-ಸೋಶಿಯಲ್ ಮೀಡಿಯಾದಲ್ಲಿ ಯುವತಿ ಕಮಾಲ್
ಲಂಡನ್: ಯು.ಕೆ ಮೂಲದ ವಿದ್ಯಾರ್ಥಿನಿಯೊಬ್ಬಳು ಸಂದರ್ಶನದ ಟೆನ್ಶನ್‍ನಲ್ಲಿ ಫೆಬ್ರವರಿ ತಿಂಗಳಲ್ಲಿದ್ದ ಮೈಕ್ರೋಸಾಫ್ಟ್ ಸಂದರ್ಶನಕ್ಕೆ ತಿಂಗಳ ಮುಂಚೆಯೇ ತಯಾರಾಗಿ ಸದ್ಯ ಸಾಮಾಜಿಕ ಜಾಲತಾಣಗಲ್ಲಿ ಸುದ್ದಿಯಾಗಿದ್ದಾಳೆ.
ಲಾರಾ ಮ್ಯಾಕ್ಲೀನ್(21) ಯು.ಕೆನಲ್ಲಿ ಮ್ಯಾನೇಜ್‍ಮೆಂಟ್ ಮತ್ತು ಮಾರ್ಕೆಟಿಂಗ್ ವಿಷಯವನ್ನು ವ್ಯಾಸಂಗ ಮಾಡುತ್ತಿದ್ದಾಳೆ. ಇದೇ ಫೆಬ್ರವರಿ 18ರಂದು ಮೈಕ್ರೋಸಾಫ್ಟ್ ಕಂಪನಿಯು ಲಾರಾನನ್ನು ಕೆಲಸದ ಸಂದರ್ಶನಕ್ಕೆ ಆಫರ್ ನೀಡಿತ್ತು. ಹಾಗೆಯೇ ನಿಗದಿತ ದಿನಾಂಕದಂದು ಸ್ಕೈಪ್ ಮೂಲಕ ಕರೆಮಾಡಿ ಸಂದರ್ಶನ ಪಡೆಯಲಾಗುವುದು ಎಂದು ಸೂಚಿಸಿತ್ತು.
all dressed up ready n freaking out for my big skype interview with Microsoft and this happens. possibly the biggest noob on this planet hahahahaha if you don’t laugh you’ll cry pic.twitter.com/OKn2n8i39z
— laura maclean (@lauramacleann) January 18, 2019
ವಿದ್ಯಾರ್ಥಿನಿ ಸಂದರ್ಶನ ಟೆನ್ಶನ್‍ನಲ್ಲಿ ದಿನಾಂಕವನ್ನೇ ಮರೆತ್ತಿದ್ದಾಳೆ. ಹೌದು ಜನವರಿ 18 ದಿನಾಂಕವನ್ನೇ ಫೆಬ್ರವರಿ ಎಂದು ತಿಳಿದು ಲಾರಾ ತಯಾರಾಗಿದ್ದಳು. ಅಷ್ಟೆ ಅಲ್ಲದೆ ತನ್ನನ್ನು ಮೈಕ್ರೋಸಾಫ್ಟ್ ಸಂದರ್ಶನ ಮಾಡುವುದನ್ನು ಮರೆತಿದೆ ಎಂದು ಕಂಪನಿಗೆ ಇ-ಮೇಲ್ ಮಾಡಿ ಯಾಕೆ ಸಂದರ್ಶನ ಮಾಡಿಲ್ಲ ಅಂತ ಪ್ರಶ್ನಿಸಿದ್ದಾಳೆ. ಆಗ ಕಂಪನಿ ಸಿಬ್ಬಂದಿ ಪ್ರತಿಕ್ರಿಯಿಸಿ ಫೆಬ್ರವರಿ 18 ನಿಮ್ಮ ಸಂದರ್ಶನದ ಸಮಯ ನಿಗದಿಯಾಗಿದೆ ಎಂದಿದ್ದಾರೆ.
https://twitter.com/frawil66/status/1086479173407858688?ref_src=twsrc%5Etfw%7Ctwcamp%5Etweetembed%7Ctwterm%5E1086479173407858688&ref_url=https%3A%2F%2Fwww.ndtv.com%2Foffbeat%2Fstudent-shows-up-for-microsoft-job-interview-one-month-early-goes-viral-1983309
ಇಷ್ಟಕ್ಕೆ ಸುಮ್ಮನಾಗದ ಲಾರಾ ಮತ್ತೆ ಮೈಕ್ರೋಸಾಫ್ಟ್‍ಗೆ ರಿಪ್ಲೈ ಮಾಡಿ, ಇಂದೆ ಫೆಬ್ರವರಿ 18. ನೀವು ನಿಮ್ಮ ಕೆಲಸ ಮರೆತಿದ್ದಿರಾ. ನಾನು ಇಲ್ಲಿ ಕಾಯುತ್ತಿದ್ದೇನೆ. ನನಗೆ ಸ್ಕೈಪ್ ಕರೆ ಬಂದಿಲ್ಲ ಎಂದಿದ್ದಾಳೆ. ಬಳಿಕ ಮೈಕ್ರೋಸಾಫ್ಟ್ ಸಿಬ್ಬಂದಿಯೇ ವಿದ್ಯಾರ್ಥಿಗೆ ಇದು ಜನವರಿ ತಿಂಗಳು ಫೆಬ್ರವರಿ ಮುಂದೆ ಬರುತ್ತದೆ ಎಂದು ಬಿಡಿಸಿ ಹೇಳಿದ್ದಾರೆ. ಆಗ ವಿದ್ಯಾರ್ಥಿನಿಗೆ ತನ್ನ ಮೂರ್ಖತನದ ಅರಿವಾಗಿದೆ.
https://twitter.com/MicrosoftJobs/status/1088470866759802880?ref_src=twsrc%5Etfw%7Ctwcamp%5Etweetembed%7Ctwterm%5E1088470866759802880&ref_url=https%3A%2F%2Fwww.ndtv.com%2Foffbeat%2Fstudent-shows-up-for-microsoft-job-interview-one-month-early-goes-viral-1983309
ನಂತರ ನಾನು ಸಂದರ್ಶನಕ್ಕೆ ರೆಡಿಯಾಗಿದ್ದೆ, ಫುಲ್ ಡ್ರೆಸ್ ಮಾಡಿಕೊಂಡು ಕಾಯ್ತಿದ್ದೆ. ಆಗ ಹೀಗಾಯಿತು ಅಂತ ಮೈಕ್ರೋಸಾಫ್ಟ್ ಅವರಿಗೆ ಮಾಡಿದ ಇ-ಮೇಲ್ ಫೋಟೋವನ್ನು ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾಳೆ.
ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವಿದ್ಯಾರ್ಥಿಯ ಅವಸ್ಥೆಯನ್ನು ನೋಡಿ ಟ್ರೋಲ್ ಮಾಡುತ್ತಿದ್ದಾರೆ. ಈವರೆಗೆ ಈ ಫೋಸ್ಟ್‍ಗೆ ಸುಮಾರು 1.8 ಲಕ್ಷ ಮಂದಿ ಲೈಕ್ ಮಾಡಿದ್ದು, 35 ಸಾವಿರ ಮಂದಿ ರೀ-ಟ್ವೀಟ್ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/

Leave a Reply