ಟಾಮ್ ಬಾಯ್ ಲುಕ್‍ನಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್

Sunny Leone

ಮುಂಬೈ: ಬಾಲಿವುಡ್ ಹಾಟ್ ನಟಿ ಸನ್ನಿಲೊಯೋನ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡರು.

Sunny Leone

ಸದಾ ತುಂಡು ಉಡುಗೆಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಗೆಡಿಸುವ ಸನ್ನಿಲಿಯೋನ್ ಬಾಲಿವುಡ್‍ನ ಟಾಪ್ ನಟಿಯರಲ್ಲಿ ಒಬ್ಬರು . ಸದಾ ಒಂದಲ್ಲಾ ಒಂದು ಪ್ರಾಜೆಕ್ಟ್‌ಗಳಲ್ಲಿ ಬ್ಯೂಸಿಯಾಗಿರುವ ಸನ್ನಿ ಲಿಯೋನ್ ಶೂಟಿಂಗ್ ಮುಗಿಸಿಕೊಂಡು ವಿಮಾನದ ಮೂಲಕ ಮುಂಬೈ ಆಗಮಿಸಿದ್ದರು. ಇದನ್ನೂ ಓದಿ: ಕೊನೆಗೂ ಪೆಟ್ರೋಲ್ ನೂರರ ಗಡಿ ಕ್ರಾಸ್ ಮಾಡ್ತು – ಸೈಕಲ್ ಏರಿದ ಸನ್ನಿ ಲಿಯೋನ್

Sunny Leone

ಈ ವೇಳೆ ಸನ್ನಿ ಬ್ಲಾಕ್ ಕಲರ್ ಬನಿಯನ್, ರೆಡ್ ಕಲರ್ ಜಾಕೆಟ್ ಮತ್ತು ಬ್ಲಾಕ್ ಜೀನ್ಸ್ ಪ್ಯಾಂಟ್ ತೊಟ್ಟು ಟಾಮ್ ಬಾಯ್ ರೀತಿ ಡ್ರೆಸ್ ಅಪ್ ಆಗಿದ್ದರು. ಅಲ್ಲದೇ ತೋಳಿನಲ್ಲಿ ಬ್ಲ್ಯಾಕ್ ಕಲರ್ ವ್ಯಾನಿಟಿ ಬ್ಯಾಗ್ ಹಾಗೂ ಕೈಯಲ್ಲಿ ಮೊಬೈಲ್ ಹಿಡಿದು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಈ ಎಲ್ಲದರ ಮಧ್ಯೆ ಮಾಸ್ಕ್ ಧರಿಸುವ ಮೂಲಕ ಸನ್ನಿಲಿಯೋನ್ ಕೊರೊನಾ ನಿಯಮವನ್ನು ಪಾಲಿಸಿದರು. ಇದನ್ನೂ ಓದಿ: ಬೀದಿ ನಾಯಿಗಳ ಬಗ್ಗೆ ಟ್ವೀಟ್ ಮಾಡಿದ್ರೆ, ಅದು ನಂಗೆ ಅಂದ್ರೆ ಜವಾಬ್ದಾರ ನಾನಲ್ಲ: ಸಿದ್ದಾರ್ಥ್

Sunny Leone

ವಿಮಾನ ನಿಲ್ದಾಣದಿಂದ ಸನ್ನಿ ಹೊರಬರುತ್ತಿದ್ದಂತೆಯೇ ಅಲ್ಲೇ ಇದ್ದ ಜನರು ಅವರನ್ನು ತಿರುಗಿ ತಿರುಗಿ ಕಣ್ಣು ಮಿಟುಕಿಸದೇ ನೋಡುತ್ತಿದ್ದರು. ಹೀಗೆ ತಮ್ಮ ಸಹಚರರೊಂದಿಗೆ ವಿಮಾನ ನಿಲ್ದಾಣದಿಂದ ಹೊರಬಂದ ಸನ್ನಿಲಿಯೋನ್ ಕ್ಯಾಮೆರಾಗೆ ಪೋಸ್ ನೀಡಿದರು.

Sunny Leone

ನಂತರ ಧರಿಸಿದ್ದ ಮಾಸ್ಕ್ ತೆರೆದು ಸ್ಮೈಲ್ ಮಾಡುತ್ತಾ ಕ್ಯಾಮೆರಾಗೆ ಪೋಸ್ ನೀಡಿದರು. ಜೊತೆಗೆ ಅಭಿಮಾನಿಗಳಿಗೆ ಹಾಯ್ ಮಾಡಿ, ಪಾರ್ಕಿಂಗ್ ಪ್ರದೇಶಕ್ಕೆ ತೆರಳಿದರು. ಇದನ್ನೂ ಓದಿ: ಎಷ್ಟೇ ಯೋಗ ಮಾಡಿಡ್ರೂ ನನ್ನ ಕಣ್ಣೀರು ಮಾತ್ರ ನಿಂತಿರಲಿಲ್ಲ: ಮಲೈಕಾ

Sunny Leone

ಕಳೆದ ತಿಂಗಳಷ್ಟೇ ಸನ್ನಿ ಲಿಯೋನ್ ಬ್ಲೂ ಬಣ್ಣದ ಬಿಕಿನಿ ತೊಟ್ಟು ಶಾಂಪೇನ್ ಬಾಟಲಿ ಕ್ಯಾಪ್ ಓಪನ್ ಮಾಡಿರುವ ವೀಡಿಯೋ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದರು. ಮತ್ತೊಂದು ಫೋಟೋದಲ್ಲಿ ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ನೀಲಿ ಬಣ್ಣದ ಬಿಕಿನಿ ತೊಟ್ಟು ಸಖತ್ ಹಾಟ್ ಆಗಿ ಪೋಸ್ ನೀಡುವ ಮೂಲಕ ತಮ್ಮ ಮಾಲ್ಡೀವ್ಸ್ ಪ್ರವಾಸದ ಕೆಲವು ತುಣುಕುಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.

Sunny Leone

ಈ ಮುನ್ನ ಸನ್ನಿ ಲಿಯೋನ್ ಕನ್ನಡದ ಲವ್ ಯೂ ಅಲಿಯಾ ಸಿನಿಮಾದ ಕಾಮಾಕ್ಷಿ ಕಾಮಾಕ್ಷಿ.. ಹಾಗೂ ಡಿಕೆ ಸಿನಿಮಾದ ಸೆಸಮ್ಮ.. ಎಂಬ ಐಟಂ ಸಾಂಗ್‍ಗೆ ಹೆಜ್ಜೆಹಾಕಿದ್ದರು. ಅಲ್ಲದೇ ಕೆಲವು ತಿಂಗಳ ಹಿಂದೆಯಷ್ಟೇ ಕಾಟನ್ ಪೇಟೆ ಎಂಬ ಸಿನಿಮಾದ ಹಾಡೋದರಲ್ಲಿ ಕೂಡ ನೃತ್ಯ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ಬ್ಲೂ ಬಿಕಿನಿಯಲ್ಲಿ ಹಾಟ್ ಫೋಸ್ ಕೊಟ್ಟ ಸನ್ನಿ ಲಿಯೋನ್

https://www.youtube.com/watch?v=Zmg571If_00

Comments

Leave a Reply

Your email address will not be published. Required fields are marked *