ಬಹುದಿನಗಳ ಬಳಿಕ ಸನ್ನಿಯಿಂದ ಬಿಕಿನಿ ಫೋಟೋ ಶೇರ್

ಮುಂಬೈ: ಬಾಲಿವುಡ್ ಲೈಲಾ, ಮಾದಕ ಚೆಲುವೆ ಸನ್ನಿ ಲಿಯೋನ್ ಬಹು ದಿನಗಳ ಬಳಿಕ ಬಿಕಿನಿ ಫೋಟೋವನ್ನು ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

ಸೋಮವಾರ ಬಿಕಿನಿ ಫೋಟೋ ಶೇರ್ ಮಾಡಿಕೊಂಡಿರುವ ಸನ್ನಿ ಲಿಯೋನ್, ಬಹು ದಿನಗಳ ಬಳಿಕ ಬಿಕಿನಿ ತೊಟ್ಟಿರುವ ಫೋಟೋ ಹಂಚಿಕೊಳ್ಳುತ್ತಿದ್ದೇನೆ. ಜೈಪುರದಲ್ಲಿ ನನ್ನ ಸ್ವಂತ ಕೊಳದಲ್ಲಿ ಈಜಲು ಹೋಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಫೋಟೋ ಅಪ್ಲೋಡ್ ಮಾಡಿಕೊಂಡ 17 ಗಂಟೆಯಲ್ಲಿ 13 ಲಕ್ಷಕ್ಕೂ ಅಧಿಕ ಲೈಕ್ಸ್, 18 ಸಾವಿರಕ್ಕೂ ಅಧಿಕ ಕಮೆಂಟ್ ಗಳು ಬಂದಿವೆ.

ಇತ್ತೀಚೆಗೆ ನಟ ರಣ್‍ವಿಜಯ್ ಜೊತೆಗಿನ ಫೋಟೋ ಹಾಕಿಕೊಂಡು, ಶೀಘ್ರದಲ್ಲಿಯೇ ಮತ್ತೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ತಿಳಿಸಿದ್ದರು. ಖಾಸಗಿ ವಾಹಿನಿ ರಿಯಾಲಿಟಿ ಶೋದ ನಿರೂಪಕಿಯಾಗಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದರು. ಇದೇ ರಿಯಾಲಿಟಿ ಶೋನ ಎರಡನೇ ಸೀಸನ್ ನಲ್ಲಿಯೂ ಸನ್ನಿ ಲಿಯೋನ್ ಮಿಂಚಲಿದ್ದಾರೆ.

 

View this post on Instagram

 

Pulled this bikini after a long time! Time for a swim in a my private villa pool here in Jaipur! Gorgeous resort!

A post shared by Sunny Leone (@sunnyleone) on

Comments

Leave a Reply

Your email address will not be published. Required fields are marked *