ಬೆಂಗಳೂರು: ಇತ್ತೀಚೆಗೆ ನಟ ಸುದೀಪ್ ಫಿಟ್ ನೆಸ್ ಚಾಲೆಂಜ್ ಸ್ವೀಕರಿಸಿದ್ದು, ವಿಡಿಯೋ ಅಪ್ಲೋಡ್ ಮಾಡಿದ್ದರು. ಈಗ ಸುದೀಪ್ ಅವರೇ ಹೊಸದೊಂದು ಚಾಲೆಂಜ್ ಹಾಕಿದ್ದಾರೆ.
ಕಿಚ್ಚ ಸುದೀಪ್ ಭಾರತ ತಂಡದ ಕ್ರಿಕೆಟರ್ ವಿನಯ್ ಕುಮಾರ್ ಅವರ ಚಾಲೆಂಜ್ ಸ್ವೀಕರಿಸಿದ್ದರು. ವಿನಯ್ ಕುಮಾರ್ ಚಾಲೆಂಜ್ ಸ್ವೀಕರಿಸಿದ ನಂತರ ಕಿಚ್ಚ ಬಾಲಿವುಡ್ ನಟ ರಿತೇಶ್ ದೇಶಮುಖ್, ಸೋಹೆಲ್ ಖಾನ್, ತಮ್ಮ ಪತ್ನಿ ಪ್ರಿಯಾ ಸುದೀಪ್, ಯಶ್ ಹಾಗೂ ಶಿವರಾಜ್‍ಕುಮಾರ್ ಅವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಈಗ ಸುದೀಪ್ ಕನ್ನಡ ಚಿತ್ರರಂಗದವರಿಗೆ ಹೊಸ ಸವಾಲು ಹಾಕಿದ್ದಾರೆ.
Continuing the fitness trend, here’s the #BringOutThePailwaanInYou challenge.
Post a present pic n post a pic every month to show th difference. Nominate who u feel need fitness or who can inspire others into it.
Nominating @anupsbhandari @PavanWadeyar @Karthik1423 @RajeevHanu— Kichcha Sudeepa (@KicchaSudeep) June 12, 2018
ಸುದೀಪ್ `ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು’ ಎನ್ನುವ ಸವಾಲು ಹಾಕಿದ್ದಾರೆ. `ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು’ ಚಾಲೆಂಜ್ ಎಂದರೆ ಇಂದಿನ ತಮ್ಮ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಬೇಕು. ನಂತರ ಪ್ರತಿದಿನ ವರ್ಕ್ ಔಟ್ ಮಾಡಿ ಒಂದು ತಿಂಗಳ ನಂತರ ಅವರು ಮತ್ತೆ ತಮ್ಮ ಫೋಟೋವನ್ನು ಅಪ್ಲೋಡ್ ಮಾಡಬೇಕು. ಆಗ ಎರಡು ಫೋಟೋಗಳ ಮೂಲಕ ಅದರಲ್ಲಿ ಏನೆಲ್ಲಾ ಬದಲಾವಣೆಯಾಗಿರುತ್ತದೆ ಎಂಬುದನ್ನು ತೋರಿಸಬೇಕು.
ಸುದೀಪ್ ಈ ಸವಾಲನ್ನು ಬರೆದು ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ಕಾರ್ತಿಕ್, ಅನೂಪ್ ಭಂಡಾರಿ ಮತ್ತು ನಟ ರಾಜೀವ್ ಅವರಿಗೆ ಟ್ವೀಟ್ ಮಾಡಿದ್ದಾರೆ. ಸುದೀಪ್ ಹಾಕಿದ್ದ ಸವಾಲನ್ನು ಪವನ್ ಒಡೆಯರ್ ಸ್ವೀಕರಿಸಿ ಮರು ಟ್ವೀಟ್ ಮಾಡಿದ್ದಾರೆ. “ಸುದೀಪ್ ಸರ್ ನಾನು ನಿಮ್ಮ ಸವಾಲನ್ನು ಸ್ವೀಕರಿಸುತ್ತಿದ್ದೇನೆ. ಈಗ ನನ್ನ ಇಂದಿನ ಫೋಟೋ ಅಪ್ಲೋಡ್ ಮಾಡಿದ್ದೇನೆ. ನಂತರ ಒಂದು ತಿಂಗಳಾದ ಮೇಲೆ ಬದಲಾವಣೆಯ ಜೊತೆ ಫೋಟೋ ಹಾಕುತ್ತೇನೆ” ಎಂದು ಬರೆದು ರೀ ಟ್ವೀಟ್ ಮಾಡಿದ್ದಾರೆ.
Thanks @krisshdop ,,I throw th #BringOutThePailwaanInYou challenge to u ,,,to pull down a minimum of 5kilos bfr th shoot ends .
🤗now tats being a good captain.
Inspire me further. Cheers n good luck . https://t.co/kebSStGitV— Kichcha Sudeepa (@KicchaSudeep) June 11, 2018
ಸುದೀಪ್ ಹಾಕಿದ್ದ ಸವಾಲನ್ನು `ಹೆಬ್ಬುಲಿ’ ಮತ್ತು `ಪೈಲ್ವಾನ್’ ಸಿನಿಮಾ ನಿರ್ದೇಶಕರಾದ ಕೃಷ್ಣ ಕೂಡ ಸ್ವೀಕರಿಸಿದ್ದಾರೆ. ಜೊತೆಗೆ ನಿರ್ಮಾಪಕ ಕಾರ್ತಿಕ್ ಕೂಡ ಚಾಲೆಂಜ್ ಸ್ವೀಕರಿಸಿದ್ದಾರೆ. ಕೃಷ್ಣ ಅವರು ಸವಾಲನ್ನು ಸ್ವೀಕರಿಸಿದ ನಂತರ ಸುದೀಪ್ ತಮ್ಮ ಶೂಟಿಂಗ್ ಮುಗಿಯುವಷ್ಟರಲ್ಲಿ ಐದು ಕೆಜಿ ತೂಕ ಕಡಿಮೆ ಮಾಡಿಕೊಳ್ಳಲು ತಿಳಿಸಿದ್ದಾರೆ.
Good morning all. Dear @KicchaSudeep sir I accept the challenge #phailwaaninyou I will post my pic after one month with some major change for sure.😀 Thanks sir. I was finding valid reason to go to gym. pic.twitter.com/s4ijxwbZIv
— Pavan Wadeyar (@PavanWadeyar) June 12, 2018
ThankU sir for the #BringOutThePailwaanInYou challenge & also d motivation. Challenge accepted. Back to workouts from last week. Hopefully will have a fitter selfie next month. I inturn challenge @YOGIGRAJ @SanthoshAnand15 @SimpleSuni @NarenDon & @SreekanthKP06 on d same pic.twitter.com/FKPsS3nbUt
— Karthik Gowda (@Karthik1423) June 12, 2018

Leave a Reply