ಬಂಕರ್‌ಗಳಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒದ್ದು ಅಪಾರ್ಟ್ಮೆಂಟ್‌ಗೆ ಕಳುಹಿಸುತ್ತಿದ್ದಾರೆ: ವಿದ್ಯಾರ್ಥಿ

ಕೀವ್: ಪಬ್ಲಿಕ್ ಬಂಕರ್‌ಗಳಲ್ಲಿ ಇರುವ ಭಾರತೀಯ ವಿದ್ಯಾರ್ಥಿಗಳನ್ನು ಒದ್ದು ವಾಪಸ್ ಅಪಾರ್ಟ್ಮೆಂಟ್‌ಗೆ ಕಳುಹಿಸುವ ಮೂಲಕ ಹಲ್ಲೆ ಎಸಗಲಾಗುತ್ತಿದೆ ಎಂದು ಉಕ್ರೇನ್‍ನಲ್ಲಿರುವ ಕರ್ನಾಟಕ ಮೂಲದ ವಿದ್ಯಾರ್ಥಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ವಿದ್ಯಾರ್ಥಿ ಪ್ರಸಾದ್ ಮಾತನಾಡಿ, ವಿಶ್ವಸಂಸ್ಥೆಯ ಭಾರತ ಉಕ್ರೇನ್‍ಗೆ ಬೆಂಬಲ ನೀಡಿರಲಿಲ್ಲ. ಇದರಿಂದಾಗಿ ಸಿಟ್ಟಾಗಿರುವ ಸ್ಥಳೀಯ ಉಕ್ರೇನ್ ಜನತೆ ಒದ್ದು ಅಪಾರ್ಟ್ಮೆಂಟ್‌ಗೆ ತೆರಳುವಂತೆ ಬೆದರಿಕೆ ಹಾಕುತ್ತಿದ್ದಾರೆ ಎಂದು ನೋವನ್ನು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಸ್ವಂತ ಸಾಮಾಜಿಕ ಮಾಧ್ಯಮ ಆ್ಯಪ್ ಬಿಡುಗಡೆ ಮಾಡಿದ ಟ್ರಂಪ್

ಇಲ್ಲಿರುವ ಹಾಸ್ಟೆಲ್ ಬಂಕರ್‌ಗಳಲ್ಲಿ ವಿದ್ಯಾರ್ಥಿಗಳು ಮಾತ್ರ ಸುರಕ್ಷಿತವಾಗಿದ್ದಾರೆ. ಉಳಿದವರೆಲ್ಲರೂ ಅಪಾರ್ಟ್ಮೆಂಟ್‌ನಲ್ಲಿದ್ದಾರೆ. ಮತ್ತೊಂದು ವಿಚಾರವೆಂದರೆ ಇಲ್ಲಿ ತಿನ್ನಲು ಊಟ ಸಿಗುತ್ತಿಲ್ಲ. ಕುಡಿಯಲು ನೀರು ಸಹ ಸಿಗದೇ ಟ್ಯಾಪ್‍ನಿಂದ ಬರುವ ನೀರನ್ನು ಬಿಸಿ ಮಾಡಿಕೊಂಡು ಕುಡಿಯುತ್ತಿದ್ದೇವೆ. ಹೊರಗಡೆ ಹೋಗಲು ಕೂಡಾ ಆಗುತ್ತಿಲ್ಲ. ಏಕೆಂದರೆ ಎಲ್ಲಿ ಸ್ಥಳೀಯ ಜನರು ನಮ್ಮ ಮೇಲೆ ಹಲ್ಲೆ ಮಾಡುತ್ತಾರೆ ಅನ್ನುವ ಭಯ ಕಾಡುತ್ತಿದೆ ಎಂದು ತಮ್ಮ ಅಳಲು ತೊಡಿಕೊಂಡರು.

ವಿದ್ಯಾರ್ಥಿ ಹೇಳಿದ್ದು ಏನು?
ಉಕ್ರೇನ್‍ನಿನ ಬಾರ್ಡರ್‍ನಲ್ಲಿಯೂ ಸಹ ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿದೆ ಅಂತ ಅಲ್ಲಿಯ ವಿದ್ಯಾರ್ಥಿಗಳು ನನಗೆ ವೀಡಿಯೋ ಮಾಡಿ ಬಿಡುತ್ತಿದ್ದಾರೆ. ರಷ್ಯಾ ಹಾಗೂ ಉಕ್ರೇನ ಯುದ್ದ ಪ್ರಾರಂಭಗೊಳ್ಳವ ಮುನ್ನ ಜನವರಿ 25ಕ್ಕೆ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕೃತ ಫೇಸ್ ಬುಕ್ ಪೇಜ್‍ನಿಂದ ಒಂದು ಫಾರಂ ಬಂದಿತ್ತು.

ಫಾರಂನಲ್ಲಿ ರಷ್ಯಾ ಗಡಿಯಲ್ಲಿ ಯಾವುದೇ ಯುದ್ಧ ನಡೆಯುವ ಸಂದರ್ಭ ಕಾಣುತ್ತಿಲ್ಲ. ಇಲ್ಲಿ ಪರಿಸ್ಥಿತಿ ತುಂಬಾ ಶಾಂತವಾಗಿದೆ. ಒಂದು ವೇಳೆ ಹಾಗೇನಾದರೂ ಯುದ್ಧ ನಡೆಯುವ ಸಂದರ್ಭ ಎದುರಾದರೆ ನಿಮ್ಮ ಸಹಾಯಕ್ಕೆ ನಾವು ಇದ್ದೇವೆ ಎಂದು ಹೇಳಿತ್ತು.

