ವಿಕ್ರಾಂತ್‌ ರೋಣ ಸಿನಿಮಾ ನನ್ನ ಮಗಳಿದ್ದಂತೆ: ಕಿಚ್ಚ ಸುದೀಪ್‌

ಭಿನಯ ಚಕ್ರವರ್ತಿ ಸುದೀಪ್ ನಟನೆಯ ನಿರೀಕ್ಷಿತ ಸಿನಿಮಾ `ವಿಕ್ರಾಂತ್ ರೋಣ’ ಸದ್ಯದಲ್ಲೇ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದ ಟ್ರೈಲರ್ ಮತ್ತು ಸಾಂಗ್‌ನಿಂದ ಫ್ಯಾನ್ಸ್ ದಿಲ್ ಕದ್ದಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ನಟ ಸುದೀಪ್ ‌ʻಪಬ್ಲಿಕ್ ಟಿವಿʼ ಸಂದರ್ಶನದಲ್ಲಿ ನನ್ನ ಮಗಳಿಗೂ ಈ ಸಿನಿಮಾಗೂ ಏನು ವ್ಯತ್ಯಾಸವಿಲ್ಲ ಎಂದು ಮಾತನಾಡಿದ್ದಾರೆ.

3ಡಿ ರೂಪದಲ್ಲಿ ಬಹುಭಾಷೆಗಳಲ್ಲಿ ತೆರೆಗೆ ಅಬ್ಬರಿಸುತ್ತಿರುವ ವಿಕ್ರಾಂತ್ ರೋಣ ಚಿತ್ರಕ್ಕೆ ಭರದಿಂದ ಪ್ರಚಾರ ಕಾರ್ಯ ನಡೆಯುತ್ತಿದೆ. ಬೇರೆ ರಾಜ್ಯಗಳಿಗೆ ಭೇಟಿ ನೀಡಿ ಸಿನಿಮಾ ಕುರಿತು ಭರ್ಜರಿ ಪ್ರಚಾರ ಮಾಡಿ ಅಲ್ಲಿನ ಅಭಿಮಾನಿಗಳ ಜತೆ ಸುದೀಪ್ ಮಾತನಾಡಿ ಬರುತ್ತಿದ್ದಾರೆ. ಈಗ ವಿಕ್ರಾಂತ್ ರೋಣ ಚಿತ್ರವನ್ನು ತಮ್ಮ ಮಗಳಿಗೆ ಹೋಲಿಸಿ ಸಂದರ್ಶನದಲ್ಲಿ ಸುದೀಪ್ ಮಾತನಾಡಿದ್ದಾರೆ. ಇದನ್ನೂ ಓದಿ:ವಿಕ್ರಾಂತ್ ರೋಣ ಸಿನಿಮಾ ಆಗೋಕೆ ಇವರೇ ಸ್ಪೂರ್ತಿ: ಕಿಚ್ಚ ಹೀಗಂದಿದ್ದು ಯಾರ ಬಗ್ಗೆ?

ನಿಮ್ಮ ಪರಿಚಯ ಬೇರೆ ಭಾಷೆಯವರಿಗೂ ಇದೆ. ಬೇರೇ ರಾಜ್ಯಗಳಿಗೂ ಭೇಟಿ ಪ್ರಚಾರ ಮಾಡಬೇಕು ಅಂತಾ ಒಬ್ಬ ನಟನಾಗಿ ನಿಮಗೆ ಯಾಕೆ ಅನಿಸುತ್ತದೆ ಎಂದು ನಿರೂಪಕಿ ಕೇಳಿದ ಪ್ರಶ್ನೆಗೆ, ನನಗೂ ಒಬ್ಬಳು ಮಗಳಿದ್ದಾಳೆ. ಅವಳನ್ನು ಕಾಲೇಜ್‌ಗೆ ಅಡ್ಮಿಷನ್ ಮಾಡಿಸಲು ಹೋಗಬೇಕಾಗುತ್ತೆ. ಆಗ ನಾನು ಯಾರು ಗೊತ್ತಾ ಅಂತಾ ಹೇಳೋಕೆ ಆಗಲ್ಲ. ಒಬ್ಬ ಪೋಷಕನಾಗಿ ಅದು ನನ್ನ ಜವಾಬ್ದಾರಿ. ನನ್ನ ಮಗಳಿಗೂ ಈ ಸಿನಿಮಾಗೂ ಏನು ವ್ಯತ್ಯಾಸ? ನನ್ನ ಈ ಸಿನಿಮಾ ಹೊಸತು, ವಿಕ್ರಾಂತ್ ರೋಣ ನನ್ನ ಮಗು ಇದ್ದಂತೆ. ಈ ಚಿತ್ರದ ಯೋಗ್ಯತೆ ಹೀಗಿದೆ ನೋಡಿ ಬೆಂಬಲಿಸಿ ಅಂತಾ ಹೇಳೋದು ಕೂಡ ನನ್ನ ಕರ್ತವ್ಯ ಎಂದು ಮಗಳಷ್ಟೇ ಈ ಚಿತ್ರ ಮುಖ್ಯವೆಂದು ಸುದೀಪ್ ʻಪಬ್ಲಿಕ್ʼ ಟಿವಿ ಜೊತೆ ಮಾತನಾಡಿದ್ದಾರೆ.

Live Tv

Comments

Leave a Reply

Your email address will not be published. Required fields are marked *