ಎಷ್ಟೇ ನೋವಾದ್ರೂ ಮಂಡ್ಯದ ಘನತೆ, ಭವಿಷ್ಯಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳಿ: ಸುಮಲತಾ

ಮಂಡ್ಯ: ನಮಗೆ ಎಷ್ಟೇ ನೋವಾದರೂ ಮಂಡ್ಯದ ಘನತೆಗಾಗಿ, ಮಂಡ್ಯದ ಭವಿಷ್ಯಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡು ಚುನಾವಣೆಯನ್ನು ಶಾಂತಿಯಿಂದ ನಡೆಸೋಣ ಎಂದು ಸುಮಾಲತಾ ಅಂಬರೀಶ್ ಅವರು ತಮ್ಮ ಅಭಿಮಾನಿಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದ ಹಬ್ಬ. ಪರಸ್ಪರ ಕಿತ್ತಾಟಗಳು, ಘರ್ಷಣೆಗಳು ಹಾಗೂ ಆರೋಪ ಪ್ರತ್ಯಾರೋಪಗಳು ಪ್ರಜಾಪ್ರಭುತ್ವದ ಕಿರೀಟವಾಗಲು ಸಾಧ್ಯವಿಲ್ಲ. ಟೀಕಿಸುವವರು ಅನಾವಶ್ಯಕವಾದ ಮಾತುಗಳನ್ನು ಆಡುವವರು ಆಡುತ್ತಿರಲಿ ಎಂದು ನಟ ದರ್ಶನ್ ಮನೆಗೆ ಕಲ್ಲು ತೂರಾಟ ಮಾಡಿದ್ದಕ್ಕೆ ಸುಮಲತಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ಚುನಾವಣೆ ಅನ್ನುವುದು ಪ್ರಜಾಪ್ರಭುತ್ವದ ಹಬ್ಬ. ಪರಸ್ಪರ ಕಿತ್ತಾಟಗಳು, ಘರ್ಷಣೆಗಳು ಹಾಗೂ ಆರೋಪ ಪ್ರತ್ಯಾರೋಪಗಳು ಪ್ರಜಾಪ್ರಭುತ್ವದ ಕಿರೀಟವಾಗಲು ಸಾಧ್ಯವಿಲ್ಲ. ಶಾಂತಿಯಿಂದ ಸೌಹಾರ್ದ ವಾತಾವರಣದಿಂದ ಪ್ರೀತಿಯಿಂದ ಚುನಾವಣೆಗಳು ನಡೆಯಬೇಕಾಗಿದೆ. ಟೀಕಿಸುವವರು ಅನಾವಶ್ಯಕವಾದ ಮಾತುಗಳನ್ನು ಆಡುವವರು ಆಡುತ್ತಿರಲಿ. ಜವಬ್ದಾರಿಯಿಂದ ಹೆಜ್ಜೆ ಇಡಬೇಕಾದ ನಾವುಗಳು ಜವಾಬ್ದಾರಿಯಿಂದ ಚುನಾವಣೆ ಎದುರಿಸೋಣ. ನಮಗೆ ಎಷ್ಟೇ ನೋವಾದರೂ ಮಂಡ್ಯದ ಘನತೆಗಾಗಿ, ಮಂಡ್ಯದ ಭವಿಷ್ಯಕ್ಕಾಗಿ ಎಲ್ಲವನ್ನೂ ಸಹಿಸಿಕೊಂಡು ಚುನಾವಣೆಯನ್ನು ಶಾಂತಿಯಿಂದ ನಡೆಸೋಣ. ಇದು ನನ್ನ ಚುನಾವಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ನನ್ನ ಎಲ್ಲ ಪ್ರೀತಿಗೆ ಜನತೆಗೆ ಮಂಡ್ಯದ ಯುವ ಮಿತ್ರರಿಗೆ ನನ್ನ ಕಳಕಳಿಯ ಮನವಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *