ಇಲ್ಲಿ ಬಟನ್ ಒತ್ತಿದರೆ ಉಕ್ರೇನ್‍ನಲ್ಲಿ ವಿಮಾನ ಇಳಿಸಲು ಸಾಧ್ಯವಿಲ್ಲ: ಸುಮಲತಾ ಅಂಬರೀಷ್

sumalatha ambarish

ಮೈಸೂರು: ಉಕ್ರೇನ್‍ನಿಂದ ಭಾರತೀಯ ಪ್ರಜೆಗಳನ್ನು ಕರೆದುಕೊಂಡು ಬರುವುದು ಸುಲಭದ ಪರಿಸ್ಥಿತಿ ಆಗಿರಲಿಲ್ಲ. ಇಲ್ಲಿ ಬಟನ್ ಒತ್ತಿದರೆ ಅಲ್ಲಿ ವಿಮಾನ ಇಳಿಸಲು ಸಾಧ್ಯವಿಲ್ಲ. ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಸಂಸದೆ ಸುಮಲತಾ ಅಂಬರೀಷ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಷ್ಯಾ ಉಕ್ರೇನ್ ಯುದ್ಧದ ಪರಿಸ್ಥಿತಿ ಅರ್ಥ ಮಾಡಿಕೊಂಡ ಮಾತನಾಡಬೇಕು. ವಿದೇಶಾಂಗ ಇಲಾಖೆ ಯಾವ ರೀತಿ ಕೆಲಸ ಮಾಡುತ್ತದೆ ಅನ್ನೋದು ಗೊತ್ತಿದೆ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಪ್ರಾಮಾಣಿಕವಾದ ಪ್ರಯತ್ನ ಮಾಡಿದೆ. ಬಹುತೇಕ ಎಲ್ಲರನ್ನೂ ಸುರಕ್ಷಿತವಾಗಿ ಕರೆ ತರಲಾಗಿದೆ ಎಂದು ಪ್ರಶಂಸಿದರು.

ಜನ ವಿಶ್ವಾಸ ಇಟ್ಟು ನನ್ನನ್ನು ಆಯ್ಕೆ ಮಾಡಿದ್ದಾರೆ. ಕ್ರೆಡಿಟ್ ತೆಗೆದುಕೊಳ್ಳಲು ನಾನು ಯಾವ ಕೆಲಸವನ್ನು ಮಾಡಲ್ಲ. ನಿಜ ಹೇಳಲು ಭಯ ಏಕೆ. ಕ್ರೆಡಿಟ್ ವಾರ್ ಯಾರು ಆರಂಭಿಸುತ್ತಾರೋ ಅವರು ಅವರ ಜವಾಬ್ದಾರಿ ಬಗ್ಗೆ ನೋಡಿಕೊಳ್ಳಬೇಕು. ಸಂಸದರ ಕ್ರೆಡಿಟ್ ಪಡೆಯುವುದಕ್ಕೆ ಏಕೆ ಬರುತ್ತಿದ್ದಾರೋ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಊಟಕ್ಕೆ ಹೊರಗೆ ಹೋದರೆ ವಾಪಸ್ ಬದುಕಿ ಬರುವ ನಂಬಿಕೆ ಇರಲಿಲ್ಲ: ಹಾಸನದ ವಿದ್ಯಾರ್ಥಿ

ಶಿಂಷಾ ಸೇತುವೆ ವಿಚಾರ ನಾನು ಪ್ರತಿಭಟನಾ ಸ್ಥಳಕ್ಕೆ ಹೋಗಿದ್ದೇನೆ. ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ. ನಾಲ್ಕು ಬಾರಿ ಅವರನ್ನು ಭೇಟಿ ಮಾಡಿದ್ದೇನೆ. ಆಯಾ ಕ್ಷೇತ್ರದ ಸಂಸದ ಆಯಾ ಕ್ಷೇತ್ರದ ಬಗ್ಗೆ ಕೇಳಿದರೆ ಪ್ರತಿಕ್ರಿಯೆ ಸಿಗುತ್ತದೆ. ಯಾರು ಬೇಕಾದರೂ ಪತ್ರ ಬರೆದಿರಬಹುದು. ಮಾಜಿ ಪ್ರಧಾನಿ ಅಥವಾ ಬೇರೆಯವರು ಬರೆದಿರಬಹುದು. ಅವರು ಏನು ಬರೆದಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮತ್ತೆ 4 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲಿದ್ದಾರಾ ವಿಶಾಲ್ ಗಾರ್ಗ್?

Nitin Gadkari

ನನ್ನ ಕ್ಷೇತ್ರದ ವಿಚಾರವಾಗಿ ನಾನು ಕೆಲಸ ಮಾಡುತ್ತೇನೆ. ನಾನು ಮಾಡಿದ ಕೆಲಸ ಮಾಡಿಲ್ಲ ಎಂದು ಹೇಳಿದರೆ ನಾನು ಸುಮ್ಮನಿರಲ್ಲ. ಟಾರ್ಗೆಟ್ ಮಾಡುವುದು ಮೊದಲ ದಿನದಿಂದಲೂ ನಡೆದಿದೆ. ನನ್ನ ಜಿಲ್ಲೆಗೆ ಸಂಬಂಧಪಟ್ಟ ವಿಚಾರ ಮಾತ್ರ ನಾನು ಮಾತನಾಡುತ್ತೇನೆ. ನಾನು ಏನೇ ಮಾಡಿದರು ವಿರೋಧ ಮಾಡಬೇಕೆಂದು ಅವರು ನಿರ್ಧರಿಸಿದ್ದಾರೆ. ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ನಾನು ಕೆಲಸ ಮಾಡುತ್ತೇನೆ ಜನ ನನ್ನ ಪರ ಮಾತನಾಡುತ್ತಾರೆ ಎನ್ನುವ ಭಯ ಎಂದು ಕಿಡಿಕಾರಿದರು.

Comments

Leave a Reply

Your email address will not be published. Required fields are marked *