ಮತ್ತಿಬ್ಬರು ಮಕ್ಕಳಿಗೆ ತಂದೆ ತಾಯಿಯಾದ ಸನ್ನಿ ಲಿಯೋನ್- ವೆಬರ್ ದಂಪತಿ

ನವದೆಹಲಿ: ಕಳೆದ ವರ್ಷವಷ್ಟೇ ಹೆಣ್ಣು ಮಗುವೊಂದನ್ನ ದತ್ತು ಪಡೆದಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ದಂಪತಿ ಇದೀಗ ಮತ್ತೊಮ್ಮೆ ತಂದೆ ತಾಯಿಯಾಗಿದ್ದಾರೆ. ಈ ಬಾರಿ ಆಶೆರ್ ಸಿಂಗ್ ವೆಬರ್ ಮತ್ತು ನೋವಾ ಸಿಂಗ್ ವೆಬರ್ ಎಂಬ ಎರಡು ಮುದ್ದಾದ ಮಕ್ಕಳು ಸನ್ನಿ- ವೆಬರ್ ಕುಟುಂಬಕ್ಕೆ ಸೇರ್ಪಡೆಗೊಂಡಿವೆ.

ಇದು ನಿಜಕ್ಕೂ ದೇವರ ಇಚ್ಛೆ. ಇಷ್ಟು ಸುಂದರವಾದ ದೊಡ್ಡ ಕುಟುಂಬವನ್ನ ಹೊಂದುವ ಅವಕಾಶ ಸಿಗುತ್ತದೆ ಅಂತ ಅಂದುಕೊಂಡಿರಲಿಲ್ಲ. ನಮಗೆ ತುಂಬಾ ಸಂತೋಷವಾಗಿದೆ ಹಾಗೂ ನಮ್ಮ ಜೀವನದಲ್ಲಿ ಈ ಮೂರು ಪವಾಡಗಳನ್ನ ಹೊಂದಿರೋದು ನಮ್ಮ ಅದೃಷ್ಟ. ಈಗ ನಮ್ಮ ಕುಟುಂಬ ಸಂಪೂರ್ಣವಾಗಿದೆ ಎಂದು ಸನ್ನಿ ಲಿಯೋನ್ ಹೇಳಿಕೆ ನೀಡಿದ್ದಾರೆ.

ನಾವು ಡೇನಿಯಲ್ ನ ಜೀನ್ ಮತ್ತು ನನ್ನ ಜೀನ್‍ಗಳಿಂದ ಮಾಡಿದ ಅಂಡಾಣುವಿನಿಂದ ಬಾಡಿಗೆ ತಾಯ್ತನದ ಮೊರೆ ಹೋದೆವು. ಬಾಡಿಗೆ ತಾಯಿಯ ಮೂಲಕ ಆಶೆರ್ ಮತ್ತು ನೋವಾ ಜನಿಸಿದ್ದಾರೆ. ಬಾಡಿಗೆ ತಾಯ್ತನದ ಬಗ್ಗೆ ನಾವು ಹಲವು ವರ್ಷಗಳ ಹಿಂದೆಯೇ ಚಿಂತಿಸಿದ್ದೆವು. ಈಗ ಅದು ಪೂರ್ಣವಾಗಿದೆ ಎಂದು ಸನ್ನಿ ಲಿಯೋನ್ ಟ್ವೀಟ್ ಮಾಡಿದ್ದಾರೆ.

ಸನ್ನಿ ಹಾಗೂ ವೆಬರ್ ದಂಪತಿ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಜೊತೆಗಿರುವ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಜುಲೈನಲ್ಲಿ ಸನ್ನಿ ಹಾಗೂ ವೆಬರ್ ದಂಪತಿ ಮಹಾರಾಷ್ಟ್ರದ ಲಾತೂರ್‍ನಿಂದ ನಿಶಾ ಎಂಬ ಹೆಣ್ಣುಮಗುವನ್ನ ದತ್ತು ಪಡೆದಿದ್ದರು.

ಈ ಹಿಂದೆ ಬಾಲಿವುಡ್‍ನ ಕರಣ್ ಜೋಹರ್ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡಿದ್ದರು.

Comments

Leave a Reply

Your email address will not be published. Required fields are marked *