ಬಿಗ್ ಬಾಸ್ ಮನೆಯಲ್ಲಿ ಐಟಿ ದಾಳಿಯ ಬಗ್ಗೆ ಕಿಚ್ಚನ ಮಾತು

ಬೆಂಗಳೂರು: ಸ್ಯಾಂಡಲ್‍ವುಡ್ ಸಿನಿಮಾ ನಟ, ನಿರ್ಮಾಪರ ಮೇಲೆ ಐಟಿ ದಾಳಿಯ ಬಗ್ಗೆ ನಟ ಸುದೀಪ್ ಬಿಗ್ ಬಾಸ್ ಮನೆಯಲ್ಲೂ ಮಾತನಾಡಿದ್ದು, ಐಟಿ ದಾಳಿಯ ವೇಳೆ ಮನೆಯಲ್ಲೇ ಇದ್ದ ಅನುಭವದ ಬಗ್ಗೆ ಮಾತನಾಡಿ ಅನಿಸಿಕೆ ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾ ಉದ್ಯಮದ ಪಾಲಿಗೆ ಕರಾಳ ದಿನವಾಗಿದ್ದ ಗುರುವಾರದಂದು ನಟರಾದ ಸುದೀಪ್, ಯಶ್, ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್ ಹಾಗೂ ನಿರ್ಮಾಪಕರಾದ ಜಯಣ್ಣ, ವಿಜಯ್ ಕಿರಗಂದೂರ್, ಮನೋಹರ್ ಅವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ಪರಿಣಾಮವಾಗಿ 3 ದಿನಗಳ ಕಾಲ ನಟ, ನಿರ್ಮಾಪಕರು ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಐಟಿ ದಾಳಿಯ ಪರಿಣಾಮ ನಟ ಸುದೀಪ್ ಅವರು ಶೂಟಿಂಗ್ ನಿಂದ ಅರ್ಧದಲ್ಲೇ ಮನೆಗೆ ವಾಪಸ್ ಬಂದಿದ್ದರು. ಅಲ್ಲದೇ ಐಟಿ ದಾಳಿ ಬಹುಬೇಗ ಮುಗಿಯದ ಕಾರಣ ಬಿಗ್‍ಬಾಸ್ ಮನೆಯ ಚಿತ್ರೀಕರಣಕ್ಕೆ ಅವಕಾಶ ಲಭಿಸುತ್ತಾ ಎಂಬ ಅನುಮಾನ ಮೂಡಿತ್ತು. ಆದರೆ ಅಂತಿಮವಾಗಿ ಐಟಿ ದಾಳಿ ಮುಗಿದ ಕಾರಣ ಬಿಗ್ ಬಾಸ್ ವಾರದ ಕಥೆ ಹೇಳಲು ಸುದೀಪ್ ಹಾಜರಾಗಿದ್ದರು.

ಸುದೀಪ್ ಅವರು ನಗು ನಗುತ್ತಲೇ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ವಿಶೇಷವಾಗಿ ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಸ್ವಾಗತ ಮಾಡಿದ್ದರು. ಕಳೆದ ವಾರ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ ಸ್ಪರ್ಧಿ ಮುರಳಿ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ರು. ಈ ವೇಳೆ ಐಟಿ ದಾಳಿ ಬಗ್ಗೆ ಮಾಹಿತಿ ಇಲ್ಲದ ಮುರಳಿ ಅವರು 30 ಕೋಟಿ ರೂ. ವೆಚ್ಚ ಬಿಗ್ ಬಾಸ್ ಮನೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನ್ನ ಜೀವನದ ಬಹುದೊಡ್ಡ ಸಂಗತಿ ಎಂದು ಪದೇ ಪದೇ ಹೇಳಿದರು.

ಮುರಳಿ ಅವರ ಈ ಮಾತಿಗೆ ನಗುತ್ತಲೇ ಪ್ರತಿಕ್ರಿಯೆ ನೀಡಿದ ಸುದೀಪ್ ಪದೇ ಪದೇ 30 ಕೋಟಿ. ರೂ ಎಂದು ಹೇಳಬೇಡಿ. ನಿನ್ನೆ ತಾನೇ ಮನೆಗೆ ಯಾರೋ ಒಬ್ಬರು ಬಂದು ಹೋದರು. ಪಾಪ ಮತ್ತೆ ಅವರು ಬಿಗ್ ಬಾಸ್ ಮನೆಗೆ ಬಂದು ಬಿಟ್ಟರೆ ಕಷ್ಟ ಎಂದು ಹೇಳಿದರು. ಸುದೀಪ್ ಅವರ ಈ ಮಾತು ಕೇಳುತ್ತಲೇ ಕಾರ್ಯಕ್ರಮದಲಿದ್ದ ಎಲ್ಲರೂ ನಗುವನ್ನು ತಡೆಯಲಾಗದೆ ಸಂತಸ ಪಟ್ಟರೆ, ಇತ್ತ ಸುದೀಪ್ ಏನು ಹೇಳುತ್ತಿದ್ದಾರೆ ಎಂದು ತಿಳಿಯದೆ ಪ್ರಶ್ನೆ ಮಾಡುತ್ತಲೇ ಇದ್ದರು.

ಮುರಳಿ ಅವರು ನನಗೆ ಏನು ಗೊತ್ತಿಲ್ಲಾ ಹೇಳಿ ಎಂದು ಕೇಳಿದ ವೇಳೆ ನೇರವಾಗಿ ಉತ್ತರಿಸದ ಸುದೀಪ್, ಪರೋಕ್ಷವಾಗಿ ಹಿಂಟ್ ನೀಡುತ್ತಾ ಮಾತನಾಡಿದರು. ಅವರು ತುಂಬಾ ಒಳ್ಳೆ ಜನ, ಬೆಂಗಳೂರಿನಲ್ಲಿ ಕಳೆದ 2 ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ಆದ್ದರಿಂದ ನಾಲ್ಕು ಕಲಾವಿದರು ಒಂದ್ತರ ರಜೆ ತೆಗೆದುಕೊಂಡಿದ್ದೇವು. ಕೆಲವರಿಗೆ ಇಂದು ಮುಕ್ತಿಯಾದರೆ, ಮತ್ತು ಕೆಲವರಿಗೆ ನಿನ್ನೆ ಮುಕ್ತಿ ಆಯ್ತು. ನಿಮ್ಮನ್ನು ಕರೆಯಲು ಶನಿವಾರ ನಾನು ಬಂದಿದೆ. ಆದರೆ ಯಮಾರಿದ್ರೆ ನಿಮ್ಮನ್ನು ಕರೆಯಲು ಯಾರು ಇರುತ್ತಿರಲಿಲ್ಲ. ಆಗ ನಾನು ಏನೆನೋ ಹೇಳಿ, ಬಂದಿದ್ದೇನೆ ಎಂದರು. ಅಲ್ಲದೇ ನಿಮಗೇ ಎಲ್ಲಾ ತಿಳಿದಿದೆ ಮನೆಗೆ ಹೋಗುವ ವೇಳೆ ಹೇಳಿ ಎಂದು ಹಾಜರಿದ್ದ ವಿಕ್ಷಕರಿಗೆ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *