ರೈ ಚಂಡಮಾರುತಕ್ಕೆ ಫಿಲಿಪೈನ್ಸ್‌ನಲ್ಲಿ 208 ಮಂದಿ ಸಾವು

ಮನಿಲಾ: ಗುರುವಾರ ಫಿಲಿಪೈನ್ಸ್‌ಗೆ ಅಪ್ಪಳಿಸಿದ ಸೂಪರ್ ಟೈಫೂನ್ ರೈಗೆ ತುತ್ತಾಗಿ 208 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಫಿಲಿಪೈನ್ಸ್‌ಗೆ ಅಪ್ಪಳಿಸಿರುವ ಮಾರಣಾಂತಿಕ ಚಂಡಮಾರುತಗಳಲ್ಲಿ ಇದೂ ಒಂದಾಗಿದೆ.

ಚಂಡಮಾರುತ ದೇಶದ ದಕ್ಷಿಣ ಹಾಗೂ ಮಧ್ಯ ಪ್ರದೇಶಗಳಲ್ಲಿ ಭಾರೀ ಹಾನಿ ಮಾಡಿದ್ದು, 239 ಜನರು ಗಾಯಗೊಂಡಿದ್ದಾರೆ ಹಾಗೆಯೇ 52 ಜನರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ಲೆಕ್ಕಾಚಾರ ತಿಳಿಸಿದೆ. ಇದನ್ನೂ ಓದಿ: ಉಡುಪಿಯ ಇಬ್ಬರಲ್ಲಿ ಓಮಿಕ್ರಾನ್ ವೈರಸ್ ಪತ್ತೆ

ಸೂಪರ್ ಟೈಫೂನ್ ರೈ 195 ಕಿ.ಮಿ./ಗಂಟೆ ವೇಗದಲ್ಲಿ ಅಪ್ಪಳಿಸಿದ್ದು, ಮುಂಜಾಗೃತಾ ಕ್ರಮವಾಗಿ 3ಲಕ್ಷಕ್ಕೂ ಹೆಚ್ಚು ಜನರನ್ನು ಕರಾವಳಿ ಪ್ರದೇಶದಿಂದ ಸ್ಥಳಾಂತರಿಸಲಾಗಿತ್ತು. ಮುಖ್ಯವಾಗಿ ರೆಡ್ ಕ್ರಾಸ್ ಕರಾವಳಿ ಪ್ರದೇಶದಲ್ಲಿ ಈ ಪ್ರಭಲ ಚಂಡಮಾರುತ ಅತೀ ಹೆಚ್ಚಿನ ಹಾನಿ ಉಂಟುಮಾಡಿದೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋದ ವ್ಯಕ್ತಿ ಸಾವು

ಮನೆ, ಆಸ್ಪತ್ರೆ, ಶಾಲೆ ಹೀಗೆ ಹಲವು ಕಟ್ಟಡಗಳು ಚೂರು ಚೂರಾಗಿದೆ. ಹಲವು ಸ್ಥಳಗಳಲ್ಲಿ ಸಂಪರ್ಕವೂ ಕಡಿತಗೊಂಡಿದ್ದು, ನಷ್ಟದ ಪ್ರಮಾಣವನ್ನು ನಿರ್ಧಿಷ್ಟವಾಗಿ ಹೇಳಲಾಗುತ್ತಿಲ್ಲ. ಭೂಕುಸಿತ ಹಾಗೂ ಪ್ರವಾಹ ಇನ್ನೂ ಹೆಚ್ಚಿನ ಬಲಿ ತೆಗೆದುಕೊಳ್ಳುವ ಆತಂಕವಿದೆ. ಹಲವೆಡೆ ವಿದ್ಯುತ್, ಸಂಪರ್ಕವೂ ಕಡಿತಗೊಂಡಿದೆ ಎಂದು ಫಿಲಿಪೈನ್ಸ್ ರೆಡ್‌ಕ್ರಾಸ್ ಅಧ್ಯಕ್ಷ ರಿಚರ್ಡ್ ಗಾರ್ಡನ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *