ಮಂಡ್ಯ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜನರ ಬೆಂಬಲ ಪಡೆಯಲು ಸುಮಲತಾ ಅಂಬರೀಶ್ ಅವರು ತಮ್ಮ ಹೆಸರಿನಲ್ಲಿ ಅಧಿಕೃತ ಫೇಸ್‍ಬುಕ್ ಪೇಜ್‍ವೊಂದನ್ನು ತೆರೆದಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಸಮರ ಮತ್ತಷ್ಟು ರಂಗೇರಿದೆ. ಸುಮಲತಾ ಅವರು ಈ ಹಿಂದೆಯೇ ಟ್ವಿಟ್ಟರ್ ಖಾತೆ ತೆರೆದಿದ್ದು, ಆಕ್ಟೀವ್ ಆಗಿದ್ದರು. ಇದೀಗ ಫೇಸ್‍ಬುಕ್‍ನಲ್ಲೂ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಲು ನಿರ್ಧರಿಸಿದ್ದಾರೆ. ಚುನಾವಣೆಯ ದಿನಾಂಕ ಘೋಷಣೆ ಆಗುತ್ತಿದ್ದಂತೆ ಅಧಿಕೃತ ಫೇಸ್‍ಬುಕ್ ಪೇಜ್‍ವೊಂದನ್ನು ಸುಮಲತಾ ಅಂಬರೀಶ್ ಅಂತ ಹೆಸರಿನಲ್ಲಿ ತೆರೆಯಲಾಗಿದೆ.

ನಾನು ನಿಮ್ಮ ಸುಮಲತಾ ಅಂಬರೀಶ್. ನಾನು ನಿಮಗೆ ಸಾಮಾಜಿಕ ಜಾಲತಾಣದಲ್ಲೂ ಸಿಗುತ್ತೇನೆ. ನಿಮ್ಮ ಜೊತೆ ಫೇಸ್‍ಬುಕ್, ಟ್ವಿಟ್ಟರ್‍ನಲ್ಲಿ ಇರುತ್ತೇನೆ. ನನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಪೇಜ್‍ನಲ್ಲಿ ನಿಮ್ಮ ಜೊತೆ ಸಂಪರ್ಕಕ್ಕೆ ಸಿಗುತ್ತೇನೆ ಎಂದು ವಿಡಿಯೋ ಮಾಡಿ ಸುಮಲತಾ ಅವರು ಜನರನ್ನು ಸೆಳೆಯುವ ಹೊಸ ಪ್ಲಾನ್ ಮಾಡಿದ್ದಾರೆ.

ಇಷ್ಟು ದಿನ ಯಾವ ಪಕ್ಷಕ್ಕೆ ಯಾರು ಅಭ್ಯರ್ಥಿ ಅಂತ ಮಂಡ್ಯ ಸುದ್ದಿಯಲ್ಲಿತ್ತು. ಈಗ ಚುನಾವಣೆ ದಿನಾಂಕ ನಿಗದಿಯಾಗಿದ್ದು, ಹಲವು ವಿರೋಧದ ನಡುವೆಯೂ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಮತ್ತಷ್ಟೂ ಹತ್ತಿರವಾಗಲು ಸುಮಲತಾ ಅವರು ನಿರ್ಧರಿಸಿದ್ದಾರೆ. ಅದಕ್ಕಾಗಿ ಅಧಿಕೃತ ಸಾಮಾಜಿಕ ಜಾಲತಾಣಗಳ ಪೇಜ್‍ಗಳನ್ನು ಸುಮಲತಾ ಅವರ ಕ್ರಿಯೆಟ್ ಮಾಡಿದ್ದಾರೆ.
ಸುಮಲತಾ ಅವರು ಈಗಾಗಲೇ ಫೇಸ್‍ಬುಕ್ ನಲ್ಲಿ ವೈಯಕ್ತಿಕ ಖಾತೆಯನ್ನು ಹೊಂದಿದ್ದು, ಈಗ ಚುನಾವಣೆಯ ಹಿನ್ನೆಲೆಯಲ್ಲಿ ಪೇಜ್ ಓಪನ್ ಮಾಡಿದ್ದಾರೆ.
https://www.facebook.com/SumalathaAmbi/videos/274687533459940/
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply