ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಅವರು ಇಂದು 20ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. ವಿಶೇಷವೆಂದರೆ ಪ್ರೀತಿಯ ಅಪ್ಪ, ಅಮ್ಮಗೆ ಮಗಳು ಸಾನ್ವಿ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಕೋರಿದ್ದಾರೆ.

ಸುದೀಪ್ ಹಾಗೂ ಪ್ರಿಯಾ 2001ರ ಅಕ್ಟೋಬರ್ 18ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2004ರಲ್ಲಿ ಈ ದಂಪತಿಗೆ ಸಾನ್ವಿ ಜನಿಸಿದರು. ಇಂದಿಗೆ ಸುದೀಪ್ ಮತ್ತು ಪ್ರಿಯಾ ಅವರು ಮದುವೆಯಾಗಿ 20 ವರ್ಷ ಕಳೆದಿದ್ದು, ಈ ಹಿನ್ನೆಲೆ ಸಾನ್ವಿ ಸೋಶಿಯಲ್ ಮೀಡಿಯಾ ಮೂಲಕ ಸುದೀಪ್ ಹಾಗೂ ಪ್ರಿಯಾಗೆ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಟಾಪ್‌ಲೆಸ್ ಅವತಾರದಲ್ಲಿ ಇಷಾ ಗುಪ್ತ – ಹೆಚ್ಚಾಯ್ತು ತುಂಡೈಕ್ಳ ಎದೆ ಬಡಿತ

ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಾನ್ವಿ ಅಪ್ಪ, ಅಮ್ಮನ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಕಿಚ್ಚ ದಂಪತಿಗೆ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಇದನ್ನೂ ಓದಿ: ಕತ್ರಿನಾ ಜೊತೆಗೆ ವಿಕ್ಕಿ ಕೌಶಲ್ ಎಂಗೇಜ್‍ಮೆಂಟ್?
View this post on Instagram
ಈ ಬಾರಿ ಕೊರೊನಾ ಇರುವ ಕಾರಣದಿಂದಾಗಿ ಮನೆಯಲ್ಲಿಯೇ ಸರಳವಾಗಿ ಸುದೀಪ್ ದಂಪತಿ ಕೇಕ್ ಕಟ್ ಮಾಡಿದ್ದು, ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Leave a Reply