ಗಮನಿಸಿ- ಕೆಐಎಎಲ್‍ನ ವಾಹನಗಳ ಸಂಚಾರ ಮಾರ್ಗದಲ್ಲಿ ಬದಲಾವಣೆ

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಮುಖ ರಸ್ತೆ ಜೂನ್ 10 ರಿಂದ ಮುಚ್ಚಲಾಗುತ್ತಿದೆ.

ವಿಮಾನ ನಿಲ್ದಾಣದ ನಾಲ್ಕು ಪಥದ ಮುಖ್ಯರಸ್ತೆಯನ್ನು ಹತ್ತು ಪಥಗಳಾಗಿ ವಿಸ್ತರಣೆ ಮಾಡುವ ಉದ್ದೇಶದಿಂದ ಮುಖ್ಯ ಸಂಪರ್ಕ ರಸ್ತೆಯನ್ನು ಬಂದ್ ಮಾಡಲಾಗುತ್ತಿದೆ. ಇದಲ್ಲದೆ ಕಾರ್ಗೋ ಟರ್ಮಿನಲ್ ಕಡೆಗೆ ಸಾಗುವ ಮತ್ತೊಂದು ರಸ್ತೆಯನ್ನು ಇದೇ ವರ್ಷದಲ್ಲಿ ನಾಲ್ಕು ಪಥದ ರಸ್ತೆಯಾಗಿ ವಿಸ್ತರಣೆ ಮಾಡಲಾಗುವುದು.

ಬೆಂಗಳೂರು ಮಹಾನಗರದಿಂದ ವಿಮಾನ ನಿಲ್ದಾಣಕ್ಕೆ ಎಂಟ್ರಿ ಕೊಡುವ ವಾಹನಗಳು ಟ್ರಂಪೇಂಟ್ ಇಂಟರ್ ಚೇಂಜ್ ನಂತರ ಮೊದಲ ವೃತ್ತದಲ್ಲಿ ಬಲಕ್ಕೆ ತಿರುಗಿ ಎಸ್‍ಎಆರ್ ಪ್ರವೇಶದ ಮೂಲಕ ಎರಡನೇ ಟರ್ಮಿನಲ್ ಕಡೆಗೆ ನೂತನವಾಗಿ ನಿರ್ಮಾಣ ಆಗಿರುವ ಆರು ಪಥದ ರಸ್ತೆ ಮೂಲಕ ವಿಮಾನ ನಿಲ್ದಾಣವನ್ನು ತಲುಪಬಹುದಾಗಿದೆ.

ಇದೇ ಜೂನ್ 10 ರಿಂದ ನೂತನ ಮಾರ್ಗದ ಬದಲಾವಣೆಗಳು ಅನ್ವಯವಾಗಲಿವೆ. ಮತ್ತೊಂದೆಡೆ 2021ಕ್ಕೆ 10 ಪಥದ ರಸ್ತೆ ಕಾಮಗಾರಿ ಮುಗಿಯಲಿದ್ದು, ಎಂದಿನಂತೆ ನೇರವಾದ ಮುಖ್ಯ ಸಂಪರ್ಕ ರಸ್ತೆ ಪ್ರಯಾಣಿಕರ ಸೇವೆಗೆ ಲಭ್ಯವಾಗಬಹುದು ಎನ್ನಲಾಗಿದೆ.

Comments

Leave a Reply

Your email address will not be published. Required fields are marked *