದೆಯಡಿ ಅನರ್ಹ ಮಾಡಿದ್ದ ಬೋಪಯ್ಯ

ಇನ್ನು, ಹಂಗಾಮಿ ಸ್ಪೀಕರ್ ಕಾರ್ಯವ್ಯಾಪ್ತಿ ಈ ರೀತಿ ಇರಲಿದೆ
* ಶಾಸಕರನ್ನು ಅನರ್ಹ ಮಾಡುವ ಅಧಿಕಾರ ಇರುವುದಿಲ್ಲ
* ನೂತನ ಸಚಿವರಿಗೆ ಪ್ರಮಾಣವಚನ ಬೋಧನೆ ಮಾಡಬಹುದಷ್ಟೇ
* ವಿಶ್ವಾಸಮತ ಯಾಚನೆ ಪ್ರಕ್ರಿಯೆಗಷ್ಟೇ ಹಂಗಾಮಿ ಸ್ಪೀಕರ್ ಸೀಮಿತ
* ಶಾಸಕರನ್ನು ಅನರ್ಹ ಮಾಡುವ ಅಧಿಕಾರ ಇರುವುದಿಲ್ಲ

ಹಿರಿಯ ಶಾಸಕರನ್ನೇ ಹಂಗಾಮಿ ಶಾಸಕರಾಗಿ ನೇಮಕ ಮಾಡ್ಬೇಕಾ..? ಅನ್ನೋದನ್ನ ನೋಡೋದಾದ್ರೆ
– ಕಾಂಗ್ರೆಸ್‍ಗೆ ತಿರುಗುಬಾಣವಾಗುತ್ತಾ ಅದರದ್ದೇ ತಂತ್ರ?
– 2005ರಲ್ಲಿ ಉತ್ತರಾಖಂಡ್ ವಿಧಾನಸಭೆಗೆ ಕಿರಿಯ ಶಾಸಕರನ್ನೇ ಹಂಗಾಮಿ ಸ್ಪೀಕರ್ ಆಗಿ ನೇಮಕ (ಕಾಂಗ್ರೆಸ್ ಅಧಿಕಾರ)
– 2017ರಲ್ಲಿ ಪಂಜಾಬ್ ವಿಧಾನಸಭೆಗೆ ಕಿರಿಯ ಶಾಸಕ ಕೆಪಿ ಸಿಂಗ್ ಹಂಗಾಮಿ ಸ್ಪೀಕರ್ ಆಗಿ ನೇಮಕ (ಕಾಂಗ್ರೆಸ್ ಅಧಿಕಾರ)
– ಉತ್ತರಪ್ರದೇಶ ವಿಧಾನಸಭೆಗೆ ಕಿರಿಯ ಶಾಸಕ ಫತೇರ್ ಬಹುದ್ದೂರ್ ಸಿಂಗ್ ಹಂಗಾಮಿ ಶಾಸಕರಾಗಿ ನೇಮಕ

Comments

Leave a Reply

Your email address will not be published. Required fields are marked *