ಹಿಜಬ್ ತೆಗೆಯಿರಿ ಅನ್ನೋದಕ್ಕೆ ಹೆತ್ತವರಿಗೆ ರೈಟ್ಸ್ ಇಲ್ಲ, ಅವನ್ಯಾವನು ಹೇಳೋಕೆ: ಶಿಕ್ಷಕರ ವಿರುದ್ಧ ವಿದ್ಯಾರ್ಥಿನಿಯರು ರೆಬೆಲ್

ಚಿಕ್ಕಮಗಳೂರು: ಹೆತ್ತವರಿಗೆ ಹಿಜಬ್ ತೆರೆಯಿರಿ ಎಂದು ಹೇಳೋದಕ್ಕೆ ಅಧಿಕಾರವಿಲ್ಲ. ಹೀಗಿರುವಾಗ ಅವನ್ಯಾವನು  ಹಿಜಬ್ ತೆಗೆಯಿರಿ ಎಂದು ಹೇಳೋದಕ್ಕೆ ಎಂದು ನಗರ ಹಾಗೂ ಮೂಡಿಗೆರೆ ತಾಲೂಕಿನಲ್ಲಿ ವಿದ್ಯಾರ್ಥಿನಿಯರು ಶಿಕ್ಷಕರ ವಿರುದ್ಧ ರೆಬೆಲ್ ಆಗಿದ್ದಾರೆ.

ಪೋಷಕರು ಹಿಜಬ್ ಹಾಕಿಕೊಂಡು ಬರುವುದಾದರೆ ಮಕ್ಕಳು ಶಾಲೆಗೆ ಬರುತ್ತಾರೆ. ಇಲ್ಲ ಕಳಿಸೋದಿಲ್ಲ ಎಂದು ಪೋಷಕರು ಕೂಡ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದಲೂ ನಾವು ಹಿಜಬ್ ಹಾಕಿಕೊಂಡು ಬರುತ್ತಿದ್ದೇವೆ. ಈಗ ಏಕೆ ತಪ್ಪು? ಹಿಜಬ್ ಹಾಕಿಕೊಂಡು ಬರುವುದಾದರೆ ಶಾಲೆಗೆ ಬರುತ್ತೇವೆ ಇಲ್ಲವಾದರೆ ಶಾಲೆಗೆ ಬರುವುದಿಲ್ಲ ಎಂದು ಮಕ್ಕಳು ಕೂಡ ಕಡ್ಡಿಮುರಿದಂತೆ ಹೇಳಿದ್ದಾರೆ.  ನಮ್ಮ ಮಕ್ಕಳು ಹಿಜಬ್ ಹಾಕಿಕೊಂಡು ಬರುವುದಾದರೆ ಶಾಲೆಗೆ ಕಳಿಸುತ್ತೇವೆ. ಇಲ್ಲವಾದರೆ ಮಕ್ಕಳನ್ನ ಶಾಲೆಗೆ ಕಳಿಸುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹೋಟೆಲ್‍ನಲ್ಲಿ ಊಟ, ತಿಂಡಿ ಸಪ್ಲೈಗೆ ಬಂತು ರೋಬೋ – ಮೈಸೂರಿನ ಜನತೆಯ ಮನಗೆದ್ದ ಸಪ್ಲೇಯರ್ ಲೇಡಿ

