ನನ್ನ ಹೃದಯ ಈ ರಾತ್ರಿ ಸಾವಿರ ಬಾರಿ ಛಿದ್ರವಾಗಿದೆ: ಬಿಕ್ಕಿ ಬಿಕ್ಕಿ ಅತ್ತ ಸನ್ನಿ ಲಿಯೋನ್

ಮುಂಬೈ: ಬಾಲಿವುಡ್ ಮೋಹಕ ಬೆಡಗಿ ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸನ್ನಿ ಲಿಯೋನ್ ಭಾವುಕರಾಗಿರುವ ಒಂದು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸನ್ನಿ ಲಿಯೋನ್ ಸಾಮಾಜಿಕ ಜಾಲತಾಣದಲ್ಲಿ ಕಣ್ಣೀರಿಟ್ಟಿರುವುದರ ಕಾರಣವನ್ನು ಸ್ಪಷ್ಟ ಪಡಿಸಿಲ್ಲ, ಆದರೆ ಸನ್ನಿ ಲಿಯೋನ್ ತನ್ನ ಹಿಂದಿನ ಜೀವನವನ್ನು ನೆನೆದುಕೊಂಡು ಕಣ್ಣೀರು ಹಾಕಿದ್ದಾರೆ ಎಂದು ಅಭಿಮಾನಿಗಳು ಪತ್ರಿಕ್ರಿಯಿಸಿದ್ದಾರೆ.

“ನನ್ನ ಹೃದಯ ಈ ರಾತ್ರಿ ಸಾವಿರ ಬಾರಿ ಛಿದ್ರವಾಗಿದೆ. ಈ ರಾತ್ರಿ ಬಹುಶಃ ನಾನು ಸಾವಿರ ಬಾರಿ ಕಣ್ಣೀರಿಟ್ಟಿದ್ದೇನೆ. ಈ ರಾತ್ರಿ ನಾನು ಅಪೇಕ್ಷಿಸುತ್ತಿದ್ದೇನೆ, ಹಾತೊರೆಯುತ್ತಿದ್ದೇನೆ, ಕಾಣೆಯಾಗಿದ್ದೇನೆ, ವಿಷಾದಿಸುತ್ತಿದ್ದೇನೆ ಹಾಗೂ ನಿನ್ನನ್ನು ನನ್ನ ಜೊತೆ ಇರಿಸುವುದ್ದಾಗಿ ಬಯಸುತ್ತಿದ್ದೇನೆ. ಆದರೆ ಇದು ನನ್ನ ಜೀವನದಲ್ಲಿ ಹಿಂತಿರುಗಿ ಬರುವುದಿಲ್ಲ. ಆದರೆ ನನ್ನ ಮನಸ್ಸಿನಲ್ಲಿ ಸದಾ ಕಾಡುತ್ತೆ ಕರಣ್‍ಜಿತ್ ಕೌರ್ ವೊಹ್ರಾ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಸನ್ನಿ ಲಿಯೋನ್ ಈ ಪೋಸ್ಟ್ ನೋಡಿದ್ದರೆ ಅವರು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದಹಾಗೆ ಕರಣ್‍ಜಿತ್ ಕೌರ್ ವೊಹ್ರಾ ಬೇರಾರೂ ಅಲ್ಲ, ಅದು ಸನ್ನಿ ಲಿಯೋನ್ ಮೂಲ ಹೆಸರು. ಬಣ್ಣದ ಲೋಕಕ್ಕೆ ಜಿಗಿದ್ಮೇಲೆ ಸನ್ನಿ ಲಿಯೋನ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.

ನನ್ನ ಜೀವನದಲ್ಲಿ ನಡೆದ ಎಲ್ಲಾ ಘಟನೆಗಳಿಗೂ ನಾನೇ ಕಾರಣ ಎಂದು ಹೇಳಿಕೊಂಡಿರುವ ಸನ್ನಿ ಲಿಯೋನ್ ಯಾವ ಘಟನೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಬಹುಷಃ ತಂದೆ-ತಾಯಿಯನ್ನು ನೆನೆದು ಕಣ್ಣೀರು ಹಾಕಿರಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗುತ್ತಿದೆ.

ಸದ್ಯ ಸನ್ನಿ ಲಿಯೋನ್ ‘ವೀರಾನಹಾದೇವಿ’ ಎಂಬ ಐತಿಹಾಸಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ತಮಿಳು, ತೆಲುಗು, ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

Comments

Leave a Reply

Your email address will not be published. Required fields are marked *