ಕೆಕೆಆರ್ ತಂಡದ ಕ್ರಿಕೆಟಿಗನ ಮೇಲೆ ಸುಹಾನಾಗೆ ಪ್ಯಾರ್!

ಮುಂಬೈ: ಈ ಬಾರಿಯ ಐಪಿಎಲ್ ಹಲವು ದಾಖಲೆ, ರೋಚಕತೆಯಿಂದ ಅಭಿಮಾನಿಗಳನ್ನು ರಂಜಿಸುವ ಮೂಲಕ ತೆರೆ ಕಂಡಿತು. ಪ್ರತಿ ಬಾರಿಯಂತೆ ಐಪಿಎಲ್ ಹಲವು ವೈಶಿಷ್ಟ್ಯತೆಗಳಿಂದ ಕೂಡಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಲೀಕ ಹಾಗು ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಪುತ್ರಿ ಸುಹಾನಾ ಖಾನ್ ತಮ್ಮದೇ ತಂಡದ ಯುವ ಆಟಗಾರನ ಮೇಲೆ ಪ್ರೇಮ ಚಿಗುರಿದೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಂಡರ್-19 ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಾಗು ಕೆಕೆಆರ್ ತಂಡದ ಯುವ ಆಟಗಾರ ಶುಭಮನ್ ಗಿಲ್ ಮೇಲೆ ಸುಹಾನ್‍ಗೆ ಕ್ರಶ್ ಆಗಿದೆ ಎಂಬ ಚರ್ಚೆ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಬಾರಿ ಐಪಿಎಲ್‍ನಲ್ಲಿಯೂ ಶುಭಮನ್ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

ಈ ಎಲ್ಲ ಹಿಂದಿನ ಐಪಿಎಲ್ ಆವೃತ್ತಿಗಳಿಗಿಂತಲೂ ಇದೇ ಮೊದಲ ಬಾರಿಗೆ ಸುಹಾನ್ ಹೆಚ್ಚಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ತಂದೆಯೊಂದಿಗೆ ಆಟಗಾರರನ್ನು ಹುರಿದುಂಬಿಸುತ್ತಾ ಸುಹಾನಾ ಗ್ಯಾಲರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಸುಹಾನಾ ಈ ಬಾರಿ ಸ್ಟೇಡಿಯಂನಲ್ಲಿ ಕಾಣಿಸಿಕೊಳ್ಳುವದರ ಹಿಂದಿನ ವಿಷಯವೇ ಶುಭಮನ್ ಗಿಲ್ ಎಂಬ ಗಾಸಿಪ್ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *