ಕಾಲೇಜಿಗೆ ಟೋಪಿ ಹಾಕಿ ಬಂದ ವಿದ್ಯಾರ್ಥಿ ಮೇಲೆ ಹಲ್ಲೆ: ಪ್ರಿನ್ಸಿಪಾಲ್ ಸೇರಿ 7 ಮಂದಿ ಮೇಲೆ FIR

ಬಾಗಲಕೋಟೆ: ಕಾಲೇಜಿಗೆ ಟೋಪಿ ಹಾಕಿಕೊಂಡು ಬಂದ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದ ಆರೋಪದ ಮೇಲೆ ಕಾಲೇಜು ಪ್ರಿನ್ಸಿಪಾಲ್, ಪಿಎಸ್‍ಎ, ಕಾನ್ಸ್‍ಟೇಬಲ್ ಸೇರಿ ಏಳು ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ಫೆಬ್ರವರಿ 18 ರಂದು ತೇರದಾಳ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿ ನವೀದ್ ಥರಥರಿ ಮುಸ್ಲಿಂ ಟೋಪಿ ಹಾಕಿಕೊಂಡು ಕಾಲೇಜಿಗೆ ಬಂದಿದ್ದನು. ಈ ಹಿನ್ನೆಲೆ ಅವನ ಮೇಲೆ ಹಲ್ಲೆ ಮಾಡಲಾಗಿತ್ತು. ಇದನ್ನು ಖಂಡಿಸಿ ನವೀದ್ ಥರಥರಿ ನ್ಯಾಯಾಲಯದ ಮೊರೆ ಹೋಗಿದ್ದ. ಪರಿಣಾಮ ಬನಹಟ್ಟಿಯ ಜೆಎಂಎಫ್‍ಸಿ ನ್ಯಾಯಾಲಯದ ಆದೇಶದನ್ವಯ ತೇರದಾಳ ಪೊಲೀಸ್ ಠಾಣೆಯಲ್ಲಿ ಏಳು ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ:  ಕೈ ನಾಯಕ ಸಿಧು ಹತ್ಯೆ ಮಾಡಿದ್ದು ನಾವೇ ಎಂದ ಕೆನಡಾದ ಗ್ಯಾಂಗ್‍ಸ್ಟಾರ್ 

ಫೆಬ್ರವರಿ ತಿಂಗಳಲ್ಲಿ ಹಿಜಬ್ ವಿವಾದ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿತ್ತು. ಇದೇ ಸಮಯಕ್ಕೆ ನವೀದ್ ಥರಥರಿ ಮುಸ್ಲಿಂ ಟೋಪಿ ಹಾಕಿಕೊಂಡು ಕಾಲೇಜಿಗೆ ಬಂದಿದ್ದ. ಈ ವೇಳೆ ನವೀದ್ ಮೇಲೆ ಪ್ರಿನ್ಸಿಪಾಲ್ ಸೇರಿ 7 ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿತ್ತು. ಹಲ್ಲೆ ನಂತರ ನವೀದ್ ಜಮಖಂಡಿ ಆಸ್ಪತ್ರೆಗೆ ದಾಖಲಾಗಿದ್ದ. ಈ ಹಿನ್ನೆಲೆ ನವೀದ್ ಘಟನೆಗೆ ಸಂಬಂಧಿಸಿದಂತೆ ಕೋರ್ಟ್ ಮೊರೆ ಹೋಗಿದ್ದ

ನವೀದ್ ಕೋರ್ಟ್ ಆದೇಶದನ್ವಯ ತೇರದಾಳ ಪಿಎಸ್‍ಐ ರಾಜು ಬೀಳಗಿ, ಪೊಲೀಸ್ ಕಾನಸ್ಟೇಬಲ್‍ಗಳಾದ ಗಣಿ ಪಿ.ಹೆಚ್.ಮಲ್ಲಿಕಾರ್ಜುನ್, ಕೆಂಚಣ್ಣವರ, ಎಸ್.ಬಿ.ಕಲಾಟೆ, ಎಸ್.ಸಿ.ಮದನಮಟ್ಟಿ, ಸನ್ನತ್ತಿ, ಪ್ರಿನ್ಸಿಪಾಲ್ ಅಣ್ಣಪ್ಪಯ್ಯ ಪೂಜಾರಿ ಸೇರಿದಂತೆ ಏಳು ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

Comments

Leave a Reply

Your email address will not be published. Required fields are marked *