ಯುದ್ಧ ಪ್ರಾರಂಭವಾಗುವ ಮುನ್ನ ಭಾರತಕ್ಕೆ ಬರಬೇಕೆಂದರೆ ಆವಾಗಾಗಲೇ ಉಕ್ರೇನ್‍ನ ಎಲ್ಲ ನಾಗರಿಕ ವಿಮಾನಗಳು ಬುಕ್ ಆಗಿದ್ದವು. ಕೀವ್‍ನ ಬಾರ್ಡರ್‍ನಲ್ಲಿ ಸೇರಿರುವ ವಿದ್ಯಾರ್ಥಿಗಳನ್ನು ಹೊರಗಡೆ ಹೋಗಲಿಕ್ಕೆ ಬಿಡುತ್ತಿಲ್ಲ. ವಾಪಸ್ ಹೋಗಿ ಅಂತ ಹಲ್ಲೆ ಮಾಡುತ್ತಿದ್ದಾರೆ. ಈಗಾಗಲೇ ಬಹುತೇಕ ವಿದ್ಯಾರ್ಥಿಗಳು ಭಾರತಕ್ಕೆ ಹೋಗಿದ್ದಾರೆ. ಕೇವಲ ಪಾಕಿಸ್ತಾನ ಮತ್ತು ನೈಜಿರೀಯಾದ ಕೆಲ ವಿದ್ಯಾರ್ಥಿಗಳು ಮಾತ್ರ ಇಲ್ಲಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನ ಸಮುದ್ರ, ಭೂ-ಆಧಾರಿತ ಪ್ರದೇಶದ ಮೇಲೆ ರಷ್ಯಾ ದಾಳಿ!

ಕೀವ್ ಬಾರ್ಡರ್ ಬಿಟ್ಟು ಬೇರೆ ಬಾರ್ಡರ್‍ನಿಂದ ಈಗಾಗಲೇ ಕೆಲವೊಂದಿಷ್ಟು ವಿದ್ಯಾರ್ಥಿಗಳು ಪಾರಾಗಿದ್ದಾರೆ. ನಮಗೆ ಇಲ್ಲಿ ಪ್ರತೀ ಕ್ಷಣಕ್ಕೂ ಸತ್ತು ಬದುಕುತ್ತಿದ್ದೇವೆ. ಸ್ಥಳೀಯ ಜನರು ಯಾವಾಗ ನಮ್ಮ ಮೇಲೆ ದಾಳಿ ಮಾಡುತ್ತಾರೆ ಅನ್ನುವ ಭಯ ಕಾಡುತ್ತಿದೆ ಎಂದು ಭಯ ವ್ಯಕ್ತಪಡಿಸಿದರು. ?

ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ಖಂಡಿಸಿ ಶನಿವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ನಡೆದಿತ್ತು. ಅಮೆರಿಕ ಮತ್ತು ಆಲ್ಬೇನಿಯಾ ಸಂಯುಕ್ತವಾಗಿ ಮಂಡಿಸಿದ ನಿರ್ಣಯದ ಮೇಲೆ ಮತದಾನ ನಡೆದಿತ್ತು.

ಭಾರತ, ಚೀನಾ, ಯುಎಇ ದೇಶಗಳು ಮತದಾನದಿಂದ ದೂರ ಉಳಿದಿದ್ದರೆ ಪೆÇೀಲೆಂಡ್, ಇಟಲಿ, ನ್ಯೂಜಿಲೆಂಡ್ ಸೇರಿ 11 ದೇಶಗಳು ನಿರ್ಣಯದ ಪರವಾಗಿ ಮತ ಹಾಕಿವೆ. ರಷ್ಯಾ ದೇಶ ಊಹಿಸಿದಂತೆಯೇ ವಿಟೋ ಅಧಿಕಾರ ಚಲಾಯಿಸಿ, ನಿರ್ಣಯ ಪಾಸ್ ಆಗದಂತೆ ತಡೆದಿದೆ.

ಈ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ ಭಾರತದ ಶಾಶ್ವತ ರಾಯಭಾರಿ ತಿರುಮೂರ್ತಿ, ವಿವಾದ ಇತ್ಯರ್ಥಕ್ಕೆ ಚರ್ಚೆಯೊಂದೇ ಸಮಾಧಾನ. ಆದರೆ ಈ ಕ್ಷಣದಲ್ಲಿ ಅದು ಸಾಧ್ಯವಾಗಿಲ್ಲ. ಎರಡು ದೇಶಗಳು ರಾಜತಾಂತ್ರಿಕ ಮಾರ್ಗವನ್ನು ಕೈಬಿಟ್ಟಿದ್ದಕ್ಕೆ ವಿಷಾದವಿದೆ. ಸದ್ಯಕ್ಕೆ ಈ ಖಂಡನಾ ನಿರ್ಣಯದಿಂದ ದೂರ ಇರಲು ಭಾರತ ನಿರ್ಧರಿಸಿದೆ ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *