ನಿಮಗೆ ಕಪ್‌ ಗೆಲ್ಲಲು ಸಾಮರ್ಥ್ಯ ಇಲ್ವಾ?: ಭವ್ಯಾಗೆ ಸುದೀಪ್ ಕ್ಲಾಸ್

ನ್ನಡದ ‘ಬಿಗ್ ಬಾಸ್’ (Bigg Boss Kannada 11) ಆಟ ಇನ್ನು 3 ವಾರಗಳು ನಡೆಯಲಿದೆ. 9 ಸ್ಪರ್ಧಿಗಳು ರೇಸ್‌ನಲ್ಲಿದ್ದಾರೆ. ಯಾರಿಗೆ ಗೆಲುವಿನ ಪಟ್ಟ ಸಿಗಲಿದೆ ಎಂದು ಫ್ಯಾನ್ಸ್ ಕಾತರದಿಂದ ಎದುರು ನೋಡುತ್ತಿದ್ದಾರೆ. ಹೀಗಿರುವಾಗ ಟಾಸ್ಕ್‌ವೊಂದರಲ್ಲಿ ತಮ್ಮ ಬದಲು ಹನುಮಂತ ಆಟ ಆಡಲು ಭವ್ಯಾ ನೀಡಿರುವ ಕಾರಣಕ್ಕೆ ಸುದೀಪ್ ಸಿಟ್ಟಾಗಿದ್ದಾರೆ. ನಿಮಗೆ ಕಪ್ ಗೆಲ್ಲಲು ಸಾಮರ್ಥ್ಯ ಇಲ್ವಾ? ಅಂತ ಸುದೀಪ್ ಭವ್ಯಾಗೆ (Bhavya Gowda) ಪ್ರಶ್ನೆ ಮಾಡಿದ್ದಾರೆ.

ಗ್ರಾಸರಿ ಟಾಸ್ಕ್‌ಗೆ ಬರೋಣ. ಭವ್ಯಾ ಅವರೊಂದು ಕಾರಣ ಕೊಡ್ತಾರೆ. ಹಾಡು, ಮನರಂಜನೆ ವಿಚಾರದಲ್ಲಿ ಹನುಮಂತ ಮುಂದೆ ಇದ್ದಾರೆ. ಈ ಟಾಸ್ಕ್ ಅವರು ಆಡಿದ್ರೆ ಬೆಟರ್ ಅನಿಸುತ್ತದೆ ಎಂದು ಭವ್ಯಾ ಕಾರಣ ನೀಡಿದ್ರು. ಇದು ಸಿಲ್ಲಿಯಾಗಿತ್ತು ಎಂದು ಸುದೀಪ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ಕುರಿತು ಶನಿವಾರದ ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆ ನಡೆದಿದೆ. ಇದನ್ನೂ ಓದಿ:ಮಾವನಿಂದ ಸೊಸೆಗೆ ತೊಟ್ಟಿಲು ಗಿಫ್ಟ್‌ – ಧನರಾಜ್‌ಗೆ ಕೊಟ್ಟ ಮಾತನ್ನು ಉಳಿಸಿದ ಗೋಲ್ಡ್‌

ಭವ್ಯಾ ಕೊಟ್ಟಿರುವ ಕಾರಣದ ಬಗ್ಗೆ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಭವ್ಯಾ ನೀವು ಕೊಟ್ಟಿದ್ದ ಕಾರಣ ಸೂಟ್ ಆಗಲಿಲ್ಲ. ಕಾರಣ ಕೊಡೋದಕ್ಕೆ ನೀವು ಸಾವಿರ ಹೇಳಬಹುದಿತ್ತು. ಇಲ್ಲಾಂದ್ರೆ ಆಟ ಆಡೋಕೆ ನನಗೆ ಆಸಕ್ತಿ ಇಲ್ಲ ಅಂತ ಹೇಳಿದ್ರು ಮುಗಿದು ಹೋಗಿರೋದು. ಗ್ರಾಸರಿ ಟಾಸ್ಕ್‌ನಲ್ಲಿ ಎಂದೂ ಹಾಡು & ಡ್ಯಾನ್ಸ್‌ಗೆ ಸಂಬಂಧಪಟ್ಟ ಟಾಸ್ಕ್ ಬಂದೇ ಇಲ್ಲ ಅಂತ ಸುದೀಪ್ (Sudeep) ಸ್ಪಷ್ಟನೆ ನೀಡಿದರು. ಬ್ಯಾಲೆನ್ಸ್ ಅಂತ ಬಂದಾಗ ನನಗಿಂತ ಹನುಮಂತ (Hanumantha) ಬೆಸ್ಟ್ ಇದ್ದಾರೆ ಎಂದು ಹೇಳಿದ ಭವ್ಯಾಗೆ, ಹನುಮಂತನೇ ಕಪ್ ಗೆಲ್ಲಲಿ ಇದನ್ನು ನೀವು ಒಪ್ಪುತ್ತೀರಾ ಎಂದು ಸುದೀಪ್ ಖಡಕ್ ಆಗಿ ಕೇಳಿದ್ದಾರೆ. ಆಟ ಬಿಟ್ಟು ಕೊಡುವ ಸಲುವಾಗಿ ಕೊಟ್ಟಿರುವ ಸಿಲ್ಲಿ ಕಾರಣಕ್ಕೆ ಸುದೀಪ್‌ ಭವ್ಯಾಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

ಎಲ್ಲಾ ವಿಷಯದಲ್ಲೂ ಸಾಮರ್ಥ್ಯ ಇರೋರು ಈ ಕಪ್ ಗೆಲ್ಲಬೇಕು ಭವ್ಯಾ. ಹಾಗಾಗಿ, ಬಿಗ್‌ ಬಾಸ್‌ಗೆ ನೀವು ಫಿಟ್ ಇಲ್ಲ ಎಂಬುದನ್ನು ನೀವೇ ಡಿಕ್ಲೇರ್ ಮಾಡಿದ್ರಿ ಎಂದು ಭವ್ಯಾಗೆ ಸುದೀಪ್ ಬೆಂಡೆತ್ತಿದ್ದಾರೆ. ಇದೇ ಮಾತನ್ನು ಕೇಳಿಸಿಕೊಂಡ ಭವ್ಯಾ ಗೌಡ (Bhavya Gowda) ಜೊತೆಗೆ ಮನೆ ಮಂದಿ ಫುಲ್ ಶಾಕ್ ಆಗಿದ್ದಾರೆ.