ಇಂದು ಜಿಲ್ಲೆಯಲ್ಲಿ ಹಿಜಬ್ ವಿವಾದ ತಾರಕಕ್ಕೇರಿತ್ತು. ಹಿಜಬ್ ಧರಿಸಿ ಬಂದ ಮಕ್ಕಳನ್ನ ಶಾಲಾ ಆಡಳಿತ ಮಂಡಳಿ ಹೊರಗೆ ನಿಲ್ಲಿಸಿತ್ತು. ಇದರಿಂದ ಸಿಟ್ಟಿಗೆದ್ದ ಮಕ್ಕಳು ಹಾಗೂ ಪೋಷಕರು ಶಾಲಾ ಆಡಳಿತ ಮಂಡಳಿ ವಿರುದ್ಧ ರೆಬಲ್ ಆಗಿದ್ದರು. ನಮಗೆ ಧರ್ಮವೇ ಮುಖ್ಯ. ನಾವು ಜೀವ ಹೋದರೂ ಇಸ್ಲಾಂ ಧರ್ಮದ ಯಾವುದೇ ಆಚರಣೆಯನ್ನೂ ಬಿಡೋದಿಲ್ಲ. ಹಿಜಬ್ ಹಾಕಿಕೊಂಡು ಬರುವುದಾದರೆ ಮಕ್ಕಳು ಶಾಲೆಗೆ ಬರುತ್ತಾರೆ. ಇಲ್ಲವಾದರೆ ಕಳಿಸೋದಿಲ್ಲ ಎಂದು ಪೋಷಕರು ಕೂಡ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಹಿಜಬ್ ಹೆಣ್ಣು ಮಕ್ಕಳ ರಕ್ಷಣೆ. ನಾಳೆ ಏನಾದರೂ ಹೆಚ್ಚು-ಕಮ್ಮಿಯಾದರೆ ಯಾವ ಪೊಲೀಸ್, ಕೋರ್ಟ್, ಕಾನೂನು ಬರೋದಿಲ್ಲ ಎಂದು ಪೋಷಕರು ಶಾಲಾ ಆಡಳಿತ ಮಂಡಳಿ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ತಾಲೂಕಿನ ಇಂದಾವರ ಗ್ರಾಮದ ಅಲ್ಪಸಂಖ್ಯಾತರ ಶಾಲೆಯಲ್ಲಿ 167 ಮಕ್ಕಳಿದ್ದಾರೆ. 153 ಮುಸ್ಲಿಂ ಸಮುದಾಯಕ್ಕೆ ಸೇರಿದ ಮಕ್ಕಳು. ಅದರಲ್ಲಿ 40 ಮಕ್ಕಳು ಎಸ್.ಎಸ್.ಎಲ್.ಸಿ. 40 ಮಕ್ಕಳಲ್ಲಿ ಸುಮಾರು 34 ಮಕ್ಕಳು ಹಿಜಬ್ ತೆಗೆದು 10ನೇ ತರಗತಿಯ ಪೂರ್ವ ಸಿದ್ಧತಾ ಪರೀಕ್ಷೆ ಬರೆದಿದ್ದಾರೆ. ಆದರೆ 10ನೇ ತರಗತಿ ಮಕ್ಕಳು ಜೊತೆ ಇತರೇ ತರಗತಿಯ ಸುಮಾರು 15 ಮಕ್ಕಳು ಹಿಜಬ್ ಹೋರಾಟಕ್ಕಿಳಿದಿದ್ದಾರೆ.

ಡಿಡಿಪಿಐ ಹಿಜಬ್ ಧರಿಸಿದ ಮಕ್ಕಳ ಮನವೊಲಿಸುವಾಗ ಮಕ್ಕಳು ಹಿಜಬ್ ಧರಿಸಿಕೊಂಡೇ ಶಾಲೆಯೊಳಗೆ ಹೋದರು. ಈ ವೇಳೆ ತರಗತಿಯಲ್ಲಿದ್ದ ಇತರೆ ಮಕ್ಕಳು ಅವರನ್ನ ಚಪ್ಪಾಳೆ ಮೂಲಕ ಸ್ವಾಗತಿಸಿಕೊಂಡರು. ಈ ಹಿಜಬ್ ಹಗ್ಗಜಗ್ಗಾಟದ ಮಧ್ಯೆ ನಗರದ ಇಂದಾವರ ಶಾಲೆಯಲ್ಲಿನ ಹಿಜಬ್ ಹೈಡ್ರಾಮಾ ನೋಡಿ ವಿದ್ಯಾರ್ಥಿಯೋರ್ವ ತನ್ನ ಬ್ಯಾಗಿನಲ್ಲಿದ್ದ ಕೇಸರಿ ಶಲ್ಯ ತೆಗೆದು ಕೈಗೆ ಸುತ್ತಿಕೊಂಡು ನಿಂತಿದ್ದ ಹಿಜಬ್-ಶಲ್ಯ ವಿವಾದ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡಿಸಿತ್ತು.

Comments

Leave a Reply

Your email address will not be published. Required fields are marked *