ಪ್ರಾದೇಶಿಕ ಭಾಷಾ ಮಹತ್ವ ಪ್ರಧಾನಿ ಮೋದಿ ಮಾತಿಗೆ ಸಂತಸ ವ್ಯಕ್ತ ಪಡಿಸಿದ ಕಿಚ್ಚ ಸುದೀಪ್

ರಾಷ್ಟ್ರ ಭಾಷೆ ವಿಚಾರವಾಗಿ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಟ್ವಿಟರ್ ನಲ್ಲಿ ಯುದ್ಧವೇ ನಡೆಯಿತು. ಕೆಲವೇ ಗಂಟೆಗಳಲ್ಲಿ ನಡೆದ ಪ್ರಶ್ನೋತ್ತರ ರಾಷ್ಟ್ರದಾದ್ಯಂತ ಸಂಚಲನವುಂಟು ಮಾಡಿತ್ತು. ಅಜಯ್ ಮತ್ತು ಸುದೀಪ್ ಅವರು ತಮ್ಮ ತಮ್ಮ ಸಮರ್ಥನೆಗಳನ್ನು ಕೊಟ್ಟುಕೊಂಡು ಸುಮ್ಮನಾದರೂ, ಕೆಲವರು ಮಾತ್ರ ಈ ಕುರಿತು ಪರ ವಿರೋಧದ ಹೇಳಿಕೆಗಳನ್ನು ನೀಡುತ್ತಲೇ ಬಂದರು. ಈ ವಿಷಯ ತಣ್ಣಗಾಯಿತು ಎನ್ನುವಷ್ಟರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಈ ವಿಷಯದ ಬಗ್ಗೆ ಮಾತನಾಡಿ, ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದ್ದಾರೆ. ಇದನ್ನೂ ಓದಿ : ನಾಲ್ಕೈದು ವರ್ಷ ಪ್ರಶಾಂತ್ ನೀಲ್ ತೆಲುಗಿನಲ್ಲೇ ಲಾಕ್ : ಮತ್ತೆ ರಕ್ತದ ಹಿಂದೆ ಬಿದ್ದ ಕೆಜಿಎಫ್ ಡೈರೆಕ್ಟರ್

ಜೈಪುರದಲ್ಲಿ ನಡೆಯುತ್ತಿರುವ ಬಿಜೆಪಿಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ರಾದೇಶಿಕ ಭಾಷೆಗಳ ಕುರಿತಾಗಿ ನಡೆಯುತ್ತಿರುವ ವಿವಾದಗಳನ್ನು ಗಮನಿಸುತ್ತಿದ್ದೇನೆ. ಭಾಷೆಗಳ ಆಧಾರದ ಮೇಲೆ ವಿವಾದಗಳು ಆಗಬಾರದು. ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ನಾವು ಸಂಸ್ಕೃತಿಯನ್ನು ಕಾಣುತ್ತಿದ್ದೇವೆ. ಅವೆಲ್ಲವೂ ಪೂಜ್ಯನೀಯ ಭಾಷೆಗಳು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿ ಭಾಷೆಗೂ ಪ್ರಾಮುಖ್ಯತೆ ನೀಡಲಾಗಿದೆ’ ಎಂದು ಭಾಷಣ ಮಾಡಿದ್ದಾರೆ. ಈ ಕುರಿತು ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಬಾಡಿ ಶೇಮಿಂಗ್ ವಿರುದ್ಧ ನಟಿ ಮಯೂರಿ ಮಾತು

ಮಾಧ್ಯಮಗಳ ಜೊತೆ ಮಾತನಾಡಿರುವ ಕಿಚ್ಚು ಸುದೀಪ್, ‘ನಾನು ರಾಷ್ಟ್ರ ಭಾಷೆಯ ಬಗ್ಗೆ ಮಾತನಾಡಿದಾಗ ಸುಖಾಸುಮ್ಮನೆ ವಿವಾದ ಮಾಡಲಾಯಿತು. ನಾನು ಅಂದಿದ್ದೇ ಬೇರೆ, ಅವರು ಅರ್ಥೈಸಿಕೊಂಡಿದ್ದೇ ಬೇರೆ. ಆಗ ನಾನು ಏನು ಮಾತನಾಡಿದ್ದೆನೋ, ಅದನ್ನೇ ಈಗ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ. ಆ ಮಾತಿಗೆ ಅವರಿಗೆ ಕೃತಜ್ಞತೆಗಳು’ ಎಂದಿದ್ದಾರೆ. ಇದನ್ನೂ ಓದಿ: 625ಕ್ಕೆ 619 ಅಂಕಗಳನ್ನು ಗಳಿಸಿದ `ಗಟ್ಟಿಮೇಳ’ ಖ್ಯಾತಿಯ ಮಹತಿ ಭಟ್

ಪ್ರಾದೇಶಿಕ ಭಾಷಾ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಹಿಂದಿ ಭಾಷೆಯನ್ನು ಸಮರ್ಥಿಸಿಕೊಂಡು ಮಾತನಾಡಿದ ಅನೇಕ ಸ್ಟಾರ್ ನಟರು ಪ್ರಧಾನಿ ಮಾತಿನಿಂದಾಗಿ ಮೌನಕ್ಕೆ ಜಾರಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಬಾಲಿವುಡ್ ನಟರ ಅಜ್ಞಾನಕ್ಕೆ ಪ್ರಧಾನಿ ಸರಿಯಾಗಿಯೇ ಉತ್ತರಿಸಿದ್ದಾರೆ ಎಂದು ಟ್ರೋಲ್ ಕೂಡ ಮಾಡಲಾಗುತ್ತಿದೆ.

Comments

Leave a Reply

Your email address will not be published. Required fields are marked *