ಕೈ ಮುಗಿದ ಅಧ್ಯಾಪಕರಿಗೆ ಮಂಡಿಯೂರಿ ನಮಸ್ಕರಿಸಿದ ಸುಧಾಮೂರ್ತಿ..!

ಬೆಳಗಾವಿ (ಚಿಕ್ಕೋಡಿ): ಕಾರ್ಯಕ್ರಮವೊಂದರಲ್ಲಿ ಕೈ ಮುಗಿದು ವಂದಿಸಿದ ಉಪನ್ಯಾಸಕರಿಗೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಮಂಡಿಯೂರಿ ನಮಸ್ಕರಿಸುವ ಮೂಲಕ ಮತ್ತೊಮ್ಮೆ ತಮ್ಮ ಸರಳತೆಯನ್ನು ಮೆರೆದಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ಡಿ. 6 ರಂದು ನಡೆದ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಅಲ್ಯುಮಿನಿ ಆಸೋಶಿಯೇಷನ್ ಕಾರ್ಯಕ್ರಮದಲ್ಲಿ ಸುಧಾಮೂರ್ತಿ ಅವರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಹುಬ್ಬಳ್ಳಿಯ ಭೂಮರೆಡ್ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಪ್ರೊಫೆಸರ್ ಕುರುಬರ ಅವರು ಸುಧಾಮೂರ್ತಿ ಅವರಿಗೆ ಕೈಮುಗಿದು ವಂದಿಸಿದರು. ಈ ವೇಳೆ ಪ್ರೊಫೆಸರ್ ಕುರುಬರ ಅವರ ಬಳಿಯಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆದಿರುವ ಸುಧಾಮೂರ್ತಿ ಅವರು ಯಾವುದೇ ಹಿಂಜರಿಕೆ ಇಲ್ಲದೆ ಅವರ ಕಾಲಿಗೆ ಬಿದ್ದು ನಮಸ್ಕರಿಸಿದರು.

ಇನ್ಫೋಸಿಸ್ ಫೌಂಡೇಶನ್ ಅಂತಹ ದೊಡ್ಡ ಕಂಪನಿಯ ಅಧ್ಯಕ್ಷೆಯಾಗಿದ್ದರೂ ತಮ್ಮ ಸರಳತೆ ಹಾಗೂ ಸಹಾಯ ಗುಣದಿಂದಲೇ ಸುಧಾಮೂರ್ತಿ ಅವರು ಎಲ್ಲೆಡೆ ಹೆಸರಾದವರು. ಈಗ ತಮಗೆ ಶಿಕ್ಷಣ ನೀಡಿದ ಗುರುಗಳಿಗೆ ಸುಧಾಮೂರ್ತಿಯವರು ಗೌರವ ಸಲ್ಲಿಸಿರುವ ಪರಿಗೆ ಮತ್ತೊಮ್ಮೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *