ಕ್ಲಾಸ್‍ನಲ್ಲಿ ಹುಡುಗಿಯನ್ನ ಗುರಾಯಿಸಿದನೆಂದು ಸಹಪಾಠಿಗಳಿಂದಲೇ 10ನೇ ತರಗತಿ ಬಾಲಕನ ಕೊಲೆ!

ಮುಂಬೈ: 10ನೇ ತರಗತಿ ಬಾಲಕನನ್ನು ಸಹಪಾಠಿಗಳೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಬುಧವಾರದಂದು ನಡೆದಿದೆ.

ಮೃತ ಬಾಲಕನ ಸಹಪಾಠಿಗಳಾದ ಇಬ್ಬರು ವಿದ್ಯಾರ್ಥಿಗಳು ಕೃತ್ಯ ನಡೆದ ನಂತರ ಶಾಲೆಗೆ ಗೈರಾಗಿದ್ದರು. ಅವರಿಬ್ಬರನ್ನು ಬಂಧಿಸಿದ್ದು, ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಬಾಲಕ ತನ್ನ ತರಗತಿಯಲ್ಲಿ ಹುಡುಗಿಯೊಬ್ಬಳನ್ನ ಗುರಾಯಿಸಿದ್ದಕ್ಕೆ ಆರೋಪಿ ವಿದ್ಯಾಥಿಗಳು ವಿರೋಧಿಸಿದ್ದು, ಕುಡುಗೋಲಿನಿಂದ ದಾಳಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳಲ್ಲಿ ಒಬ್ಬ ಅಪ್ತಾಪ್ತನಾಗಿದ್ದು, ಮತ್ತೊಬ್ಬನಿಗೆ 20 ವರ್ಷ ವಯಸ್ಸು. ಶಾಲೆಯಲ್ಲಿ ಅಂದು 10ನೇ ತರಗತಿಯವರಿಗೆ ಪ್ರಾಕ್ಟಿಕಲ್ ಟೆಸ್ಟ್ ನಿಗದಿಯಾಗಿತ್ತು. ಆದ್ರೆ ಅದಕ್ಕೂ ಮುಂಚೆ ಶಾಲೆಯ ಕಂಪ್ಯೂಟರ್ ರೂಮಿನ ಬಳಿ ಆರೋಪಿಗಳಿಬ್ಬರೂ ಕುಡುಗೋಲಿನಿಂದ 16 ವರ್ಷದ ಬಾಲಕನ ಮೇಲೆ ದಾಳಿ ಮಾಡಿದ್ದಾರೆ. ಬಾಲಕನನ್ನು ಶಾಲೆಯವರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದ ಎಂದು ಅವರು ಹೇಳಿದ್ದಾರೆ.

ಘಟನೆ ನಡೆದ ದಿನದಿಂದ ಇಬ್ಬರು ಬಾಲಕರು ನಾಪತ್ತೆಯಾಗಿದ್ದರಿಂದ ಈ ಕೃತ್ಯದಲ್ಲಿ ಅವರ ಪಾತ್ರವಿರಬಹುದೆಂದು ಶಂಕಿಸಲಾಗಿತ್ತು. ಅವರಿಬ್ಬರೂ ಪ್ರಾಕ್ಟಿಕಲ್ ಪರೀಕ್ಷೆಗೂ ಹಾಜರಾಗಿರಲಿಲ್ಲ ಎಂದು ನಾಟೆಪುಟೆ ಪೊಲೀಸ್ ಠಾಣೆಯ ಇನ್ ಚಾರ್ಜ್ ರಾಜ್‍ಕುಮಾರ್ ಭುಜ್ಪಾಲ್ ಹೇಳಿದ್ದಾರೆ.

ಹುಡುಗಿಯೊಬ್ಬಳನ್ನು ಗುರಾಯಿಸುತ್ತಿದ್ದ ಎಂದು ಆರೋಪಿಸಿದ ನಂತರ ಇಬ್ಬರು ಆರೋಪಿಗಳು ಹಾಗೂ 16ರ ಬಾಲಕನ ನಡುವೆ ಜಗಳ ನಡೆದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *