ಕೋರ್ಟ್‌ ಕಟಕಟೆಯಲ್ಲಿ ಎಂ.ಎನ್‌ ಕುಮಾರ್‌ ವಿರುದ್ಧ ಹೇಳಿಕೆ ನೀಡಿದ ಕಿಚ್ಚ ಸುದೀಪ್‌

ನಿರ್ಮಾಪಕ ಎಂ.ಎನ್‌. ಕುಮಾರ್‌ (M.n Kumar) ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ಹಾಜರಾಗಿ ನಟ ಸುದೀಪ್‌ (Sudeep) ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಹಲವು ಫೋಟೋಗಳೊಂದಿಗೆ ಕೋರ್ಟ್‌ ಮುಂದೆ ದಾಖಲೆಗಳನ್ನು ನಟ ಸಲ್ಲಿಸಿದ್ದಾರೆ.

13ನೇ ಎಸಿಎಂಎಂ ಕೋರ್ಟ್‌ ಮುಂದೆ ಗುರುವಾರ ಹಾಜರಾದ ನಟ ಸುದೀಪ್‌, ತಾವು ಹೂಡಿದ್ದ ಮಾನನಷ್ಟ ಮೊಕದ್ದಮೆ ಬಗ್ಗೆ ಹೇಳಿಕೆ ದಾಖಲಿಸಿದರು. ನ್ಯಾ. ವೆಂಕಣ್ಣ ಬಸಪ್ಪ ಹೊಸಮನಿ ಎದುರು ಹೇಳಿಕೆ ದಾಖಲಿಸಿದ ನಟ, ಪ್ರಕರಣ ಸಂಬಂಧ ರಾಜೀ ಆಗುವ ಪ್ರಮೇಯ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದೀಪ್‌ (Sudeep) ಹೇಳಿಕೆ ದಾಖಲಿಸಿಕೊಳ್ಳುವ ವೇಳೆ ನ್ಯಾಯಾಧೀಶರು, ನಿರ್ಮಾಪಕರು ಕ್ಷಮಾಪಣೆ ಕೇಳಿದರೆ ಕ್ಷಮಿಸುತ್ತೀರಾ? ರಾಜೀ ಸಂಧಾನ ಮಾಡಿಕೊಂಡು ಕಕ್ಷಿದಾರರಿಗೆ ಮಾದರಿಯಾಗುತ್ತೀರಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರಿಸಿದ ಸುದೀಪ್‌, ಅವರ ಹೇಳಿಕೆಯಿಂದ ನಾನು ಇಷ್ಟು ವರ್ಷ ಕಷ್ಟಪಟ್ಟು ಗಳಿಸಿದ ವರ್ಚಸ್ಸಿಗೆ ಹಾನಿಯಾಗಿದೆ. ಒಬ್ಬ ಸುದೀಪ್‌ನನ್ನು ಬಗ್ಗಿಸಿದರೆ ಹಲವರನ್ನು ಬಗ್ಗಿಸಬಹುದೆಂದು ತಿಳಿದಿದ್ದಾರೆ ಎನ್ನುವ ಮೂಲಕ ತಾವು ರಾಜೀ ಸಂಧಾನಕ್ಕೆ ಸಿದ್ಧರಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ:ಸಿಕ್ಸ್ ಪ್ಯಾಕ್ ಅವತಾರದಲ್ಲಿ ಚಾರ್ಲಿ ಬೆಡಗಿ ಸಂಗೀತಾ

ಎಂ.ಎನ್.ಕುಮಾರ್ (M.n Kumar) ಹೇಳಿಕೆಯನ್ನು ಎಂ.ಎನ್.ಸುರೇಶ್ ಬೆಂಬಲಿಸಿದ್ದಾರೆ. ಇವರ ಸುದ್ದಿಗೋಷ್ಠಿಯಿಂದ ಮಾನಹಾನಿಯಾಗಿದೆ. ಹಲವರು ನನ್ನನ್ನು ಈ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಂ.ಎನ್.ಕುಮಾರ್ ಮಾಡಿದ ಆರೋಪಗಳೆಲ್ಲ ಸುಳ್ಳು. ರಾಜರಾಜೇಶ್ವರಿ ನಗರದಲ್ಲಿ ಮನೆ ಕಟ್ಟಲು ಹಣದ ನೆರವಿನ ಆರೋಪವೂ ಸುಳ್ಳು. ಮನೆ ದುರಸ್ತಿಗೆ ಹಣ ನೀಡಿದ್ದಾಗಿ ಮಾಡಿದ ಆರೋಪ ಸುಳ್ಳು ಎಂದು ಪ್ರಾಮಾಣಿಕ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ಸುದೀಪ್‌ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ ನಾಳೆಗೆ ಆದೇಶ ನೀಡಲಿದೆ.

ವಕೀಲ ಅಜಯ್ ಕಡಕೋಳ್ ಅವರೊಡನೆ ನಟ ಸುದೀಪ್‌ ಕೋರ್ಟ್‌ಗೆ ಹಾಜರಾಗಿದ್ದರು. ಸುದೀಪ್‌ಗೆ ಆಪ್ತ ಚಂದ್ರಚೂಡ್, ನಿರ್ಮಾಪಕ ಜಾಕ್ ಮಂಜು (Jack Manju) ಸಾಥ್‌ ನೀಡಿದರು.

ಸುದೀಪ್ ಪರ ವಕೀಲ ಅಜಯ್ ಮಾತನಾಡಿ, ಸೆಕ್ಷನ್ 300 ಅಡಿಯಲ್ಲಿ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ವಿರುದ್ಧ ಕೇಸ್ ಫೈಲ್ ಮಾಡಿದ್ದರು. ಕುಮಾರ್ ಮತ್ತು ಸುರೇಶ್ ಮಾತನಾಡಿರೋ ದಾಖಲೆಗಳು ಹಾಗೂ ಪೋಟೋಗಳನ್ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]