ಕೋವಿಡ್‍ಗೆ ಬಲಿಯಾದ ಕುಟುಂಬಗಳಿಗೆ ಪರಿಹಾರ – ಖಡಕ್ ಆದೇಶ ನೀಡಿದ ಸುಪ್ರೀಂಕೋರ್ಟ್

ನವದೆಹಲಿ: ಕೋವಿಡ್‍ಗೆ ಬಲಿಯಾದವರ ಎಲ್ಲರ ಕುಟುಂಬಗಳಿಗೆ 50 ಸಾವಿರ ಪರಿಹಾರ ನೀಡಲೇಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ ಎಂಬ ಬಗ್ಗೆ ದೃಢೀಕರಣ ಪತ್ರ ಇಲ್ಲದಿದ್ರೂ ಪರಿಹಾರ ಕೊಡಲೇ ಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.

ಕೊರೊನಾದಿಂದಾಗಿ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಸ್ಥರು ಅರ್ಜಿ ಹಾಕಿಕೊಂಡ 30 ದಿನಗಳ ಒಳಗಾಗಿ ಪರಿಹಾರ ತಲುಪಿಸಬೇಕು. ಯಾವ ರಾಜ್ಯವೂ ಕೂಡ ನಿರಾಕರಿಸುವಂತಿಲ್ಲ. ಯಾವುದೇ ನೆಪ ಹೇಳುವಂತೆ ಇಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಖಡಕ್ ಆದೇಶ ನೀಡಿದೆ. ಇದೇ ವೇಳೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ರೂಪಿಸಿದ ಪರಿಹಾರ ಮಾರ್ಗಸೂಚಿಗಳಿಗೆ ಸುಪ್ರೀಂಕೋರ್ಟ್ ಅನುಮೋದನೆ ನೀಡಿದೆ.

ರಾಜ್ಯದಲ್ಲಿ ಕೋವಿಡ್-19ನಿಂದ ಮೃತಪಟ್ಟವರ ಬಿಪಿಎಲ್ ಕುಟುಂಬಗಳಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವ ಸಂಬಂಧ ನಾಳೆಯ ಕ್ಯಾಬಿನೆಟ್‍ನಲ್ಲಿ ಅಧಿಕೃತ ತೀರ್ಮಾನ ಹೊರಬೀಳುವ ಸಂಭವ ಇದೆ. ಇದನ್ನೂ ಓದಿ: ಕೇರಳದಿಂದ ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ – ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ

ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ರಿಪೋರ್ಟ್‌ ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ ವಕೀಲ ಆರ್‌ಎಸ್ ಜೇನಾ ಎನ್ನುವವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಇದಕ್ಕೆ ಸಂಬಂಧಿಸಿದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾ ಮಾಡಿದ್ದ ಕಾರಣ, ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಅಕ್ಟೋಬರ್ 7 ರವರೆಗೆ ಆರ್ಯನ್ ಖಾನ್ ಎನ್‍ಸಿಬಿ ವಶಕ್ಕೆ- ಕೋರ್ಟ್‍ನಲ್ಲಿ ವಾದ- ಪ್ರತಿವಾದ ಹೇಗಿತ್ತು?

Comments

Leave a Reply

Your email address will not be published. Required fields are marked *