ಮಗಳು, ಸನ್ನಿ ಜೊತೆಗಿರುವ ಅರೆನಗ್ನ ಫೋಟೋವನ್ನು ಹಂಚಿ ಟ್ರೋಲ್ ಆದ ಡೇನಿಯಲ್

ಮುಂಬೈ: ಬಾಲಿವುಡ್ ಮೋಹಕ ನಟಿ ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬರ್ ವಿಶ್ವ ಅಪ್ಪಂದಿರ ದಿನದಂದು ಪತ್ನಿ ಹಾಗೂ ಮಗಳ ಅರೆನಗ್ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈಗ ಈ ಪೋಸ್ಟ್ ವೈರಲ್ ಆಗಿದ್ದು, ಟ್ರೋಲರ್ಸ್ ಬಾಯಿಗೆ ತುತ್ತಾಗಿದೆ.

ಡೇನಿಯಲ್ ವೆಬರ್ ತನ್ನ ಪತ್ನಿ ಹಾಗೂ ಮಗಳ ಜೊತೆಯಿರುವ ಅರೆನಗ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದಕ್ಕೆ, ಇದು ಅಪ್ಪಂದಿರ ದಿನ. ಯಾರು ಕೂಡ ಊಹಿಸಲಾಗದ ಪ್ರೀತಿ. ಸನ್ನಿ ನೀನು ನಿಶಾ ಕೌರ್ ನನ್ನು ಭೇಟಿ ಮಾಡಿ ನಮ್ಮಿಬ್ಬರ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಕ್ಕೆ ನಾನು ನಿನಗೆ ಧನ್ಯವಾದ ತಿಳಿಸುತ್ತೇನೆ. ನೀನು ಯಾವಗಲೂ ಅದ್ಭುತವಾಗಿ ಇರುತ್ತೀಯ. ಆಕೆ ನನಗೆ ಎಲ್ಲ ಹಾಗೂ ಶಾಶ್ವತವಾಗಿ ನನ್ನ ಹೃದಯವನ್ನು ಕದ್ದಿದ್ದಾಳೆ ಎಂದು ಪೋಸ್ಟ್ ಮಾಡಿದ್ದಾರೆ.

ಇನ್ನೂ ಸನ್ನಿ ಲಿಯೋನ್ ಕೂಡ ತನ್ನ ಫ್ಯಾಮಿಲಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅದಕ್ಕೆ, “ಒಬ್ಬ ವ್ಯಕ್ತಿ, ತಂದೆ, ಸ್ನೇಹಿತರಾಗಿರುವ ನೀವು ಯಾವಾಗಲೂ ನಮ್ಮ ಜೊತೆಯಲ್ಲೇ ಇದ್ದು, ಒಂದು ಅದ್ಭುತ ಜೀವನವನ್ನು ನೀಡಿದ್ದೀರಾ ಹಾಗೂ ಸಾಕಷ್ಟು ಪ್ರೀತಿಯನ್ನು ಕೊಟ್ಟಿದ್ದೀರಿ. ನಾವು ನಿಮ್ಮನ್ನು ಪ್ರೀತಿಸುತ್ತೇನೆ ಪಾಪ- ನಿಶಾ, ಆಶೇರ್ ಹಾಗೂ ನೋಹಾ- ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು” ಎಂದು ಸನ್ನಿ ಲಿಯೋನ್ ಪೋಸ್ಟ್ ಮಾಡಿದ್ದಾರೆ.

ಸನ್ನಿ ಲಿಯೋನ್ ಪತಿ ಡೇನಿಯಲ್ ವೆಬ್ಬರ್ ಆ ಫೋಟೋವನ್ನು ಸಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ಸಾಕಷ್ಟು ವೈರಲ್ ಆಗಿದೆ. ಅಲ್ಲದೇ ಈ ಪೋಸ್ಟ್ ಅನ್ನು ಕೆಲವರು ತಮ್ಮ ಮೆಚ್ಚುಗೆ ಸೂಚಿಸಿದ್ದರೆ, ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *