ಕನ್ನಡಕ್ಕೆ ಮತ್ತೊಮ್ಮೆ ಎಂಟ್ರಿ ಕೊಟ್ಟ ಸನ್ನಿ ಲಿಯೋನ್

ಮಾದಕ ಬೆಡಗಿ ಸನ್ನಿಲಿಯೋನ್ ಈಗಾಗಲೇ ಕನ್ನಡದ ಎರಡು ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಪ್ರೇಮ್ ನಟಿಸಿದ್ದ ‘ಡಿಕೆ’ ಸಿನಿಮಾದ ‘ಶೇಷಮ್ಮ ಶೇಷಮ್ಮ ಬಾಗ್ಲು ತೆಗೆಯಮ್ಮ’ ಹಾಡಿಗೆ ಸಖತ್ ಹೆಜ್ಜೆ ಹಾಕಿದ್ದ ಸನ್ನಿ, ಆನಂತರ ಇಂದ್ರಜಿತ್ ಲಂಕೇಶ್ ನಿರ್ದೇಶನದ ಚಿತ್ರದಲ್ಲೂ ಸನ್ನಿ ಕಾಣಿಸಿಕೊಂಡಿದ್ದರು. ಇದೀಗ ಸದ್ದಿಲ್ಲದೇ ಮತ್ತೊಂದು ಸಿನಿಮಾದ ಸ್ಪೆಷಲ್ ಹಾಡಿಗೆ ಕುಣಿದು ಹೋಗಿದ್ದಾರೆ ಸನ್ನಿ ಲಿಯೋನ್. ಈಗಾಗಲೇ ಆ ಹಾಡಿನ ಚಿತ್ರೀಕರಣ ಕೂಡ ಆಗಿದೆ. ಇದನ್ನೂ ಓದಿ : ಮೇ 11ಕ್ಕೆ ನಟಿ ಮಮತಾ ರಾವುತ್ ಮದುವೆ : ಡಾಕ್ಟರ್ ಜತೆ ಸಪ್ತಪದಿ ತುಳಿಯಲಿರುವ ನಟಿ

ಸಚಿನ್ ಧನಪಾಲ್ ನಟನೆಯ ‘ಚಾಂಪಿಯನ್’ ಸಿನಿಮಾದಲ್ಲಿ ವಿಶೇಷವಾದ ಹಾಡೊಂದಕ್ಕೆ ಸನ್ನಿ ಲಿಯೋನ್ ಹೆಜ್ಜೆ ಹಾಕಿದ್ದಾರೆ. ಸ್ಪೋರ್ಟ್ಸ್ ಆಧರಿಸಿದ ಸಿನಿಮಾ ಇದಾಗಿದ್ದು, ಒಂದು ಸನ್ನಿವೇಶದಲ್ಲಿ ಬರುವ ಹಾಡಿಗೆ ಸನ್ನಿ ಕುಣಿದಿರುವುದು ವಿಶೇಷ. ಸಚಿನ್ ಅವರ ಚೊಚ್ಚಲು ಸಿನಿಮಾ ಇದಾಗಿದ್ದು, ಶಾಹುರಾಜ ಶಿಂಧೆ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಇದನ್ನೂ ಓದಿ : ರಣಬೀರ್ ನನ್ನ ದೊಡ್ಡ ವಿಮರ್ಶಕ ಎಂದು ಹೇಳಿ ನಾಚಿ ನೀರಾದ ಆಲಿಯಾ

ಡಿಂಗರ್ ಬಿಲ್ಲಿ ಎಂಬ ಸಾಹಿತ್ಯದಿಂದ ಶುರುವಾಗುವ ಈ ಗೀತೆಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಈ ಸಾಹಿತ್ಯದಲ್ಲಿ ಬಳಸಿಕೊಂಡಿದ್ದಾರೆ ಶಿವು ಬೊರಗಿ. ಅಂದಹಾಗೆ ಈ ಸಿನಿಮಾದಲ್ಲಿ ಸಚಿನ್ ನಾಯಕನಾದರೆ, ಅದಿತಿ ಪ್ರಭುದೇವ ನಾಯಕಿ. ಚಿಕ್ಕಣ್ಣ, ಪ್ರಶಾಂತ್ ಸಿದ್ದಿ, ಹಿರಿಯ ನಟರಾದ ದೇವರಾಜ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿದ್ದಾರೆ.

Comments

Leave a Reply

Your email address will not be published. Required fields are marked *