ರಿಯಲ್ ಸ್ಟಾರ್: ಪಾನ್ ಮಸಾಲ ಆಫರ್ ತಿರಸ್ಕರಿಸಿದ ಯಶ್

ನ್ನಡದ ಮಾಸ್ಟರ್ ಪೀಸ್ ಯಶ್ ಈಗ ವರ್ಲ್ಡ್ ವೈಡ್ ಸೂಪರ್ ಸ್ಟಾರ್ ಆಗಿ ಮಿಂಚ್ತಿರೋ ನಟ, `ಕೆಜಿಎಫ್ 2′ ವಿಚಾರವಾಗಿ ಬಾಕ್ಸ್ಆಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಬೆನ್ನಲ್ಲೇ ಸಮಾಜಕ್ಕೆ ಉತ್ತಮ ಸಂದೇಶ ಕೊಡಬೇಕು ಅನ್ನೋ ದೃಷ್ಟಿಯಿಂದ ಯಶ್‌ ಮಹತ್ವ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ತಾವು ರಿಯಲ್‌ ಲೈಫ್‌ನಲ್ಲೂ ಹೀರೋ ಅನ್ನೋದನ್ನ ಸಾಬೀತು ಮಾಡಿದ್ದಾರೆ.

ನ್ಯಾಷನಲ್ ಸ್ಟಾರ್ ಯಶ್ ಸದ್ಯ `ಕೆಜಿಎಫ್ 2′ ಸಕ್ಸಸ್ ಖುಷಿಯಲ್ಲಿದ್ದಾರೆ. ವರ್ಲ್ಡ್ ವೈಡ್ ತಮ್ಮ ಖಡಕ್ ಆಕ್ಟಿಂಗ್ ಮೂಲಕ ಗುರುತಿಸಿಕೊಂಡಿದ್ದಾರೆ. ತೆರೆಯ ಮೇಲೆ ಮಾತ್ರ ನಾನೋಬ್ಬ ಹೀರೋ ಅಲ್ಲ, ರಿಯಲ್ ಲೈಫ್ ಹೀರೋ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. `ಕೆಜಿಎಫ್ 1′ ಮತ್ತು `ಚಾಪ್ಟರ್ 2′ ನಂತರ ನಂತರ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಾ ಜಾಹೀರಾತನ್ನು ನೀಡುವ ಉದೇಶದಿಂದ ಪ್ರತಿಷ್ಠಿತ ಸಂಸ್ಥೆಯ ಪಾನ್ ಮಸಾಲ  ಮತ್ತು ಎಲೈಚಿ ಬ್ರ್ಯಾಂಡ್‌ನ ಬಿಗ್ ಆಫರ್‌ನ್ನೇ ಯಶ್ ತಿರಸ್ಕರಿಸಿದ್ದಾರೆ.

ದೇಶದ ಪ್ರತಿಷ್ಠಿತ ಸಂಸ್ಥೆಯೊಂದು ರಾಕಿಂಗ್ ಸ್ಟಾರ್ ಯಶ್ ಅವರನ್ನ ಪಾನ್ ಮಸಾಲ ಮತ್ತು ಎಲೈಚಿ ಬ್ರ್ಯಾಂಡ್‌ನ ರಾಯಭಾರಿಯಾಗಿ ಪ್ರಮೋಟ್ ಮಾಡಲು ಅಪ್ರೋಚ್ ಮಾಡಲಾಗಿತ್ತು. ಆದರೆ ಈ ಜಾಹೀರಾತನ್ನ ಮಾಡುವುದರಿಂದ ಆರೋಗ್ಯದ ಹಿತದೃಷ್ಟಿ ಮತ್ತು ಸಮಾಜಕ್ಕೆ ಮಾರಕವಾಗುವಂತಹ ವಸ್ತುಗಳನ್ನ ಪ್ರಮೋಟ್ ಮಾಡಬಾರದು ಎಂದು ನಿರ್ಧರಿಸಿ ಕೋಟ್ಯಾಂತರ ಮೌಲ್ಯದ ಆಫರ್‌ನ್ನೇ ಯಶ್ ಕೈ ಬಿಟ್ಟಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ಗೆ ಭಯಂಕರ ಬೇಡಿಕೆ ಇಟ್ಟ ಫ್ಯಾನ್ಸ್

ಯಶ್ ಅವರನ್ನ ಕೋಟ್ಯಾಂತರ ಅಭಿಮಾನಿಗಳು ಫಾಲೋವ್ ಮಾಡ್ತಿದ್ದಾರೆ. ಹೀಗಿರುವಾಗ ತಾವು ಪ್ರಚಾರ ಮಾಡೋ ಪ್ರಾಡೆಕ್ಟ್‌ನಿಂದ ಸಮಾಜಕ್ಕೆ ಉಪಯೋಗವಾಗಬೇಕು ಅನ್ನೋದು ಯಶ್ ಯೋಚನೆ. ಸಿನಿಮಾಗಳಲ್ಲಿ ಮಾತ್ರ ಮೆಸೇಜ್ ಕೊಡೋದಲ್ಲ, ಈ ಮೂಲಕ ತಾವು ರೀಲ್‌ನಲ್ಲಿ ಮಾತ್ರ ಅಲ್ಲ ರಿಯಲ್ ಲೈಫ್‌ನಲ್ಲೂ ಹೀರೋ ಅನ್ನೋದನ್ನ ಯಶ್ ಪ್ರೂವ್ ಮಾಡಿದ್ದಾರೆ. ಇನ್ನು ಈ ಸುದ್ದಿ ಕೇಳಿದ್ರೆ ಯಶ್‌ ಅಭಿಮಾನಿಗಳು ಸಲಾಮ್‌ ರಾಕಿಭಾಯ್‌ ಅನ್ನೋದು ಗ್ಯಾರೆಂಟಿ.

Comments

Leave a Reply

Your email address will not be published. Required fields are marked *