ಅತ್ಯಾಚಾರ ಪ್ರಕರಣ ತಡೆಗೆ ವಿದ್ಯಾರ್ಥಿಯಿಂದ ರಾಜ್ಯಾದ್ಯಂತ ಸೈಕಲ್ ಜಾಥಾ

ರಾಯಚೂರು: ಅತ್ಯಾಚಾರ ಕಿರುಕುಳದಿಂದ ಮಹಿಳೆಯರನ್ನ ರಕ್ಷಿಸಿ ಎಂಬ ಜಾಗೃತಿಯನ್ನು ಮೂಡಿಸಸಲು ಪ್ರಥಮ ಬಿ.ಎ ಪದವಿ ವಿದ್ಯಾರ್ಥಿಯೋರ್ವ ರಾಜ್ಯಾದ್ಯಂತ ಸೈಕಲ್ ಜಾಥಾ ನಡೆಸುತ್ತಿದ್ದಾರೆ.

ಸೈಕಲ್ ಜಾಥಾದ ಭಾಗವಾಗಿ ರಾಯಚೂರು ಜಿಲ್ಲಾಧಿಕಾರಿ ಕಚೇರಿಗೆ ಬಂದ ವಿದ್ಯಾರ್ಥಿ ಕಿರಣ್ ವಿ. ಅತ್ಯಾಚಾರ ಪ್ರಕರಣಗಳು ನಡೆಯದಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೆಳ್ಳಿ ಪದಕ ಗೆದ್ದ ಪ್ರವೀಣ್ ಕುಮಾರ್‌ಗೆ ಮೋದಿ ವಿಶ್

ಬೆಂಗಳೂರಿನ ಬನ್ನೇರುಘಟ್ಟದ ಬಸವನಪುರದ ಕಿರಣ್ ವಿ. ಆಗಸ್ಟ್ 22 ರಂದು ಬೆಂಗಳೂರಿನಿಂದ ಆರಂಭಿಸಿದ್ದಾರೆ. 3500 ಕಿಮೀ ಸೈಕ್ಲಿಂಗ್ ಮೂಲಕ ರಾಜ್ಯದ ಎಲ್ಲಾ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ಇದುವರೆಗೆ ಆರು ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಿ ರಾಯಚೂರಿನಲ್ಲಿ ಸೈಕ್ಲಿಂಗ್ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಇದನ್ನೂ ಓದಿ: ಶೂಟಿಂಗ್‍ನಲ್ಲಿ ಕಂಚು – ಭಾರತದ ಪರ ದಾಖಲೆ ಬರೆದ ಅವನಿ

ಮೈಸೂರಿನಲ್ಲಿ ನಡೆದ ಘಟನೆ ಮತ್ತೆ ಮರುಕಳಿಸಬಾರದು ಮಹಿಳೆಯರಿಗೆ ರಕ್ಷಣೆ ಸಿಗಬೇಕು ಅನ್ನೋ ಉದ್ದೇಶದಿಂದ ಸೈಕಲ್ ಜಾಥಾ ನಡೆಸುತ್ತಿರುವುದಾಗಿ ಕಿರಣ್ ಹೇಳಿದ್ದಾರೆ. ಸೈಕಲ್ ಜಾಥ ಮೂಲಕ ರಾಯಚೂರು ಜಿಲ್ಲಾಧಿಕಾರಿ ಕಚೇರಿಗೆ ಬಂದ ಕಿರಣ್ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಿರಣ್‍ನನ್ನ ಸನ್ಮಾನಿಸಿ ಮುಂದೆ ಯಾದಗಿರಿ ಜಿಲ್ಲೆಗೆ ಕಳುಹಿಸಿಕೊಟ್ಟಿದ್ದಾರೆ.

Comments

Leave a Reply

Your email address will not be published. Required fields are marked *